For Quick Alerts
  ALLOW NOTIFICATIONS  
  For Daily Alerts

  ಯುವರಾಜ್ ಸಿಂಗ್‌ ಹಳೆ ಗೆಳತಿಯ ಒಂದು ಮದುವೆ ಹಲವು ಪ್ರೇಮ ಪುರಾಣಗಳು!

  By ರವೀಂದ್ರ ಕೋಟಕಿ
  |

  ಕ್ರಿಕೆಟ್ ಮತ್ತು ಬಾಲಿವುಡ್ ಮಧ್ಯೆ ಇರುವ ಸಂಬಂಧ ದಶಕಗಳ ಹಳೆಯದು. ಮಾಜಿ ಕ್ರಿಕೆಟ್ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ, ಶರ್ಮಿಳಾ ಟ್ಯಾಗೋರ್ ಇಂದ ಹಿಡಿದು ಇಂದಿನ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ತನಕ ಕ್ರಿಕೆಟ್-ಬಾಲಿವುಡ್ ಮಧ್ಯೆ ಮದುವೆಯ ಸಂಬಂಧಗಳು ಅನೇಕವು ಏರ್ಪಟ್ಟಿವೆ. ಇನ್ನೊಂದೆಡೆ ಮದುವೆವರೆಗೂ ಬಂದು ಮುರಿದುಹೋದ ಸಂಬಂಧಗಳ ಬಗ್ಗೆ ಬೆಳಕು ಹರಿಸಿದರೆ ರವಿಶಾಸ್ತ್ರಿ-ಅಮೃತಾ ಸಿಂಗ್, ಸೌರವ್ ಗಂಗೂಲಿ-ನಗ್ಮಾ ಹೀಗೆ ಬ್ರೇಕಪ್ ಜೋಡಿಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ.

  ಇದರ ಮಧ್ಯೆ ಕೆಲವು ಗಾಸಿಪ್‌ಗೆ ತುತ್ತಾದ ಅಥವಾ ಹಾಗೆ ಸುತ್ತಾಡಿ ಹೀಗೆ ಮರೆಯಾದ ಕೆಲವು ಜೋಡಿಗಳು ಕೂಡ ಇವೆ. ಇದರಲ್ಲಿ ಒಂದು ಮುಖ್ಯವಾದ ಜೋಡಿ ಅಂದರೆ ಕಿಮ್ ಶರ್ಮಾ ಹಾಗೂ ಯುವರಾಜ್ ಸಿಂಗ್.

  ಯುವಿ ಬ್ಯಾಟಿಂಗ್‌ಗೆ ಕ್ಲೀನ್ ಬೋಲ್ಡ್ ಆದ ಬೆಡಗಿಯರುಯುವಿ ಬ್ಯಾಟಿಂಗ್‌ಗೆ ಕ್ಲೀನ್ ಬೋಲ್ಡ್ ಆದ ಬೆಡಗಿಯರು

  1993 ರಲ್ಲಿ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತೆರೆಗೆ ಬಂದ 'ಮೊಹಬ್ಬತೆನ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಕಿಮ್ ತನ್ನ ಹಾಟ್ ಹಾವಭಾವ ಭಂಗಿಗಳಿಂದಲೇ ಗಮನ ಸೆಳೆದವಳು. ನಟನೆಗಿಂತ ಹೆಚ್ಚಾಗಿ ಗ್ಲಾಮರ್ ಮೂಲಕವೇ ಅವಕಾಶಗಳನ್ನು ಪಡೆದ ಕಿಮ್ ಮೂಲತಃ ಮಾಡೆಲ್ ಆಗಿದ್ದಳು. ಕ್ಲೋಸ್‌ಅಪ್‌ ಟೂತ್‌ಪೇಸ್ಟ್, ಸನ್ ಸಿಲ್ಕ್, ಫೇರ್ ಅಂಡ್ ಲವ್ಲಿ ಜಾಹೀರಾತುಗಳ ಮೂಲಕ ಬಾಲಿವುಡ್ ಮಂದಿಯ ಗಮನ ಸೆಳೆದವಳು. ಮುಂದೆ ಓದಿ...

  ಚಿತ್ರರಂಗದಿಂದ ದೂರವಾದ ಕಿಮ್?

  ಚಿತ್ರರಂಗದಿಂದ ದೂರವಾದ ಕಿಮ್?

  ಬಾಲಿವುಡ್‌ನಲ್ಲಿ ಮುಂದೆ ಹೆಚ್ಚಿನ ಅವಕಾಶಗಳು ಸಿಗದೇ ಹೋದಾಗ ಟಾಲಿವುಡ್ ಕಡೆಗೆ ಮುಖ ಮಾಡಿದ ಈ ಹಾಟ್ ಬೆಡಗಿ ತೆಲುಗಿನ ಖ್ಯಾತ ಚಲನಚಿತ್ರ ನಿರ್ದೇಶಕರಾದ ಕೃಷ್ಣವಂಶಿ ಅವರ ನಿರ್ದೇಶನದಲ್ಲಿ 2002ರಲ್ಲಿ ಮೂಡಿಬಂದ 'ಖಡ್ಗಮ್' ಮೂಲಕ ಗಮನ ಸೆಳೆದಳು. ಮುಂದೆ ರಾಜಮೌಳಿ ನಿರ್ದೇಶನದ 'ಮಗಧೀರ' ಚಿತ್ರದಲ್ಲಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡ ಕಿಮ್ ಶರ್ಮಾ ಮುಂದೆ ಚಲನಚಿತ್ರಗಳಿಂದ ದೂರವೇ ಉಳಿದಿದ್ದಾಳೆ.

  ಯುವರಾಜ್ ಜೊತೆ ಲವ್, ಬ್ರೇಕ್ ಅಪ್

  ಯುವರಾಜ್ ಜೊತೆ ಲವ್, ಬ್ರೇಕ್ ಅಪ್

  ಸಿನಿಮಾ ಹೊರತಾಗಿ ಈಕೆ ಹೆಚ್ಚಾಗಿ ಗಮನ ಸೆಳೆದಿದ್ದು ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆಗಿನ ಪ್ರೇಮ ಪ್ರಕರಣದ ಮೂಲಕ. ಈ ಜೋಡಿಯ ಮದುವೆಗೆ ಅಡ್ಡಿ ಆಗಿದ್ದು ಕೆಲವು ಮೂಲಗಳ ಪ್ರಕಾರ ಯುವರಾಜ್ ಅವರ ತಾಯಿ. ಯುವರಾಜ್ ಸಿಂಗ್ ಜೊತೆಗಿನ ಲವ್ ಬ್ರೇಕಪ್ ಆದನಂತರ ಸಿನಿಮಾರಂಗದಿಂದ ದೂರ ಸರಿದ ಕಿಮ್ 2010ರಲ್ಲಿ ಭಾರತೀಯ ಮೂಲದ ಕೀನ್ಯಾ ಉದ್ಯಮಿ ಅಲಿ ಪಂಜನೀ ಅವರನ್ನು ಮದುವೆಯಾದರು. ಆದರೆ ಈ ವಿವಾಹ ಕೂಡ ಹೆಚ್ಚುಕಾಲ ಮುಂದುವರಿಯಲಿಲ್ಲ. 2016 ರಲ್ಲಿ ಪಂಜನೀಯಿಂದ ವಿಚ್ಛೇದನ ಪಡೆದ ಇಂದ ದೂರವಾಗಿರುವ ಕಿಮ್ ಶರ್ಮಾ ಈಗಲೂ ಕೂಡ ಇನ್ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದು ತನ್ನ ಹಾಟ್ ಫೋಟೋಗಳನ್ನು ಆಗಾಗ ಅಪ್ಲೋಡ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಕೆಡಿಸುತ್ತಿದ್ದಾಳೆ.

  ಲಿಯಾಂಡರ್ ಪೇಸ್ ಜೊತೆ ಡೇಟಿಂಗ್

  ಲಿಯಾಂಡರ್ ಪೇಸ್ ಜೊತೆ ಡೇಟಿಂಗ್

  ಕಿಮ್ ಪ್ರೇಮ ಪ್ರಕರಣಗಳು ಇಲ್ಲಿಗೆ ನಿಲ್ಲುವುದಿಲ್ಲ ಸ್ಪ್ಯಾನಿಶ್ ಗಾಯಕ

  ಕಾರ್ಲಸ್ ಮೆರಿನ್ ಜೊತೆಗೊಂದು ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಳು. ಇದು ಮುರಿದ ಮೇಲೆ ಅನಂತರ ಅರ್ಜುನ್ ಖನ್ನ ಜೊತೆಗಿನ ಒಂದಷ್ಟು ತಿಂಗಳ ಕಾಲ ಡೇಟಿಂಗ್ ಕೂಡ ನಡೆಸಿದಳು. ಮುಂದೆ ಹರ್ಷವರ್ಧನ್ ರಾಣಿ ಜೊತೆಗಿನ ಪ್ರೇಮ ಪ್ರಕರಣ ಕೊನೆಗೊಂಡ ಮೇಲೆ ಈಗ ಈಕೆಯ ಹೆಸರು ಮಾಜಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜೊತೆಗೆ ತಳುಕು ಹಾಕಿಕೊಂಡಿದೆ. ಕೆಲ ತಿಂಗಳುಗಳ ಹಿಂದೆ ಇವರಿಬ್ಬರು ಗೋವಾದಲ್ಲಿ ಸುತ್ತಾಡಿದ ಫೋಟೋಗಳು ಸಕ್ಕತ್ ಸುದ್ದಿಯಾಗಿತ್ತು.

  ಮತ್ತೆ ಮದುವೆ ಆಗ್ತಾಳಾ?

  ಮತ್ತೆ ಮದುವೆ ಆಗ್ತಾಳಾ?

  ಒಟ್ಟಾರೆ ಒಂದು ಮದುವೆ ಹಲವು ಪ್ರೇಮ ಪ್ರಕರಣಗಳ ನಂತರ ಈಗಲೂ ಉಳಿದಿರುವ ಪ್ರಶ್ನೆ ಕಿಮ್ ಶರ್ಮಾ ಮತ್ತೆ ಮದುವೆಯಾಗುತ್ತಾಳೆ? ಅಥವಾ ಇನ್ನೊಂದು ಪ್ರೇಮ ಪ್ರೇಮ ಪ್ರಕರಣದಂತೆ ಇದು ಕೂಡ ಮುಕ್ತಾಯವಾಗುತ್ತದೆಯೋ? ಕಾಲವೇ ಉತ್ತರಿಸಬೇಕು.

  English summary
  Bollywood Actress Kim Sharma Love Affairs: 6 men Kim Sharma dated including cricketer Yuvraj singh and married one.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X