twitter
    For Quick Alerts
    ALLOW NOTIFICATIONS  
    For Daily Alerts

    ಲತಾ ಮಂಗೇಶ್ಕರ್‌ ಜೀವನದ ಬಗ್ಗೆ ಅರಿಯದ ಸತ್ಯಗಳು

    |

    ನಿನ್ನೆಯಷ್ಟೆ ನಿಧನರಾದ ಗಾಯಕಿ ಲತಾ ಮಂಗೇಶ್ಕರ್ ಭಾರತದ ಮೊದಲ ಪ್ರಧಾನಿಯಿಂದ ಹಿಡಿದು ಈಗಿನ ನರೇಂದ್ರ ಮೋದಿವರೆಗೂ ಎಲ್ಲರನ್ನೂ ಕಂಡಿದ್ದಾರೆ. ಬಾಲಿವುಡ್ ಪ್ರಾರಂಭವಾಗಿದ್ದನ್ನು, ಬದಲಾಗಿದ್ದನ್ನು ಕಂಡಿದ್ದಾರೆ. ಬಾಲಿವುಡ್ ಮಾತ್ರವನ್ನು ಭಾರತ ಸ್ವಾತಂತ್ರ್ಯ ಹೊಂದಿದ್ದನ್ನು ಅದು ಪ್ರಗತಿ ಸಾಧಿಸಿದ ರೀತಿಯನ್ನು ಕಂಡಿದ್ದಾರೆ.

    92 ವರ್ಷಕ್ಕೆ ನಿಧನರಾದ ಲತಾ ಮಂಗೇಶ್ಕರ್‌ ತಮ್ಮ ಹದಿಮೂರನೇ ವಯಸ್ಸಿನಿಂದಲೇ ಹಾಡಲು ಆರಂಭಿಸಿದ್ದರು. ಸರಿ ಸುಮಾರು 70 ದಶಕಗಳ ಹಿನ್ನೆಲೆ ಗಾಯನದ ಅನುಭವ ಅವರದ್ದು. ಇಷ್ಟು ಸುದೀರ್ಘ ವರ್ಷ ನಮ್ಮಗಳ ನಡುವೆ ಇದ್ದರೂ ಇರದಂತಿದ್ದ, ಕೇವಲ ತಮ್ಮ ಧ್ವನಿಯ ಮೂಲಕವಷ್ಟೆ ಹೆಚ್ಚು ಪರಿಚಿತರಾಗಿದ್ದ ಲತಾ ಮಂಗೇಶ್ಕರ್‌ ಅವರ ಜೀವನದ ಬಗ್ಗೆ ಹಲವು ಆಸಕ್ತಿಕರ ಸಂಗತಿಗಳು ಹೆಚ್ಚು ಬೆಳಕಿಗೆ ಬರಲೇ ಇಲ್ಲ.

    ಲತಾ ಮಂಗೇಶ್ಕರ್ ಅವರ ಇಷ್ಟು ವರ್ಷಗಳ ಸುಧೀರ್ಘ ಜೀವನದಲ್ಲಿ ಹಲವು ಆಸಕ್ತಿಕರ ಅಂಶಗಳು ಅಡಕವಾಗಿವೆ. ಹೆಚ್ಚು ಜನರಿಗೆ ತಿಳಿಯದ ಲತಾ ಮಂಗೇಶ್ಕರ್‌ ಬಗೆಗಿನ ಕೆಲವು ಮಾಹಿತಿಗಳು ಇಲ್ಲಿ ನಿಮ್ಮ ಓದಿಗಾಗಿ...

    ನಟನೆಯಿಂದ ವೃತ್ತಿ ಆರಂಭಿಸಿದ್ದ ಲತಾ

    ನಟನೆಯಿಂದ ವೃತ್ತಿ ಆರಂಭಿಸಿದ್ದ ಲತಾ

    ಲತಾ ಮಂಗೇಶ್ಕರ್‌ ಅವರ ನಿಜವಾದ ಹೆಸರು ಹೇಮಾ ಮಂಗೇಶ್ಕರ್. 1942 ರಲ್ಲಿ ಲತಾ ಅವರ ತಂದೆ ದೀನಾನಾಥ್ ಮಂಗೇಶ್ಕರ್ ನಿಧನರಾದಾಗ ತಮ್ಮ ಕುಟುಂಬಕ್ಕೆ ಸಹಾಯ ಮಾಡಲೆಂದು ಲತಾ ಮಂಗೇಶ್ಕರ್ ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಎಂಟು ಸಿನಿಮಾಗಳಲ್ಲಿ ಲತಾ ಮಂಗೇಶ್ಕರ್ ಪಾತ್ರ ವಹಿಸಿದ್ದರು ಆದರೆ ನಟನೆ ಲತಾ ಅವರ ಕೈ ಹಿಡಿಯಲಿಲ್ಲ. ಅವರ ಕೈ ಹಿಡಿದಿದ್ದು ಸಂಗೀತ.

    ಮೆದು ಧ್ವನಿಯಿಂದಾಗಿ ನಿರಾಕರಣೆ

    ಮೆದು ಧ್ವನಿಯಿಂದಾಗಿ ನಿರಾಕರಣೆ

    ಲತಾ ಮಂಗೇಶ್ಕರ್‌ ಅವರದ್ದು ಸಾಮಾನ್ಯವಾದ ದನಿಯಲ್ಲ. ಅವರದ್ದು ಮೆದು ಧ್ವನಿ. ಇದೇ ಕಾರಣಕ್ಕೆ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಲತಾ ಮಂಗೇಶ್ಕರ್‌ ಅವಕಾಶ ನಿರಾಕರಿಸಲ್ಪಟ್ಟಿದ್ದರು. ಲತಾಗೆ ಮುನ್ನ ಷಮ್ಶೇದ್ ಬೇಗಮ್ ಹಾಗೂ ನೂರ್ ಜಹಾನ್ ಅವರುಗಳು ತಮ್ಮ ಎತ್ತರದ ಧ್ವನಿಯಿಂದ ಮೋಡಿ ಮಾಡಿದ್ದರು. ಹಾಗಾಗಿ ಮೆದು ಧ್ವನಿ ಹೊಂದಿದ್ದ ಲತಾ ಮಂಗೇಶ್ಕರ್‌ ಅವರು ಆರಂಭದಲ್ಲಿ ಕೆಲವು ನಿರಾಕರಣೆಗಳನ್ನು ಎದುರಿಸಬೇಕಾಯಿತು. 1949 ರಲ್ಲಿ ಬಿಡುಗಡೆ ಆದ 'ಆನೇಗಾ ಆನೇವಾಲಾ' ಹಾಡು ಲತಾ ಅವರ ಭವಿಷ್ಯವನ್ನೇ ಬದಲಾಯಿಸಿತು.

    ಒಂದು ದಿನವಷ್ಟೆ ಶಾಲೆಗೆ ಹೋಗಿದ್ದ ಲತಾ

    ಒಂದು ದಿನವಷ್ಟೆ ಶಾಲೆಗೆ ಹೋಗಿದ್ದ ಲತಾ

    ದೇಶದ ಹಲವು ಭಾಷೆಗಳಲ್ಲಿ ಹಾಡು ಹಾಡುವ, ಕಠಿಣಾತಿ ಕಠಣ ಹಿಂದಿ, ಉರ್ದು ಹಾಗೂ ಇತರೆ ಭಾಷೆಗಳ ಶಬ್ದಗಳನ್ನು ಲೀಲಾಜಾಲವಾಗಿ ಉಚ್ಛರಿಸುವ ಲತಾ ಮಂಗೇಶ್ಕರ್‌ ಶಾಲೆಗೆ ಹೋಗಿದ್ದು ಕೇವಲ ಒಂದು ದಿನ ಮಾತ್ರ! ಹೌದು ಲತಾ ಮಂಗೇಶ್ಕರ್‌ ಶಾಲೆಯ ಶಿಕ್ಷಣವನ್ನೇ ಪಡೆದಿಲ್ಲ. ಮೊದಲ ದಿನ ತನ್ನ ತಂಗಿ ಆಶಾ ಭೋಂಸ್ಲೆಯನ್ನು ಬಗಲಲ್ಲಿ ಕೂರಿಸಿಕೊಂಡು ಶಾಲೆಗೆ ಹೋಗಿದ್ದ ಲತಾ, ಆಗ ಶಿಕ್ಷಕರು ಮಗುವನ್ನು ಕರೆದುಕೊಂಡು ಶಾಲೆಗೆ ಬರಬಾರದೆಂದು ಬೈದರಂತೆ. ಹಾಗಾಗಿ ಮಾರನೇಯ ದಿನದಿಂದ ಶಾಲೆಗೆ ಹೋಗಲೇ ಇಲ್ಲ ಲತಾ ಮಂಗೇಶ್ಕರ್.

    ಲತಾಗೆ ಅಪಮಾನ ಮಾಡಿದ್ದ ದಿಲೀಪ್ ಕುಮಾರ್

    ಲತಾಗೆ ಅಪಮಾನ ಮಾಡಿದ್ದ ದಿಲೀಪ್ ಕುಮಾರ್

    ಜನಪ್ರಿಯ ಗಾಯಕ ದಿಲೀಪ್ ಕುಮಾರ್ ಒಮ್ಮೆ ಲತಾ ಮಂಗೇಶ್ಕರ್‌ಗೆ ಅಪಮಾನ ಮಾಡಿದ್ದರು. ಲತಾ ಅವರನ್ನು ರೈಲಿನಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದ ದಿಲೀಪ್ ಕುಮಾರ್. ಲತಾರ ಮರಾಠಿ ಮಿಶ್ರಿತ ಹಿಂದಿಯ ಬಗ್ಗೆ ಹಾಸ್ಯ ಮಾಡಿದ್ದರು. ಅಂದು ಲತಾ ಅಪಮಾನ ಅನುಭವಿಸಿದ್ದರು. ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ದಿಲೀಪ್, ಅಂದು ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಲ್ಲದೆ. ಲತಾ ಅವರ ಹಿಂದಿ ಹಾಗೂ ಉರ್ದುವಿನ ಶಬ್ದಗಳನ್ನು ಹೇಳುವುದು ಕೇಳುವುದಕ್ಕೆ ಖುಷಿಯಾಗುತ್ತದೆ ಎಂದಿದ್ದರು.

    ಪ್ರೀತಿಸಿದ್ದರು ಲತಾ ಮಂಗೇಶ್ಕರ್‌

    ಪ್ರೀತಿಸಿದ್ದರು ಲತಾ ಮಂಗೇಶ್ಕರ್‌

    ಸಾಯುವವರೆಗೆ ವಿವಾಹ ಆಗದೇ ಉಳಿದ ಲತಾ ಮಂಗೇಶ್ಕರ್ ಒಮ್ಮೆ ಪ್ರೇಮದಲ್ಲಿ ಬಿದ್ದಿದ್ದರು. ಲತಾರ ಅಣ್ಣ ಹೃದಯನಾಥ ಮಂಗೇಶ್ಕರ್ ಅವರ ಆತ್ಮೀಯ ಗೆಳೆಯ ರಾಜ್ ಸಿಂಗ್ ಅವರೊಟ್ಟಿಗೆ ಲತಾ ಪ್ರೇಮದಲ್ಲಿದ್ದರು. ಆದರೆ ರಾಜ್ ಸಿಂಗ್, ಡುಂಗರ್‌ಪುರ್‌ ಖಾಂದಾನ್‌ನ ರಾಜರಾಗಿದ್ದರು. ಅವರ ಪೋಷಕರಿಗೆ ಸಾಮಾನ್ಯ ಮನೆತನದ ಹೆಣ್ಣುಮಗಳನ್ನು ಸೊಸೆಯಾಗಿ ತಂದುಕೊಳ್ಳುವುದು ಇಷ್ಟವರಿಲಿಲ್ಲವಾದ್ದರಿಂದ ಲತಾರನ್ನು ರಾಜ್ ಸಿಂಗ್ ವಿವಾಹವಾಗಲು ಅವರು ಒಪ್ಪಿರಲಿಲ್ಲ. ಲತಾ ಜೀವನ ಪರ್ಯಂತ ವಿವಾಹವಾಗದೆ ಕುಮಾರಿಯಾಗಿ ಉಳಿದರು. ರಾಜ್ ಸಿಂಗ್ ಸಹ ತಾವು ಸಾಯುವ ವರೆಗೆ ಯಾರನ್ನೂ ಮದುವೆ ಆಗಲಿಲ್ಲ.

    ಅತಿ ಹೆಚ್ಚು ಹಾಡು ರೆಕಾರ್ಡ್ ಮಾಡಿದ ದಾಖಲೆ

    ಅತಿ ಹೆಚ್ಚು ಹಾಡು ರೆಕಾರ್ಡ್ ಮಾಡಿದ ದಾಖಲೆ

    ಅತಿ ಹೆಚ್ಚು ರೆಕಾರ್ಡೆಡ್ ಹಾಡು ಹಾಡಿರುವ ವಿಶ್ವ ದಾಖಲೆಯ ಪಟ್ಟಿಯಲ್ಲಿ ಲತಾ ಮಂಗೇಶ್ಕರ್‌ ಅವರ ಹೆಸರು ಇದೆ. ಲತಾ ಅವರು 50,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಕೆಲ ವರ್ಷಗಳ ಹಿಂದೆಯೇ ತನ್ನ ಎಡಿಷನ್‌ನಲ್ಲಿ ಪ್ರಕಟಿಸಿತ್ತು. ಇದೇ ಪಟ್ಟಿಯಲ್ಲಿ ಪಿ ಸುಶೀಲ ಹಾಗೂ ಆಶಾ ಭೋಂಸ್ಲೆ ಸಹ ಇದ್ದಾರೆ.

    English summary
    Here is some lesser known facts about Lata Mangeshkar's life. She passed away on February 06, 2022.
    Monday, February 7, 2022, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X