Just In
- 57 min ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 2 hrs ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
- 2 hrs ago
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- 15 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
Don't Miss!
- News
Photos: ಶಿವಮೊಗ್ಗದಲ್ಲಿ ಖ್ಯಾತ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್
- Automobiles
ಡಿಸೆಂಬರ್ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಮಹೀಂದ್ರಾ
- Sports
ಐಎಸ್ಎಲ್: ಸಮಬಲದ ಪ್ರದರ್ಶನ ನೀಡಿ ಡ್ರಾ ಮಾಡಿಕೊಂಡ ಎಟಿಕೆಎಂಬಿ, ಗೋವಾ
- Finance
ವಿಶ್ವವೇ ಕಂಗಾಲು; ಚೀನಾ ಆರ್ಥಿಕತೆ 2020ರಲ್ಲಿ 2.3% ಬೆಳವಣಿಗೆ ದಾಖಲು
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೇಶ್ ಬಾಬು ಟು ಶ್ರೀಮುರಳಿ: 2020ರಲ್ಲಿ ಘೋಷಣೆಯಾದ ಬಿಗ್ಗೆಸ್ಟ್ ಸಿನಿಮಾಗಳು
2020ರಲ್ಲಿ ಬಿಡುಗಡೆಯಾಗಬೇಕಿದ್ದ ಕೆಲವು ದೊಡ್ಡ ಸಿನಿಮಾಗಳು ಲಾಕ್‌ಡೌನ್ ಕಾರಣದಿಂದ ಚಿತ್ರಮಂದಿರಕ್ಕೆ ಬರಲಿಲ್ಲ. ಈ ಚಿತ್ರಗಳು ಈಗ 2021ರ ಆರಂಭದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಆರೇಳು ತಿಂಗಳು ಚಿತ್ರರಂಗ ಸ್ತಬ್ದವಾಗಿದ್ದರೂ ಕೆಲವು ನಿರ್ಮಾಣ ಸಂಸ್ಥೆಗಳು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಈ ವರ್ಷ ಘೋಷಣೆ ಮಾಡಿದೆ.
ಮಹೇಶ್ ಬಾಬು, ಪ್ರಭಾಸ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಶ್ರೀಮುರಳಿ ಸೇರಿದಂತೆ ಹಲವು ಸೌತ್ ಇಂಡಿಯಾ ಸ್ಟಾರ್ ನಟರ ಚಿತ್ರಗಳು ಈ ವರ್ಷ ಸೆಟ್ಟೇರಿದೆ. ಹಾಗಾದ್ರೆ, 2020ರಲ್ಲಿ ಅನೌನ್ಸ್ ಆದ ದಕ್ಷಿಣ ಭಾರತದ ಬಿಗ್ಗೆಸ್ಟ್ ಸಿನಿಮಾಗಳು ಯಾವುದು? ಮುಂದೆ ಓದಿ...

ಸರ್ಕಾರಿ ವಾರ ಪಾಟ
ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಸಿನಿಮಾ ಜನವರಿ ತಿಂಗಳಲ್ಲಿ ತೆರೆಕಂಡಿತ್ತು. ಈ ಚಿತ್ರದ ಸಕ್ಸಸ್ ಬಳಿಕ ಮಹೇಶ್ ಬಾಬು 'ಸರ್ಕಾರಿ ವಾರ ಪಾಟ' ಸಿನಿಮಾ ಘೋಷಣೆ ಮಾಡಿದರು. ಪ್ರಿನ್ಸ್ ಹುಟ್ಟುಹಬ್ಬದ ಪ್ರಯುಕ್ತ ಮೈತ್ರಿ ಮೂವಿ ಮೇಕರ್ಸ್ ಮತ್ತು ಮಹೇಶ್ ಬಾಬು ಈ ಸಿನಿಮಾ ಅನೌನ್ಸ್ ಮಾಡಿದ್ದರು. ಪರುಶರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. 2021ರಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
2020; ಕೊರೊನಾ ವರ್ಷದಲ್ಲೂ ಗಮನ ಸೆಳೆದ ಕನ್ನಡದ ಸಿನಿಮಾಗಳಿವು

ಪ್ರಭಾಸ್ 'ಸಲಾರ್'
ಕೆಜಿಎಫ್ ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ತಮ್ಮ ಮುಂದಿನ ಪ್ಯಾನ್ ಇಂಡಿಯಾ ಚಿತ್ರವನ್ನು ಘೋಷಿಸಿದೆ. ಪ್ರಭಾಸ್ ನಾಯಕರಾಗಿ ಕಾಣಿಸಿಕೊಳ್ಳಲಿರುವ ಸಲಾರ್ ಚಿತ್ರ ಅನೌನ್ಸ್ ಮಾಡಿದ್ದು, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ಭಾರತದ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಪ್ರಭಾಸ್ 'ಆದಿಪುರುಷ್'
ಭಾರತದ ಬಿಗ್ಗೆಸ್ಟ್ ಪ್ರಾಜೆಕ್ಟ್ ಆದಿಪುರುಷ್ ಘೋಷಣೆಯಾಗಿದ್ದು ಇದೇ ವರ್ಷದಲ್ಲಿ. ಪ್ರಭಾಸ್, ಸೈಫ್ ಅಲಿ ಖಾನ್ ನಟಿಸುತ್ತಿರುವ ಈ ಚಿತ್ರವನ್ನು ಓಂ ರಾವತ್ ನಿರ್ದೇಶಿಸುತ್ತಿದ್ದಾರೆ. ಬಹುದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರ ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ಮತ್ತೊಂದು ಚಿತ್ರ ಮಾಡುತ್ತಿದ್ದು, ಈ ಸಿನಿಮಾವೂ ಇದೇ ವರ್ಷ ಘೋಷಣೆಯಾಗಿದೆ.
2020ರಲ್ಲಿ ಅತೀ ಹೆಚ್ಚು ಟ್ವೀಟ್ ಆದ ದಕ್ಷಿಣ ಭಾರತದ ನಟರು: ನಂ.1 ಯಾರು?

ವಿಜಯ್ 65ನೇ ಚಿತ್ರ
'ಮಾಸ್ಟರ್' ಸಿನಿಮಾದ ಬಿಡುಗಡೆ ಬಳಿಕ ವಿಜಯ್ ಆರಂಭಿಸಿರುವ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರಕ್ಕೆ ವಿಜಯ್ 65 ಎಂದು ಹೇಳಲಾಗುತ್ತಿದ್ದು, ಕೋಲಮಾವು ಕೋಕಿಲಾ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಡಿಸೆಂಬರ್ 10 ರಂದು ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದೆ.

ಸುಕುಮಾರ್-ದೇವರಕೊಂಡ
ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಮತ್ತು ವಿಜಯ್ ದೇವರಕೊಂಡ ಹೊಸ ಚಿತ್ರಕ್ಕಾಗಿ ಒಂದಾಗುತ್ತಿದ್ದು, ಈ ಸಿನಿಮಾ 2022ರಲ್ಲಿ ಎದುರು ನೋಡಬಹುದು. ಕೇದರ್ ಸೆಲಗಂಸೆಟ್ಟಿ ಈ ಚಿತ್ರ ನಿರ್ಮಿಸುತ್ತಿದ್ದು, ಈ ವರ್ಷವೇ ಘೋಷಣೆ ಮಾಡಿದ್ದರು.
ಈ ವರ್ಷ ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ ಚಿತ್ರಗಳು

ಅಲ್ಲು ಅರ್ಜುನ್ 21
ಅಲ್ಲು ಅರ್ಜುನ್ ಮತ್ತು ಕೊರಟಲಾ ಶಿವ ಜೋಡಿಯಲ್ಲಿ ಹೊಸ ಸಿನಿಮಾ ಬರ್ತಿದ್ದು, ಈ ಚಿತ್ರವೂ 2022ರ ಆರಂಭದಲ್ಲಿ ನೋಡಬಹುದಂತೆ. ಸುಧಾಕರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಹೇ ಸಿನಾಮಿಕ
ದುಲ್ಕರ್ ಸಲ್ಮಾನ್ ಮತ್ತು ಅದಿತಿ ಹೈದರಿ ರಾವ್, ಕಾಜಲ್ ಅಗರ್‌ವಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಹೇ ಸಿನಾಮಿಕ ಚಿತ್ರವೂ ಈ ವರ್ಷವೇ ಅನೌನ್ಸ್ ಆಗಿದೆ. ಅಧಿಕೃತವಾಗಿ ಸಿನಿಮಾ ಸಹ ಸೆಟ್ಟೇರಿದೆ. ಬೃಂದಾ ಗೋಪಾಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಜನ ಗಣ ಮನ
ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ಜನಗಣಮನ ಸಿನಿಮಾವೂ ಇದೇ ವರ್ಷ ಘೋಷಣೆಯಾಗಿದೆ. ಈ ಚಿತ್ರವನ್ನು ಡಿಜೊ ಜೊಸ್ ಆಂಟನಿ ನಿರ್ದೇಶಿಸುತ್ತಿದ್ದಾರೆ.

ವಿಘ್ನೇಶ್ ಶಿವನ್ ಸಿನಿಮಾ
ಸಮಂತಾ, ನಯನತಾರಾ ಹಾಗೂ ವಿಜಯ್ ಸೇತುಪತಿ ನಟಿಸುತ್ತಿರುವ ಹೊಸ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಸೆಟ್ಟೇರಿತ್ತು. ನಯನತಾರಾ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಈ ಚಿತ್ರ ನಿರ್ದೇಶನ ಮಾಡ್ತಿದ್ದಾರೆ.

ಧನುಶ್ ಎರಡು ಚಿತ್ರಗಳು
ಧನುಶ್ ಈ ವರ್ಷ ಎರಡು ಪ್ರಾಜೆಕ್ಟ್ ಆರಂಭಿಸಿದ್ದಾರೆ. ಈ ಎರಡು ಚಿತ್ರಕ್ಕೂ ಸದ್ಯಕ್ಕೆ ಹೆಸರಿಟ್ಟಿಲ್ಲ. ಇದರಲ್ಲಿ ಒಂದು ಸಿನಿಮಾವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸುತ್ತಿದೆ.

ಸಿಂಬು ಮಾನಡು
ತಮಿಳು ನಟ ಸಿಂಬು ಮಾನಡು ಎಂಬ ಚಿತ್ರವನ್ನು ಘೋಷಿಸಿದರು. ವೆಂಕಟ್ ಪ್ರಭು ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಎಸ್ ಜೆ ಸೂರ್ಯ, ಭಾರತಿರಾಜ, ಮನೋಜ್ ಭಾರತಿರಾಜ, ಎಸ್‌ಎ ಚಂದ್ರಶೇಖರ್, ಪ್ರೇಮ್‌ಗಿ ಅಮ್ರೇನ್ ಪ್ರಮುಖ ತಾರಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶ್ರೀಮುರಳಿ 'ಬಘೀರ'
ಕೆಜಿಎಫ್, ಸಲಾರ್ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಮತ್ತೊಂದು ಮೆಗಾ ಪ್ರಾಜೆಕ್ಟ್ ಘೋಷಣೆ ಮಾಡಿದೆ. ಕನ್ನಡ ನಟ ಶ್ರೀಮುರಳಿ ನಟನೆಯಲ್ಲಿ ಬಘೀರ ಎಂಬ ಸಿನಿಮಾ ಅನೌನ್ಸ್ ಮಾಡಿದೆ. ಡಾ ಸೂರಿ ಈ ಚಿತ್ರ ನಿರ್ದೇಶನ ಮಾಡ್ತಿದ್ದಾರೆ.