For Quick Alerts
  ALLOW NOTIFICATIONS  
  For Daily Alerts

  ಗಾಡ್‌ ಗಣೇಶನಿಗೂ ಸಿನಿಮಾಕ್ಕೂ ಇದೆ ಬಿಡಿಸಲಾರದ ಸಂಬಂಧ!

  |

  ಅಂದದ ಮುಖ, ಕಟ್ಟುಮಸ್ತು ಮೈಕಟ್ಟು, ಅಜಾನುಭಾಹುಸ ಹೀಗೆ ಎಲ್ಲದರಲ್ಲೂ ಅಂದವನ್ನೇ ಕೋರುವ ಸಿನಿಮಾ ಮಂದಿಗೆ ವಕ್ರತುಂಡ, ಗಜ ಮುಖ, ಡೊಳ್ಳು ಹೊಟ್ಟೆಯ ಗಣಪನೆಂದರೆ ಇನ್ನಿಲ್ಲದ ಪ್ರೇಮ. ಸಿನಿಮಾ ಮತ್ತು ಗಣೇಶ ಬಹಳ ಆಪ್ತ.

  ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಗೊಳ್ಳುವುದೇ 'ಗಜಮುಖನೇ ಗಣಪತಿಯೇ ನಿನಗೆ ವಂದನೆ' ಹಾಡಿನ ನಂತರ. ಟೆಂಟ್ ಸಿನಿಮಾ ಕಾಲದಲ್ಲೂ ಸಹ ಟೆಂಟ್‌ ಮೇಲೆ ಹಾಕಿರುವ ಧ್ವನಿವರ್ಧಕದಲ್ಲಿ 'ಗಜಮುಖನೇ...' ಹಾಡು ಬಂತೆಂದರೆ ಟಿಕೆಟ್ ಕೊಡಲು ಪ್ರಾರಂಭಿದ್ದಾರೆಂದೇ ಅರ್ಥ.

  ಆದರೆ ಪಿವಿಆರ್, ಐನಾಕ್ಸ್ ಕಾಲದಲ್ಲಿ ಇದು ಬದಲಾಗಿಬಿಟ್ಟಿದೆ. ಈಗ ಸಿನಿಮಾ ಪ್ರಾರಂಭವಾಗುವುದಕ್ಕೆ ಮೊದಲು ಸರಣಿ ಜಾಹೀರಾತುಗಳು, ಹಾಲಿವುಡ್, ಬಾಲಿವುಡ್‌ ಸಿನಿಮಾಗಳ ಟ್ರೇಲರ್‌ಗಳು ಪ್ರಸಾರವಾಗುತ್ತವೆ. ಇಲ್ಲದಿದ್ದರೆ 'ಆ ಮುಖೇಶ' ಆತ ತನ್ನ ಕ್ಯಾನ್ಸರ್ ಕತೆ ಹೇಳುತ್ತಾನೆ. ಆದರೆ ಸಿಂಗಲ್ ಥಿಯೇಟರ್‌ಗಳಲ್ಲಿ ಸಂಪ್ರದಾಯ ಬದಲಾಗಿಲ್ಲ. ಮಾರ್ನಿಂಗ್ ಶೋ ಗೆ ಮುನ್ನಾ ಗಣೇಶನ ಸ್ತುತಿ ಈಗಲೂ ಇದ್ದೇ ಇರುತ್ತದೆ.

  ಸಿನಿಮಾ ಪ್ರಾರಂಭವಾಗುವುದೇ ಗಣೇಶನಿಂದ!

  ಸಿನಿಮಾ ಪ್ರಾರಂಭವಾಗುವುದೇ ಗಣೇಶನಿಂದ!

  ಸಿನಿಮಾ ಒಂದು ಪ್ರಾರಂಭವಾಗುವುದೇ ಗಣೇಶನ ಆಶೀರ್ವಾದದೊಂದಿಗೆ. ಕನ್ನಡದ ಬಹುತೇಕ ಸಿನಿಮಾಗಳ ಮುಹೂರ್ತ ನಡೆಯುವುದು ಗಣೇಶನ ದೇವಾಲಯದಲ್ಲಿ. ಚಿತ್ರಕತೆ ಪ್ರಾರಂಭಿಸುವ ಮುನ್ನಾ ಗಣೇಶನನ್ನು ನೆನಯುವುದು, ಬರೆದ ಚಿತ್ರಕತೆಯನ್ನು ಗಣೇಶನ ಪಾದಗಳ ಬಳಿ ಇಟ್ಟು ಆಶೀರ್ವಾದ ಬೇಡುವ ಸಂಪ್ರದಾಯವೂ ಇದೆ. ಮಹಾಭಾರತದಂತಹಾ ಅದ್ಭುತ ಕಾವ್ಯಕ್ಕೆ ಅಕ್ಷರವಾದ ಗಣೇಶನ ಆಶೀರ್ವಾದ ನಾವು ಬರೆವ ಅಕ್ಷರಕ್ಕಿರಲಿ ಎಂಬುದು ಹಲವು ನಿರ್ದೇಶಕರ, ಸಿನಿಮಾ ಕತೆಗಾರರ ಆಸೆ.

  ಸಿನಿಮಾಗಳಲ್ಲಿ ಗಣೇಶನ ಹಾಡುಗಳಿಗೆ ಕೊರೆತೆಯೇ ಇಲ್ಲ

  ಸಿನಿಮಾಗಳಲ್ಲಿ ಗಣೇಶನ ಹಾಡುಗಳಿಗೆ ಕೊರೆತೆಯೇ ಇಲ್ಲ

  ಇನ್ನು ಸಿನಿಮಾದಲ್ಲಂತೂ ಗಣೇಶನ ಹಾಡುಗಳಿಗೆ ಕೊರತೆಯೇ ಇಲ್ಲ. ಗಣೇಶನನ್ನು ಆರಾಧಿಸುವ ಹಾಡುಗಳಿಂದ ಹಿಡಿದು, 'ಖಾದಿಯಲ್ಲಿ ಮೋಸ ಇಟ್ಟೆ, ಕಾವಿಯಲ್ಲಿ ಕಾಸು ಇಟ್ಟೆ, ಖಾಕಿಗೆಲ್ಲಾ ಮೋಕ್ಷೆ ಕೊಟ್ಟೆ ಕಿಲಾಡಿ' ಎಂದು ಗಣೇಶನನ್ನು ಕಿಲಾಡಿ ಎನ್ನುವ ಆತನ ಸೃಷ್ಟಿಯನ್ನು ವ್ಯಂಗ್ಯವಾಗಿ ಪ್ರಶ್ನೆ ಮಾಡುವ ಹಾಡುಗಳೂ ಇವೆ ಕನ್ನಡ ಸಿನಿಮಾಗಳಲ್ಲಿ.

  ಗಣೇಶ ಪಾತ್ರವೂ ಆಗಿದ್ದಾನೆ

  ಗಣೇಶ ಪಾತ್ರವೂ ಆಗಿದ್ದಾನೆ

  ಗಣೇಶ ಕೇವಲ ಹಾಡಿಗಷ್ಟೆ ಸೀಮಿತವಾಗಿಲ್ಲ. ಎಷ್ಟೋ ಸಿನಿಮಾಗಳಲ್ಲಿ ಗಣೇಶನೇ ಪಾತ್ರವೂ ಆಗಿದ್ದಾನೆ. ಒಂದು ಸಿನಿಮಾದಲ್ಲಿ ಪೊರೆಯುವ ತಂದೆ, ಮತ್ತೊಂದರಲ್ಲಿ ಕಾಪಾಡುವ ದೈವ. ಮತ್ತೊಂದರಲ್ಲಿ ನಾಯಕ-ನಾಯಕಿಯ ಗೆಳೆಯನೂ ಆಗಿದ್ದಾನೆ ವಿನಾಯಕ. 'ಎ' ಸಿನಿಮಾದಲ್ಲಿ ಉಪೇಂದ್ರ, ಗನ್ ಹಿಡಿದು ಗಣೇಶನ ಎದುರು ಕೂತು ಮಾತನಾಡುವ ದೃಶ್ಯವನ್ನು ಯಾರಾದರೂ ಮರೆಯಲು ಸಾಧ್ಯವೇ? ರ್ಯಾಂಬೋ 2 ಸಿನಿಮಾದಲ್ಲಿ ಗಾಡ್ ಗಣೇಶ ಪಾತ್ರವೂ ಆಗಿಬಿಟ್ಟಿದ್ದಾನೆ. ಗಣೇಶನ ಪಾತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕೊಟ್ಟಿರುವ ದ್ವನಿ ಒಂಥರಾ ಚೆನ್ನಾಗಿದೆ.

  ಅದೃಷ್ಟ ಇರುವುದು ಗಣೇಶನಿಗೆ ಮಾತ್ರವೇ

  ಅದೃಷ್ಟ ಇರುವುದು ಗಣೇಶನಿಗೆ ಮಾತ್ರವೇ

  ಸಿನಿಮಾಗಳಲ್ಲಿ ಅತಿ ಹೆಚ್ಚು ಕಂಡು ಬರುವ ದೇವರು ಗಣೇಶನೇ. ಅತಿ ಹೆಚ್ಚು ಹಾಡುಗಳಿರುವುದು ಸಹ ಗಣೇಶನ ಕುರಿತಾಗಿಯೇ. ಈ ಅದೃಷ್ಟ ಬೇರೆ ಯಾವ ದೇವತೆಗಳಿಗೂ ಇಲ್ಲ. ಹಲವು ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು ಗಣೇಶನನ್ನು ಲಾಂಛನವನ್ನಾಗಿಸಿಕೊಂಡಿವೆ. ಒಟ್ಟಿನಲ್ಲಿ ಸಿನಿಮಾಕ್ಕೂ ಗಣೇಶನಿಗೂ ಅವಿನಾಭಾವ ಸಂಬಂಧ ಇರುವುದಂತೂ ಸುಳ್ಳಲ್ಲ.

  English summary
  Lord Ganesha is driving force behind movie industry. Most of the movies starts from lord Ganesha's blessing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X