twitter
    For Quick Alerts
    ALLOW NOTIFICATIONS  
    For Daily Alerts

    ಭಾರತ ಚಿತ್ರರಂಗದಲ್ಲಿ ಭಕ್ತಿ ಪ್ರಧಾನ ಸಿನಿಮಾಗಳು ಕಡಿಮೆಯಾಗಲು ಕಾರಣ ಏನು?

    |

    ಲವ್, ಆಕ್ಷನ್, ಫ್ಯಾಮಿಲಿ, ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್, ಮರ್ಡರ್ ಮಿಸ್ಟ್ರಿ, ಕಮರ್ಷಿಯಲ್ ಹೀಗೆ ಕನ್ನಡದಲ್ಲಿ ಎಲ್ಲ ಜಾನರ್ ಸಿನಿಮಾಗಳು ಬರುತ್ತಿದೆ. ಆದರೆ, ಭಕ್ತಿ ಪ್ರಧಾನ ಸಿನಿಮಾಗಳ ಸಂಖ್ಯೆ ಈಗ ತೀರ ಕಡಿಮೆಯಾಗಿ ಬಿಟ್ಟಿದೆ.

    ಬರೀ ಕನ್ನಡ ಮಾತ್ರವಲ್ಲ, ಇಂಡಿಯಾನ್ ಸ್ಕ್ರೀನ್ ನಲ್ಲಿಯೇ ಭಕ್ತಿ ಪ್ರಧಾನ ಸಿನಿಮಾಗಳು ಹುಡುಕಿದರು ಸಿಗುತ್ತಿಲ್ಲ. ಒಂದು ಕಾಲದಲ್ಲಿ ಪುರಾಣವನ್ನು ಪರದೆ ಮೇಲೆ ನೋಡುವುದೇ ಜನರಿಗೆ ದೊಡ್ಡ ಖುಷಿ ನೀಡುತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಯಾವುದೇ ಇಂಡಸ್ಟ್ರಿಯಲ್ಲಿಯೂ ಭಕ್ತಿ ಪ್ರಧಾನ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕುತ್ತಿಲ್ಲ.

    50ನೇ, 100ನೇ ಚಿತ್ರದ ನಿರ್ದೇಶಕರಿಗೆ ಶಿವಣ್ಣ ಸಾಥ್.!50ನೇ, 100ನೇ ಚಿತ್ರದ ನಿರ್ದೇಶಕರಿಗೆ ಶಿವಣ್ಣ ಸಾಥ್.!

    ಹಾಗಾದರೆ, ಇಂತಹ ನಿರ್ಧಾರಕ್ಕೆ ಕಾರಣ ಏನು? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. ಈ ರೀತಿಯ ಪ್ರಶ್ನೆಗೆ ನಿರ್ದೇಶಕ ಓಂ ಸಾಯಿ ಪ್ರಕಾಶ್ ಉತ್ತರ ಹೇಳಿದ್ದಾರೆ.

    ಭಕ್ತಿ ಪ್ರಧಾನ ಸಿನಿಮಾ ಎಂದ ಕೂಡಲೇ ಕನ್ನಡ ಪ್ರೇಕ್ಷಕರಿಗೆ ಮೊದಲು ನೆನಪಿಗೆ ಬರುವ ನಿರ್ದೇಶಕ ಓಂ ಸಾಯಿ ಪ್ರಕಾಶ್. ಈಗ ಅವರು ಭಕ್ತಿ ಪ್ರಧಾನ ಸಿನಿಮಾಗಳ ಇಳಿಕೆಯ ಕಾರಣದ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದಾರೆ.

    ಪುರಾಣಗಳ ಬಗ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ

    ಪುರಾಣಗಳ ಬಗ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ

    ''ನಾವು ಚಿತ್ರರಂಗಕ್ಕೆ ಬಂದದ್ದು, 1972 ರಲ್ಲಿ. ಆದ ಭಕ್ತಿ ಪ್ರಧಾನ ಸಿನಿಮಾಗಳು, ಪುರಾಣ, ಚರಿತ್ರೆ ಅಂತಹ ಸಿನಿಮಾಗಳು ಹೆಚ್ಚು ಬರುತ್ತಿತ್ತು. ಆಗ ಅಂತಹ ಚಿತ್ರಗಳನ್ನು ಮಾಡಲು ಒಳ್ಳೆಯ ಮಾಹಿತಿ ಸಿಗುತಿತ್ತು. ನಾವು ಬೆಳೆಯುವಾಗಲೇ ಅಂತಹ ಕಥೆ ಕೇಳಿ ಬೆಳೆದಿದ್ದೆವು. ಸಿನಿಮಾ ಮಾಡಬೇಕು ಎಂದಾಗ, ಅನೇಕ ಕಡೆಯಿಂದ ಮಾಹಿತಿ ಸಿಗುತ್ತಿತ್ತು. ರಂಗಭೂಮಿ, ಹರಿಕಥೆಗಳು ಸಹಾಯ ಮಾಡುತ್ತಿದ್ದವು. ಆದರೆ, ಈಗ ಯಾರು ಇಲ್ಲ.'' - ಓಂ ಸಾಯಿ ಪ್ರಕಾಶ್, ಹಿರಿಯ ನಿರ್ದೇಶಕ

    ಎಲ್ಲದಕ್ಕೂ ಇಂಟರ್ ನೆಟ್ ನೋಡುತ್ತಾರೆ

    ಎಲ್ಲದಕ್ಕೂ ಇಂಟರ್ ನೆಟ್ ನೋಡುತ್ತಾರೆ

    ''ಈಗ ಪುರಾಣ ಪ್ರಧಾನ ಸಿನಿಮಾ ಮಾಡಬೇಕು ಎಂದರೆ ಸರಿಯಾದ ಮಾಹಿತಿ ತಿಳಿಸುವವರು ಇಲ್ಲ. ಈಗ ಏನೇ ಬೇಕಾದರೂ, ಇಂಟರ್ ನೆಟ್ ನಲ್ಲಿ ನೋಡಿ ತಿಳಿಯಬೇಕಾಗಿದೆ. ಮತ್ತೊಂದು ಕಡೆ ನಮ್ಮ ಜನರಿಗೂ ಸಂಸ್ಕಾರ, ಸಂಸ್ಕೃತಿ, ನೀತಿ, ಧರ್ಮದ ಬಗ್ಗೆ ಒಲವು ಕಡಿಮೆಯಾಗಿದೆ. ಕೆಲಸ, ದುಡ್ಡು ಇದರ ಬಗ್ಗೆ ಗಮನ ಹೆಚ್ಚಾಗಿದೆ.'' - ಓಂ ಸಾಯಿ ಪ್ರಕಾಶ್, ಹಿರಿಯ ನಿರ್ದೇಶಕ

    ಚಿತ್ರರಂಗದ ಇತಿಹಾಸದಲ್ಲಿ 100 ಸಿನಿಮಾ ಮಾಡಿರುವ ನಿರ್ದೇಶಕರು ಇವರುಚಿತ್ರರಂಗದ ಇತಿಹಾಸದಲ್ಲಿ 100 ಸಿನಿಮಾ ಮಾಡಿರುವ ನಿರ್ದೇಶಕರು ಇವರು

    ಜನರು ಸಹ ಸಿನಿಮಾ ನೋಡಲು ಬರುವುದಿಲ್ಲ

    ಜನರು ಸಹ ಸಿನಿಮಾ ನೋಡಲು ಬರುವುದಿಲ್ಲ

    ''ಆಗ ಭಕ್ತ ಪ್ರಧಾನ ಸಿನಿಮಾಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿತ್ತು. ಆದರೆ, ಇಂದು ಜನರ ಆಯ್ಕೆ ಬದಲಾಗಿದೆ. ಕಷ್ಟಪಟ್ಟು ಯಾರಾದರೂ ಅಂತಹ ಸಿನಿಮಾ ಮಾಡಿದರೂ ಯಾರು ನೋಡಲು ಬರುವುದಿಲ್ಲ. ಅಪ್ಪ ಲೂಸಾ.. ಅಮ್ಮ ಲೂಸಾ.. ಎಂದರೆ ಖುಷಿ ಪಡುತ್ತಾರೆ. ಹೀಗಾಗಿ ಭಕ್ತಿ ಪ್ರಧಾನ ಸಿನಿಮಾಗಳ ಬಗ್ಗೆ ಮಾತನಾಡಬಹುದೇ ಹೊರತು, ಪ್ರಾಕ್ಟಿಕಲಿ ತುಂಬ ಕಷ್ಟ ಇದೆ.'' - ಓಂ ಸಾಯಿ ಪ್ರಕಾಶ್, ಹಿರಿಯ ನಿರ್ದೇಶಕ

    ಬಂಡವಾಳ ಕೂಡ ಹೆಚ್ಚು ಬೇಕು

    ಬಂಡವಾಳ ಕೂಡ ಹೆಚ್ಚು ಬೇಕು

    ''ಐತಿಹಾಸಿಕ ಹಾಗೂ ಪೌರಾಣಿಕ ಸಿನಿಮಾಗಳನ್ನು ಮಾಡಲು ಹೆಚ್ಚು ಬಂಡವಾಳ ಬೇಕಾಗುತ್ತದೆ. ಇಂದು ಅಷ್ಟೊಂದು ದೊಡ್ಡ ಬಂಡವಾಳ ಹಾಕಿ ಭಕ್ತಿ ಪ್ರಧಾನ ಸಿನಿಮಾ ಮಾಡಲು ಯಾರು ಮುಂದೆ ಬರುವುದಿಲ್ಲ. ಬಂದರೂ ಹಾಕಿದ ಬಂಡವಾಳ ವಾಪಸ್ ಬರುವುದು ಸಹ ಕಷ್ಟವಿದೆ. ಅಷ್ಟೊಂದು ಕಲಾವಿದರನ್ನು ಇಟ್ಟುಕೊಂಡು 'ಕುರುಕ್ಷೇತ್ರ' ಸಿನಿಮಾ ಮಾಡಲು ತುಂಬ ಕಷ್ಟ ಆಗಿತ್ತು.'' - ಓಂ ಸಾಯಿ ಪ್ರಕಾಶ್, ಹಿರಿಯ ನಿರ್ದೇಶಕ

    'ಡಬಲ್ ಮೀನಿಂಗ್' ಸಿನಿಮಾ ಮಾಡ್ತಿಲ್ಲ: ಸಾಯಿಪ್ರಕಾಶ್'ಡಬಲ್ ಮೀನಿಂಗ್' ಸಿನಿಮಾ ಮಾಡ್ತಿಲ್ಲ: ಸಾಯಿಪ್ರಕಾಶ್

    ಡಿಜಿಟಲ್ ಫ್ಲಾಟ್ ಫಾರ್ಮ್ ಬಳಸಿಕೊಳ್ಳಬಹುದು

    ಡಿಜಿಟಲ್ ಫ್ಲಾಟ್ ಫಾರ್ಮ್ ಬಳಸಿಕೊಳ್ಳಬಹುದು

    ''ಭಕ್ತಿ ಪ್ರಧಾನ ಸಿನಿಮಾ ಮಾಡಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಆಗುವುದಿಲ್ಲ. ಚಿತ್ರಮಂದಿರಗಳ ಬಾಡಿಗೆ, ಬೇರೆ ಸಿನಿಮಾಗಳ ಜೊತೆ ಸ್ಪರ್ಧೆ ಸಾಧ್ಯವಿಲ್ಲ. ಹೀಗಾಗಿ ಡಿಜಿಟಲ್ ಫ್ಲಾಟ್ ಫಾರ್ಮ್ ಬಳಸಿಕೊಳ್ಳಬಹುದು. ಪೌರಾಣಿಕ ಭಕ್ತಿ ಪ್ರಧಾನ ವೆಬ್ ಸೀರಿಸ್ ಮಾಡಬಹುದು. ಅಲ್ಲಿಗೆ ಅದು ಹೊಸದಾಗಿ ಕಾಣುತ್ತದೆ.'' - ಓಂ ಸಾಯಿ ಪ್ರಕಾಶ್, ಹಿರಿಯ ನಿರ್ದೇಶಕ

    English summary
    Kannada director Om Sai Prakash spoke about devotional movies.
    Tuesday, February 11, 2020, 10:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X