For Quick Alerts
  ALLOW NOTIFICATIONS  
  For Daily Alerts

  'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು

  |

  'ತಾಜ್ ಮಹಲ್' ಚಿತ್ರ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಆರ್ ಚಂದ್ರು ಇಂದು ನೂರು ಕೋಟಿ ಬಜೆಟ್‌ನ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಎನಿಸಿಕೊಂಡಿರುವ ಆರ್ ಚಂದ್ರು, ನಿರ್ದೇಶಕನಾಗಬೇಕು ಎಂಬ ಆಸೆಯಿಂದ ಬೆಂಗಳೂರಿಗೆ ಬಂದಿರಲಿಲ್ಲ.

  DIRECTORS DAIRY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada

  ಮೂಲತಃ ಚಿಕ್ಕಬಳ್ಳಾಪುರ ಕೇಶಾವರದ ಆರ್ ಚಂದ್ರು 2008ರಲ್ಲಿ ಬೆಂಗಳೂರಿಗೆ ಬಂದಾಗ ಕೇವಲ 100 ರೂಪಾಯಿ ಇಟ್ಕೊಂಡು ಬಂದಿದ್ದರು. ಆದ್ರೆ ''ಈ ಸಿನಿಮಾ ಜಗತ್ತು ಬೇಡ, ನೀವು ವಾಪಸ್ ಊರಿಗೆ ಹೋಗ್ಬಿಡು ಅಂತ'' ವ್ಯಕ್ತಿಯೊಬ್ಬರು ಆರ್ ಚಂದ್ರು ಅವರಿಗೆ ಹೇಳಿದ್ದರಂತೆ.

  ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

  ಫಿಲ್ಮಿಬೀಟ್ ಕನ್ನಡ ನೂತನವಾಗಿ ಪ್ರಸ್ತುತಪಡಿಸುತ್ತಿರುವ ಡೈರೆಕ್ಟರ್ ಡೈರಿ ಕಾರ್ಯಕ್ರಮದಲ್ಲಿ ಆರ್ ಚಂದ್ರ, ಈ ಕುರಿತು ಮಾತನಾಡಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಮುಂದೆ ಓದಿ...

  ಕೇಶಾವರ ಟು ಬೆಂಗಳೂರು

  ಕೇಶಾವರ ಟು ಬೆಂಗಳೂರು

  'ಪಿಯುಸಿ ಓದುಬೇಕಾದರೆ ಕವನ-ಕಥೆಗಳು ಬರೆಯುತ್ತಿದ್ದೆ. ಎನ್‌.ಟಿ ಜಯರಾಮ ರೆಡ್ಡಿ, ನಮ್ಮ ಗುರುಗಳು ಇದ್ದಂತೆ'. ಸುಮಾರು ಒಂದು ವರ್ಷಗಳ ಕಾಲ ಅವರ ಹಿಂದೆ ಬಿದ್ದು ಸಿನಿಮಾ ಇಂಡಸ್ಟ್ರಿಗೆ ಹೋಗ್ತೀನಿ ಅಂತ ಕಾಟ ಕೊಟ್ಟಿದ್ದರಂತೆ ಚಂದ್ರು. ಅವರ ಬಳಿ ಹೋಗಿ ''ಸರ್ ನಾನು ಸಿನಿಮಾ ಇಂಡಸ್ಟ್ರಿಗೆ ಹೋಗ್ಬೇಕು'' ಅಂದೆ. ಅದಕ್ಕೆ ಅವರು ''ಸಿನಿಮಾ ಇಂಡಸ್ಟ್ರಿಯಲ್ಲಿ ನೀನು ಏನು ಮಾಡ್ತೀಯಾ'' ಅಂದ್ರು. 'ಏನಾದರೂ ಗುರುಗಳೇ, ಕಸ ಗುಡಿಸುವ ಕೆಲಸ ಇದ್ದರೂ ಮಾಡ್ತೀನಿ' ಎಂದು ಕೇಳಿಕೊಂಡಿದ್ದೆ'' ಎಂದು ಚಂದ್ರು ಸ್ಮರಿಸಿಕೊಂಡಿದ್ದಾರೆ.

  ಹೀರೋ ಆಗುವ ಆಸೆಯೂ ಇತ್ತು

  ಹೀರೋ ಆಗುವ ಆಸೆಯೂ ಇತ್ತು

  'ಸಿನಿಮಾ ಇಂಡಸ್ಟ್ರಿ ಅಂದ್ರೆ ಅಲ್ಲಿ ಹಲವು ವಿಭಾಗಗಳು ಇರುತ್ತೆ, ಅದರಲ್ಲಿ ಏನು ಮಾಡ್ತೀಯಾ ಅಂತ ಕೇಳಿದ್ರು. ನಾನು ಬೇರೆ ಸ್ವಲ್ಪ ಚೆನ್ನಾಗಿ ಇದ್ದೆ, ಹೀರೋ ಆಗುವ ಆಸೆನೂ ಇತ್ತು. ಆದರೆ, ಏನು ಕೆಲಸ ಬೇಕಾದರೂ ಮಾಡ್ತೀನಿ' ಅಂತ ಜಯರಾಮ ರೆಡ್ಡಿ ಅವರಿಗೆ ಕಾಟ ಕೊಟ್ಟಿದ್ದೆ. ಆಮೇಲೆ ''ನಿನ್ನಲ್ಲಿ ಬರವಣಿಗೆ ಚೆನ್ನಾಗಿದೆ, ನೀನು ಡೈರೆಕ್ಟರ್ ಆಗು'' ಎಂದು ಹೇಳಿ ರವಿ ಕುಮಾರ್ ಎನ್ನುವವರ ಫೋನ್ ನಂಬರ್ ಕೊಟ್ಟು ಬೆಂಗಳೂರಿಗೆ ಕಳುಹಿಸಿದರು.

  ಗನ್ ಹಿಡಿದು ರೋಮಾಂಚನಗೊಂಡ ಉಪ್ಪಿ!: ಈ ಪಿಸ್ತೂಲಿನ ವಿಶೇಷತೆ ಏನು?ಗನ್ ಹಿಡಿದು ರೋಮಾಂಚನಗೊಂಡ ಉಪ್ಪಿ!: ಈ ಪಿಸ್ತೂಲಿನ ವಿಶೇಷತೆ ಏನು?

  ರಾಮಕೃಷ್ಣ ಆಶ್ರಮ ಬಳಿ ಹೋದೆ

  ರಾಮಕೃಷ್ಣ ಆಶ್ರಮ ಬಳಿ ಹೋದೆ

  ''ಮೆಜೆಸ್ಟಿಕ್‌ಗೆ ಬಂದಿಳಿದೆ. ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ. ಮೂರು ದಿನ ಆದ್ಮೇಲೆ ಮಾತಾಡಿದ್ರು. ಆ ಮೂರು ದಿನ ಬೆಂಗಳೂರು, ಗಾಂಧಿನಗರ ಸುತ್ತಾಡಿದ್ದೆ. 'ರಾಮಕೃಷ್ಣ ಆಶ್ರಮ ಬಳಿಕ ಶೂಟಿಂಗ್ ನಡೆಯುತ್ತಿದೆ ಬಾ' ಎಂದರು. ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಅವರು ನನ್ನನ್ನು ಎನ್‌ಸಿ ಸುರೇಶ್ ಅವರ ಬಳಿ ಬಿಟ್ಟರು. ಅವರು ರಾಮು ಹತ್ರ ಕಳುಸಿ ಬರವಣಿಗೆ ಚೆನ್ನಾಗಿದ್ಯಾ ಚೆಕ್ ಮಾಡು ಅಂದ್ರು. ರಾಮ್-ಲಕ್ಷ್ಮಣ್ ಅವರ ಬಳಿ ಹೋದೆ, ಬರೆಯೋದಕ್ಕೆ ಕೊಟ್ಟರು. ಬರೆದು, 'ಹುಂ ಚೆನ್ನಾಗಿದೆ' ಅಂತ ಅಂದ್ರು.

  ಶಿಡ್ಲಘಟ್ಟ ಶ್ರೀನಿವಾಸ್

  ಶಿಡ್ಲಘಟ್ಟ ಶ್ರೀನಿವಾಸ್

  ಅಂದು ಎಸ್‌ ನಾರಾಯಣ್ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ಶಿಡ್ಲಘಟ್ಟ ಶ್ರೀನಿವಾಸ್ ''ನೋಡು ಈ ಸಿನಿಮಾ ಇಂಡಸ್ಟ್ರಿ ಬೇಡ, ವಾಪಸ್ ನಿಮ್ಮ ಊರಿಗೆ ಹೋಗ್ಬಿಡು. ಇದು ನೋಡೋಕೆ ಮಾತ್ರ ಚೆಂದ, ನಾವು ಇಷ್ಟು ವರ್ಷದಿಂದ ಅನುಭವಿಸುತ್ತಿದ್ದೇವೆ, ಊರಲ್ಲಿ ಚಿಲ್ಲರೆ ಅಂಗಡಿ ಇದೆ ಅಂತೀಯಾ, ಹೋಗು ಅಲ್ಲೆ ಆರಾಮಾಗಿ ಕೆಲಸ ಮಾಡ್ಕೊಂಡು'' ಇರು ಅಂತ ಸಲಹೆ ಕೊಟ್ಟರು. ನಮ್ಮೂರು ಊರ ಹುಡುಗ, ಹಾಳಾಗಿಬಿಡ್ತಾನೆ ಎಂಬ ಭಾವನೆಯಿಂದ ಹೇಳಿದ್ರು. ಆಗ ನಾನು '' ಒಂದೆರಡು ತಿಂಗಳು ಇರ್ತೀನಿ ಸಾರ್ ಅಂತ'' ಕೇಳಿ ಕೇಳ್ಕೊಂಡೆ. ''ನಿನ್ನಿಷ್ಟ ಕಣ್ಣಪ್ಪಾ, ನಾವೇನು ಮಾಡೋಕೆ ಆಗುತ್ತೆ'' ಅಂತ ಬಿಡು ಅಂದ್ರು.

  ಇದು ಮೊದಲ ಅಧ್ಯಾಯ

  ಇದು ಮೊದಲ ಅಧ್ಯಾಯ

  ಅಂದು ಸಂಜೆ ಆರು ಗಂಟೆಯವರೆಗೂ ಬರೆದೆ. ಆಮೇಲೆ ಪ್ಯಾಕಪ್ ಆಗುವ ಸಮಯ ಬರೆದಿದ್ದು ಎಲ್ಲವನ್ನು ರಾಮು ಅವರ ಬಳಿಕ ಕೊಟ್ಟೆ. ಅವರ ನೋಡಿ ಹುಂ ಸರಿ ಅಂದ್ರು. ಇಲ್ಲಿಂದ ನನ್ನ ಅಧ್ಯಾಯ ಶುರುವಾಯಿತು'' ಎಂದು ಆರ್ ಚಂದ್ರು ತಮ್ಮ ಸಿನಿಮಾ ಜರ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಡೈರೆಕ್ಟರ್ ಡೈರಿಯ ಮೊದಲ ಅಧ್ಯಾಯ. ಕಥೆ ಮುಂದುವರಿಯುತ್ತದೆ.

  English summary
  Kannada Film Director R Chandru shares his cinema journey with Filmibeat kannada director dairy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X