twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ಸರಸ್ವತಿಯ ಸ್ವಂತ ಪುತ್ರ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಬೆಳೆದು ಬಂದ ಹಾದಿ

    |

    ಸಂಗೀತ ಸರಸ್ವತಿಯ ಕಂಠ ಗಾಯಕಿ ಎಸ್.ಜಾನಕಿ ಆಗಿದ್ದರೆ ಭಾವ ಎಸ್‌.ಪಿ.ಬಾಲಸುಬ್ರಹ್ಮಣ್ಯಂ. 'ನಿನಗಿಂತಲೂ ಚೆನ್ನಾಗಿ ಹಾಡುವವರು ಇದ್ದಾರೆ, ಆದರೆ ನಿನ್ನಷ್ಟು ಭಾವ ತುಂಬಿ ಹಾಡುವವರು ಯಾರೂ ಇಲ್ಲ' ಹೀಗೆಂದು ಎಸ್.ಜಾನಕಿ ಅವರು ಬಾಲಸುಬ್ರಹ್ಮಣ್ಯಂ ಗೆ ಹೇಳಿದ್ದರು.

    ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1946, ಜೂನ್ 4 ರಂದು ಹುಟ್ಟಿದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಮುಂದೆ ಎಸ್‌ಪಿಬಿ ಆಗಿ ಕೋಟ್ಯಂತರ ಮನ ಗುಡಿಯಲ್ಲಿ ಸ್ಥಾನ ಪಡೆದುಕೊಂಡರು. ಹುಟ್ಟಿದಾಗ ತೆಲುಗು ಮಾತೃಭಾಷೆಯ ಎಸ್‌ಪಿಬಿ ನಂತರ ಸಂಗೀತವನ್ನೇ ತಮ್ಮ ಮಾತೃಭಾಷೆಯನ್ನಾಗಿಸಿಕೊಂಡರು.

    ಫಲಿಸಲಿಲ್ಲ ಪ್ರಾರ್ಥನೆ, ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನಫಲಿಸಲಿಲ್ಲ ಪ್ರಾರ್ಥನೆ, ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ

    ಸರಳ ಕುಟುಂಬದಲ್ಲಿ ಹುಟ್ಟಿದ ಎಸ್‌ಪಿಬಿ ಗೆ ಇಬ್ಬರು ಸಹೋದರರು, ಐವರು ಸಹೋದರಿಯರು. ಎಸ್‌ಪಿಬಿ ತಂದೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಎಳವೆಯಿಂದಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡರು ಎಸ್‌ಪಿಬಿ. ಸಣ್ಣ ವಯಸ್ಸಿನಲ್ಲಿಯೇ ಸಂಗೀತಾಭ್ಯಾಸ ಮಾಡಲು ಆರಂಭಿಸಿದರು.

    ಎಸ್ ಪಿ ಬಿ ಕೊನೆಯದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇನು?ಎಸ್ ಪಿ ಬಿ ಕೊನೆಯದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇನು?

    ಓದಿನಲ್ಲಿ ಚುರುಕಾಗಿದ್ದ ಬಾಲಸುಬ್ರಹ್ಮಣ್ಯಂ, ಅನಂತಪುರಂನ ಎಂಜಿನಿಯರ್ ಕಾಲೇಜಿಗೆ ಸೇರಿಕೊಂಡಿದ್ದರು. ಆದರೆ ಟೈಫೈಡ್ ಖಾಯಿಲೆ ಕಾರಣ ಕಾಲೇಜು ಬಿಡಬೇಕಾಗಿ ಬಂತು, ಶಿಕ್ಷಣ ಮುಂದವರೆಸಲು ಚೆನ್ನೈಗೆ ಹೋದರು ಎಸ್‌ಪಿಬಿ. ಅಲ್ಲಿ ಶಿಕ್ಷಣ ಮುಂದುವರೆಸಿದರು. ಜೊತೆಗೆ ಸಂಗೀತವನ್ನೂ ಸಹ. ಈ ನಡುವೆ ಹಲವು ಸಂಗೀತ ಸ್ಪರ್ಧೆಗಳಲ್ಲಿ ಎಸ್‌ಪಿಬಿ ಭಾಗವಹಿಸಿದ್ದರು. ಎಸ್‌ಪಿಬಿ 16 ನೇ ವರ್ಷದವರಿದ್ದಾಗಲೇ ಸಂಗೀತ ಸ್ಪರ್ಧೆಯಲ್ಲಿ ಅವರ ಹಾಡು ಕೇಳಿದ್ದ ಎಸ್.ಜಾನಿಕಿ, 'ನೀನು ಸಿನಿಮಾದಲ್ಲಿ ಹಾಡು, ನಿನಗೆ ಭವಿಷ್ಯವಿದೆ' ಎಂದಿದ್ದರು, ಆಗ ನಕ್ಕುಬಿಟ್ಟಿದ್ದರಂತೆ ಎಸ್‌ಪಿಬಿ.

    ಎಸ್‌ಪಿಬಿ ಭಾಗ್ಯ ಬದಲಾದ ಸಂದರ್ಭ

    ಎಸ್‌ಪಿಬಿ ಭಾಗ್ಯ ಬದಲಾದ ಸಂದರ್ಭ

    ಚೆನ್ನೈನಲ್ಲಿ ಸಣ್ಣ ಸಂಗೀತ ತಂಡವೊಂದನ್ನು ಕಟ್ಟಿದರು ಎಸ್‌ಪಿಬಿ ಆ ಸಂಗೀತ ತಂಡದಲ್ಲಿ ಈಗಿನ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ, ಗಂಗೈ ಅಮರನ್ ಸಹ ಇದ್ದರು. ಈ ತಂಡ ಭಾಗವಹಿಸಿದ್ದ ಸಂಗೀತ ಸ್ಪರ್ಧೆಯೊಂದಕ್ಕೆ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕ ಎಸ್‌ಪಿ ಕೋದಂಡಪಾಣಿ ಮತ್ತು ಖ್ಯಾತ ಗಾಯಕ ಘಂಟಸಾಲ ಬಂದಿದ್ದರು. ಆ ಸ್ಪರ್ಧೆಯಲ್ಲಿ ಅತ್ಯುತ್ತಮ ಹಾಡುಗಾರ ಪ್ರಶಸ್ತಿ ಬಂದಿದ್ದು ಎಸ್‌ಪಿಬಿಗೆ ಅಲ್ಲಿಂದ ಅವರ ಭಾಗ್ಯ ಬದಲಾಯಿತು.

    ಮೊದಲ ಅವಕಾಶ ಕೊಟ್ಟಿದ್ದ ಖ್ಯಾತ ಸಂಗೀತ ನಿರ್ದೇಶಕ

    ಮೊದಲ ಅವಕಾಶ ಕೊಟ್ಟಿದ್ದ ಖ್ಯಾತ ಸಂಗೀತ ನಿರ್ದೇಶಕ

    ಕೋದಂಡಪಾಣಿ ಅವರ ಕಣ್ಣಿಗೆ ಬೀಳುವ ಮೊದಲು ಕೆಲವಾರು ಸಂಗೀತ ನಿರ್ದೇಶಕರ ಬಳಿ ಎಸ್‌ಪಿಬಿ ಅವಕಾಶ ಕೇಳಿದ್ದರು, ಅವಕಾಶ ಸಿಕ್ಕಿರಲಿಲ್ಲ, ಆದರೆ ಅವರ ಪ್ರತಿಭೆ ಗುರುತಿಸಿದ ಸಂಗೀತ ನಿರ್ದೇಶಕ ಎಸ್‌ಪಿ ಕೋದಂಡಪಾಣಿ ಅವರನ್ನು ತಮ್ಮ ಸಿನಿಮಾದಲ್ಲಿ ಹಾಡಲು ಆಹ್ವಾನಿಸಿದರು. ಡಿಸೆಂಬರ್ 15 , 1966 ರಲ್ಲಿ ಎಸ್‌ಪಿಬಿ ತಮ್ಮ ಮೊದಲ ಸಿನಿಮಾ ಹಾಡು ಹಾಡಿದರು. ಸಿನಿಮಾದ ಹೆಸರು 'ಶ್ರೀ ಶ್ರೀ ಶ್ರೀ ಮರ್ಯಾದ ರಾಮನ್ನ', ಸಂಗೀತ ನಿರ್ದೇಶನ ಕೋದಂಡಪಾಣಿ.

    ಕನ್ನಡದಲ್ಲಿ ಎಸ್‌ಪಿಬಿಗೆ ಅವಕಾಶ ಕೊಟ್ಟಿದ್ದು ಇವರು

    ಕನ್ನಡದಲ್ಲಿ ಎಸ್‌ಪಿಬಿಗೆ ಅವಕಾಶ ಕೊಟ್ಟಿದ್ದು ಇವರು

    ತಮ್ಮ ಮೊದಲ ಹಾಡು ಹಾಡಿದ ಕೇವಲ ಹತ್ತೆ ದಿನದಲ್ಲಿ ಅವರಿಗೆ ಕನ್ನಡ ಸಿನಿಮಾಕ್ಕೆ ಹಾಡುವ ಅವಕಾಶ ಒದಗಿಬಂತು. ಪಿಬಿ ಶ್ರೀನಿವಾಸ್ ಅವರ ಸಹೋದರ, ಎಸ್‌ಪಿಬಿ ಅವರನ್ನು ಕನ್ನಡಕ್ಕೆ ಕರೆತಂದರು. 'ನಕ್ಕರೆ ಅದೇ ಸ್ವರ್ಗ' ಸಿನಿಮಾದಿಂದ ಎಸ್‌ಪಿಬಿ ಕನ್ನಡ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಆ ನಂತರ ಅವರು ನಿಂತಿದ್ದೇ ಇಲ್ಲ.

    ಒಂದೇ ದಿನದಲ್ಲಿ 21 ಕನ್ನಡ ಹಾಡು ಹಾಡಿದ್ದರು

    ಒಂದೇ ದಿನದಲ್ಲಿ 21 ಕನ್ನಡ ಹಾಡು ಹಾಡಿದ್ದರು

    ಅತ್ಯಂತ ಕಡಿಮೆ ಅವಧಿಯಲ್ಲಿ ಬಹುದೊಡ್ಡ ಗಾಯಕರಾಗಿ ಹೊರಹೊಮ್ಮಿದ ಎಸ್‌ಪಿಬಿ ಭಾರತದಲ್ಲೇ ಅತ್ಯಂತ ಬ್ಯುಸಿಯಾದ ಗಾಯಕ ಎನಿಸಿಕೊಂಡರು. ಒಂದೇ ದಿನದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಗೆ ಬರೋಬ್ಬರಿ 21 ಹಾಡುಗಳನ್ನು ರೆಕಾರ್ಡ್‌ ಮಾಡಿದ್ದರು. ಅದೂ ಕನ್ನಡದ ಹಾಡುಗಳು ಮಾತ್ರವೇ. ಸುಮಾರು 50 ಸಾವಿರ ಹಾಡುಗಳಿಗೂ ಹೆಚ್ಚು ಹಾಡುಗಳನ್ನು ಎಸ್‌ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಹಾಡುಗಾರಿಕೆಯನ್ನು ಗಿನ್ನೆಸ್ ದಾಖಲೆ ಇರುವುದು ಎಸ್‌ಪಿಬಿ ಹೆಸರಿನಲ್ಲಿ ಮಾತ್ರ.

    ಸಾವಿತ್ರಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದ ಎಸ್‌ಪಿಬಿ

    ಸಾವಿತ್ರಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದ ಎಸ್‌ಪಿಬಿ

    ಎಸ್‌ಪಿಬಿ ಅವರು ಸಾವಿತ್ರಿ ಎಂಬುವರನ್ನು ಪ್ರೀತಿಸಿ ಮದುವೆ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು, ಪಲ್ಲವಿ ಮತ್ತು ಎಸ್‌ಪಿ ಚರಣ್ ಇಬ್ಬರೂ ಸಹ ಹಿನ್ನೆಲೆ ಗಾಯಕರು, ಎಸ್‌ಪಿ ಚರಣ್ ಸಿನಿಮಾ ನಿರ್ಮಾಪಕರೂ ಸಹ. ಇಷ್ಟು ಮಾತ್ರವೇ ಅಲ್ಲದೆ, ಸಂಗೀತ ಕ್ಷೇತ್ರದಲ್ಲಿ ಅತಿ ದೊಡ್ಡ ಕುಟುಂಬವನ್ನು ಅವರು ಹೊಂದಿದ್ದಾರೆ, ಯೇಸುದಾಸ್ ಅನ್ನು ಅಣ್ಣ ಎಂದು, ಜಾನಕಿ, ಸುಶೀಲ ಅವರನ್ನು ಅಮ್ಮ ಎನ್ನಿತ್ತಿದ್ದ ಎಸ್‌ಪಿಬಿ ಜೀವನದ ಕೊನೆಯ ಕ್ಷಣದ ವರೆಗೂ ತಮ್ಮ ಚರಿತ್ರೆಯ ಮೇಲೆ ಒಂದು ಕಪ್ಪು ಚುಕ್ಕೆ ಬೀಳದಂತೆ ನೋಡಿಕೊಂಡಿದ್ದರು.

    ಆಗಸ್ಟ್ 5 ರಂದು ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು

    ಆಗಸ್ಟ್ 5 ರಂದು ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು

    ಕಳೆದ ಆಗಸ್ಟ್ 5 ರಂದು ಎಸ್‌ಪಿಬಿ ಅವರು ಕೊರೊನಾದಿಂದ ಎಂಜಿಎಂ ಆಸ್ಪತ್ರೆಗೆ ಸೇರಿದ್ದರು. ತೀವ್ರ ನಿಗಾಘಟಕದಲ್ಲಿದ್ದ ಎಸ್‌ಪಿಬಿ ಅವರು ಸೆಪ್ಟೆಂಬರ್ ಮೊದಲ ಹಾಗೂ ಎರಡನೇ ವಾರದಲ್ಲಿ ತುಸು ಚೇತರಿಸಿಕೊಂಡಿದ್ದರು. ಆದರೆ ಹಠಾತ್ತನೆ ಅವರ ಆರೋಗ್ಯ ತೀವ್ರ ಗಂಭೀರವಾಗಿದೆ ಎಂದು ನಿನ್ನೆ (ಸೆಪ್ಟೆಂಬರ್ 24) ಸುದ್ದಿ ಬಂದಿತ್ತು, ಇಂದು ಹಠಾತ್ತನೆ ಅವರು ಇಹಲೋಕ ತ್ಯಜಿಸಿದ್ದಾರೆ.

    English summary
    SP Balasubrahmanyam life journey. He born in Andhra Pradesh Nelluru.
    Friday, September 25, 2020, 14:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X