twitter
    For Quick Alerts
    ALLOW NOTIFICATIONS  
    For Daily Alerts

    ಮಣ್ಣಲ್ಲಿ ಮಣ್ಣಾದ ದೊಡ್ಮನೆ ಯುವರತ್ನ: ಚಿರ ನಿದ್ರೆಗೆ ಜಾರಿದ ಪ್ರೀತಿಯ ಅಪ್ಪು!

    |

    ಕಂಠೀರವ ಸ್ಟೂಡಿಯೋದಲ್ಲಿ ಅಮ್ಮನ ಸಮಾಧಿ ಬಳಿ ನಟ ಪುನೀತ್ ರಾಜ್​ಕುಮಾರ್ ಅಂತ್ಯಕ್ರಿಯೆ ನೆರವೇರಿದೆ. ಕೊನೆ ಘಳಿಗೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಅಂತಿಮ ಪೂಜೆ ವೇಳೆ ಬಿಕ್ಕಿ, ಬಿಕ್ಕಿ ಅತ್ತರು. ಕೊನೆಯ ಬಾರಿ ಪುನೀತ್​ ಮುಖ ನೋಡಿದ ಪತ್ನಿ ಅಶ್ವಿನಿ ಹಾಗೂ ಮಕ್ಕಳು ಅಳು ತಡೆಯಲಾರದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅವರ ಆಕ್ರಂದನ ಕರುಳು ಹಿಂಡುವಂತೆ ಇತ್ತು.

    ಅಪ್ಪು ಇಲ್ಲವಾದ ಆ ಮೂರು ದಿನದ ಶೋಕ: ಅಪ್ಪು ನೆನಪು ಅಜರಾಮರ

    ಶುಕ್ರವಾರ, ಅಕ್ಟೋಬರ್‌ 29-2021- 9:am ಸುಮಾರು -

    ಆರೋಗ್ಯದಲ್ಲಿ ಏರು ಪೇರಾದ ಸಲುವಾಗಿ ಪುನೀತ್‌ ಪತ್ನಿ ಅಶ್ವಿನಿ ಜೊತೆಗೆ ಸದಾಶಿವನಗರದಲ್ಲಿರುವ ರಮಣಶ್ರೀ ಆಸ್ಪತ್ರೆ ಭೇಟಿ ನೀಡಿದ್ದರು. ಅಲ್ಲಿ ವೈದ್ಯ ಬಳಿ ತಮಗೆ ಸುಸ್ತು ಆಗುತ್ತಿರವ ಬಗ್ಗೆ ವಿವರಿಸಿದ್ದಾರೆ. ತಪಾಸಣೆ ಬಳಿಕ ಸ್ಥಿತಿ ಗಂಭೀರ ಆಗಿರುವುದನ್ನು ತಿಳಿದು ಅವರನ್ನು ಅಲ್ಲಿಂದ ಕನ್ನಿಂಗ್‌ ಹ್ಯಾಮ್‌ ರಸ್ತೆ ಬಳಿಯ ವಿಕ್ರಮ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಆಗ ಈ ಸುದ್ದಿ ಹೊರ ಬಂದಿರಲಿಲ್ಲ.

    Tear Full That Three days Because Of Puneeth Rajkumar

    ಶುಕ್ರವಾರ , ಅಕ್ಟೋಬರ್‌ 29-2021- 11:am

    ಅಕ್ಟೋಬರ್‌ 29, 2021ರ ಬೆಳಗ್ಗೆ ಕರುನಾಡು ಭಜರಂಗಿ2 ಚಿತ್ರದ ಗುಂಗಲ್ಲಿ ಇತ್ತು. ಕೊರೊನಾ ಲಾಕ್‌ಡೌನ್‌ ಬಳಿಕ ಶಿವರಾಜ್‌ಕುಮಾರ್‌ ಅವರನ್ನು ತೆರೆ ಮೇಲೆ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಆದ್ರೆ ಇದ್ದಕ್ಕಿದ್ದ ಹಾಗೆ ಸುಮಾರು 11 ಗಂಟೆಯ ಸುಮಾರಿಗೆ ಆಘಾತಕಾರಿ ಸುದ್ದಿ ಬಂತು. ಪುನೀತ್‌ ರಾಜ್‌ಕುಮಾರ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಪುನೀತ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸುದ್ದಿ ಹಬ್ಬಿತು.

    ಅಕ್ಟೋಬರ್‌ 29-2021- 11:am ರಿಂದ 2.30pm

    ವಿಕ್ರಮ್‌ ಆಸ್ಪತ್ರೆಗೆ ಅಪ್ಪು ಅವರನ್ನು ದಾಖಲಿಸಿದ ಬಳಿಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಸ್ಪತ್ರೆ ಆವರಣಕ್ಕೆ ಎಂಟ್ರಿ ಕೊಟ್ಟರು. ಅಪ್ಪು ಆರೋಗ್ಯ ಸ್ಥಿತಿ ತೀರ ಗಮಭೀರ ಅನ್ನುವ ಸುದ್ದಿಯನ್ನು ಮಾತ್ರ ಆಸ್ಪತ್ರೆ ವೈದ್ಯರು ನೀಡಿದ್ದು. ಹಾಗಾಗಿ ಗೊಂದದಲ್ಲೇ, ಅಪ್ಪುಗೆ ಏನು ಆಗದಿರಲಿ ಅನ್ನುವ ಆಶಯದಲ್ಲೇ ಎಲ್ಲರೂ ಪ್ರಾರ್ಥನೆ ಮಾಡಲು ಶುರು ಮಾಡಿದ್ದರು. ಆದ್ರೆ ಅತ್ತ ಆಸ್ಪತ್ರೆ ಕಡೆಯಿಂದ ಯಾವುದೇ ಭರವಸೆ ಬರಲೇ ಇಲ್ಲ. ಇನ್ನೂ ರಾಜಕೀಯ ಗಣ್ಯರು, ಸಿನಿಮಾ ತಾರೆಯರು ಆಸ್ಪತ್ರೆಯ ಕಡೆಗೆ ದೌಡಾಯಿಸಿದರು. ಬರುವವರೆಲ್ಲಾ ಕಣ್ಣೀರು ಹಾಕುತ್ತಲೆ ಬಂದರು. ಈ ದೃಶ್ಯವನ್ನು ಕಂಡು ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು.

    ಅಕ್ಟೋಬರ್‌ 29-2021- ಮಧ್ಯಾಹ್ನದ ನಂತರ

    ಬೆಳಗ್ಗೆಯಿಂದ ಆಶಾ ಭಾವನೆಯೊಂದಿಗೆ ಎಲ್ಲರು ಕಾಯುತ್ತಿದ್ದರು. ಆದ್ರೆ ಮಧ್ಯಾಹ್ನ ಬಳಿಕ ಸಂಪೂರ್ಣ ಚಿತ್ರಣ ಬದಲಾಗಿ ಹೋಯಿತು. ನಟ ಪುನೀತ್‌ ರಾಜ್‌ಕುಮಾರ್ ಇನ್ನಿಲ್ಲ ಅನ್ನುವ ಸುದ್ದಿ ಬಂದಪ್ಪಳಿಸಿ ಬಿಟ್ಟಿತು. ಈ ಸುದ್ದಿ ಇಂದ ಎಲ್ಲರಿಗೂ ದೊಡ್ಡ ಆಘಾತವೇ ಆಗಿ ಹೋಯಿತು. ಅಪ್ಪು ಅಭಿಮಾನಿಗಳಂತೂ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿ ಬಿಟ್ಟರು.

    Tear Full That Three days Because Of Puneeth Rajkumar

    ಅಕ್ಟೋಬರ್‌ 29-2021- ಶುಕ್ರವಾರ ಸಂಜೆ

    ಆಸ್ಪತ್ರೆಯಿಂದ ಅಪ್ಪು ಪಾರ್ಥೀವ ಶರೀರವನ್ನು ಸದಾಶಿವನಗರದ ಮನಗೆ ತರಲಾಯಿತು. ಅಲ್ಲಿ ಪೂಜೆ ಮುಗಿಸಿ ನಂತರ ಕಂಠೀರವ ಸ್ಟೇಡಿಯಂಗೆ ಮೃತ ದೇಹವನ್ನು ಕರೆದೊಯ್ಯಲಾಯಿತು.

    ಅಕ್ಟೋಬರ್‌ 30-2021- ಶನಿವಾರ

    ಬೆಂಗಳೂರಿನ ಕಂಠೀವರ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಾಗರೋಪಾದಿಯಲ್ಲಿ ಬಂದ ಅಭಿಮಾನಿ ಬಳಗ ಅಪ್ಪುಗೆ ಅಂತಿಮ ನಮನ ಸಲ್ಲಿಸಿತು. ಕನ್ನಡ ಚಿತ್ರರಂಗ, ಪರಭಾಷ ಚಿತ್ರರಂಗದ ಕಲಾವಿದರು ಬಂದು ಅಪ್ಪು ಅಂತಿಮ ದರ್ಶನ ಪಡೆದರು.

    ಅಕ್ಟೋಬರ್‌ 30-2021- ಶನಿವಾರ- ಸಂಜೆ

    ಅಮೆರಿಕಾದಿಂದ ಪುನೀತ್‌ ರಾಜ್‌ಕುಮಾರ್ ಹಿರಿಯ ಮಗಳು ಬೆಂಗಳೂರಿಗೆ ಆಗಮಿಸಿದರು. ಧೃತಿ ಅಪ್ಪನನ್ನು ಕಂಡು ಬಿಕ್ಕಿ ಅತ್ತರು. ಶನಿವಾರ ಇಡೀ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

    Tear Full That Three days Because Of Puneeth Rajkumar

    ಅಕ್ಟೋಬರ್‌ 31-2021- ಭಾನುವಾರ- ಮುಂಜಾನೆ

    ಭಾನುವಾರ ಮುಂಜಾನೆ ಪುನೀತ್‌ ರಾಜ್‌ಕುಮಾರ್ ಅಂತಿಮ ಯಾತ್ರೆಯನ್ನು ಮಾಡಲಾಯಿತು. ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋದ ವರೆಗೆ ಮೆರಣಿಗೆಯ ಮೂಲಕ ಅಪ್ಪು ಪಾರ್ಥೀವ ಶರೀರವನ್ನು ತರಲಾಯಿತು. ಕಂಠೀರವ ಸ್ಟುಡಿಯೋದಲ್ಲಿ ಪುನೀತ್‌ ರಾಜ್‌ಕುಮಾರ್ ಪಾರ್ಥೀವ ಶರೀರಕ್ಕೆೀ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

    ಅಕ್ಟೋಬರ್‌ 31-2021- 7.20am ಭಾನುವಾರ

    ಭಾನುವಾರ ಬೆಳಗ್ಗೆ 7.20ರ ವೇಳೆಗೆ ಅಪ್ಪು ದೇಹವನ್ನು ಸಮಾಧಿ ಮಾಡಲಾಯಿತು. ಇನ್ನು ಸಮಾಧಿ ಪೂಜೆಯನ್ನು ವಿನಯ್‌ ರಾಜ್‌ಕುಮಾರ್‌ ನೆರವೇರಿಸಿದರು. 9 ಗಂಟೆ ಸುಮಾರಿಗೆ ಎಲ್ಲಾ ಪೂಜಾ ಕಾರ್ಯಗಳು ಮುಕ್ತಾಯಗೊಂಡವು. ಬಳಿಕ ಕುಟುಂಬದ ಎಲ್ಲರೂ ಅಪ್ಪು ಸಮಾಧಿಗೆ ನಮನ ಸಲ್ಲಿಸಿದರು. ಇನ್ನೂ 5ನೇ ದಿನಕ್ಕೆ ಕುಟುಂಬಸ್ಥರಿಂದ ಹಾಕು-ತುಪ್ಪ ಕಾರ್ಯ ನೆರವೇರಿಸಲಾಗುವುದು. ಅಪ್ಪ-ಅಮ್ಮನ ಪಕ್ಕದಲ್ಲೇ ಪುನೀತ್‌ ರಾಜ್‌ಕುಮಾರ್ ಚಿರನಿದ್ರೆಗೆ ಜಾರಿದ್ದಾರೆ.

    Tear Full That Three days Because Of Puneeth Rajkumar

    ಈ ಮೂರು ದಿನ ಜನ ಸಾಗರ ಕಣ್ಣಿರಲ್ಲಿ ಮುಳುಗು ಎದ್ದಿದೆ. ಮೂರು ದಿನವೂ ಕರುನಾಡಿನಲ್ಲಿ ಶೋಕಾಚಾರಣೆ ನಿರಂತರವಾಗಿ ಇತ್ತು. ಎರಡೂ ದಿನವೂ ಅಭಿಮಾನಿ ಸಾಗರವೇ ಹರಿದು ಬಂತು. 10 ಲಕ್ಷಕ್ಕೂ ಹೆಚ್ಚಿನ ಜನ ಅಪ್ಪು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ ಎಂಬ ವರದಿ ಬಂದಿದೆ. ಅಪ್ಪು ಹೋದ ಗಳಿಗೆಯಿಂದ ಮಣ್ಣಲ್ಲಿ ಮಣ್ಣಾಗುವ ವರೆಗೂ ಸಾಗರೋಪಾದಿಯಲ್ಲಿ ಜನ ಬರುತ್ತಲೇ ಇದ್ದರು.

    Tear Full That Three days Because Of Puneeth Rajkumar

    46ನೇ ವಯಸ್ಸಿನಲ್ಲಿ ಅಪ್ಪು ಎಲ್ಲವನ್ನೂ ಬಿಟ್ಟು ದೂರದೂರಿಗೆ ಹೋಗಿದ್ದಾರೆ. ಸಿನಿಮಾ ತಾರೆಯರು, ಅಭಿಮಾನಿಗಳು, ಆಪ್ತರು, ಕುಟುಂಬಸ್ಥರು ಎಲ್ಲರೂ ದುಃಖದ ಮಡುವಲ್ಲಿ ಮುಳುಗಿ ಎದ್ದಿದ್ದಾರೆ. ಒಲ್ಲದ ಮನಸ್ಸಿನಿಂದ, ದುಃಖ ತಪ್ತ ಮನಸ್ಸಿನಿಂದ, ಭಾರವಾದ ಮನಸ್ಸಿನಿಂದ ಅನಿವಾರ್ಯವಾಗಿ ಪುನೀತ್‌ರಾಜ್‌ಕುಮಾರ್‌ಗೆ ವಿದಾಯ ಹೇಳಿದ್ದಾರೆ. ದೊಡ್ಡ ಮನೆಯ ಕಿರಿ ದೊರೆ ಇನ್ನಿಲ್ಲ. ಆದರೆ ಅಳಿಯದ ನೆನಪುಗಳನ್ನ ಅಚ್ಚು ಹೊತ್ತಿದ್ದಾರೆ ಅಪ್ಪು.

    English summary
    Tearful Three days Farewell to Actor Puneeth Rajkumar.. Here is timeline for emotional events.
    Sunday, October 31, 2021, 12:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X