Don't Miss!
- News
ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ದಿಕಾಶ್ಮೀರಿ ಫೈಲ್ಸ್'ನಿಂದ 'ಕಾಂತಾರ'ವರೆಗೆ: ಈ ವರ್ಷ ಡಾರ್ಕ್ ಹಾರ್ಸ್‌ಗಳಾಗಿ ಹೊರಹೊಮ್ಮಿದ ಸಿನಿಮಾಗಳಿವು
ಹಳೇ ವರ್ಷಕ್ಕೆ ಬೈ ಬೈ ಹೇಳಿ ಹೊಸ ವರ್ಷವನ್ನು ವೆಲ್‌ಕಮ್ ಮಾಡುವ ಸಮಯ ಬಂದೇಬಿಡ್ತು. ಈ ವರ್ಷ ಕನ್ನಡ ಸಿನಿಮಾಗಳಂತೂ ಅಂತರಾಷ್ಟ್ರೀಯಮಟ್ಟದಲ್ಲಿ ಸದ್ದು ಮಾಡಿದ್ದು ಸುಳ್ಳಲ್ಲ. ಅದರಲ್ಲೂ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಇಡೀ ಭಾರತೀಯ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ.
'ಕಾಂತಾರ', 'ಲವ್ ಟುಡೇ' ರೀತಿಯ ಸಿನಿಮಾಗಳು ಕಂಟೆಂಟ್ ಕಿಂಗ್ ಎನ್ನುವುದನ್ನು ಈ ವರ್ಷ ಸಾರಿ ಹೇಳಿವೆ. ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್‌ಕುಮಾರ್‌ರಂತಹ ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ಈ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ಆದರೆ ಕಡಿಮೆ ಬಜೆಟ್ಟಿನ ಸಣ್ಣ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಹುಬ್ಬೇರಿಸಿವೆ. ಅಷ್ಟೇನು ಮುಖಪರಿಚಯ ಇಲ್ಲದ ಕಲಾವಿದರ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದು ವಿಶೇಷ.
2022:
ಈ
ವರ್ಷ
ನಮ್ಮನ್ನಗಲಿದ
ಸ್ಯಾಂಡಲ್‌ವುಡ್
ತಾರೆಯರಿವರು
ವರ್ಷ ಬಾಲಿವುಡ್ ಮಂಕಾಕಿದ್ದು ಸುಳ್ಳಲ್ಲ. ಆದರೆ 'ಕಾಂತಾರ', 'ಕಾರ್ತಿಕೇಯ'- 2 ರೀತಿಯ ಸಿನಿಮಾಗಳು ಹಿಂದಿ ಬೆಲ್ಟ್‌ನಲ್ಲೂ ಅಬ್ಬರಿಸಿದ್ದವು. ಹಿಂದಿ ಪ್ರೇಕ್ಷಕರು ತೆಲುಗು, ಕನ್ನಡ ಸಿನಿಮಾಗಳನ್ನು ಅಪ್ಪಿಕೊಂಡರು.

ಎಲ್ಲೆಲ್ಲೂ 'ಕಾಂತಾರ' ಸೆನ್ಸೇಷನ್
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಡಾರ್ಕ್ ಹಾರ್ಸ್ ಆಗಿ ಹೊರಹೊಮ್ಮಿದ್ದು ಸುಳ್ಳಲ್ಲ. ಯಾವುದೇ ನಿರೀಕ್ಷೆ ಇಲ್ಲದೇ ತೆರೆಗಪ್ಪಳಿಸಿದ ಸಿನಿಮಾ ಬರೋಬ್ಬರಿ 400 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೊದಲಿಗೆ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಸಿನಿಮಾವನ್ನು ಮುಂದೆ ಬೇರೆ ಭಾಷೆಗಳಿಗೆ ರಿಲೀಸ್ ಮಾಡುವಂತೆ ಬೇಡಿಕೆ ಶುರುವಾಗಿತ್ತು. ನೋಡ ನೋಡುತ್ತಲೇ 4 ಭಾಷೆಗೆ ಡಬ್ ಆಗಿ ಸಿನಿಮಾ ಹಿಟ್ ಆಯಿತು. ಹಿಂದಿ ಬೆಲ್ಟ್‌ನಲ್ಲಿ 70 ಕೋಟಿ ಕಲೆಕ್ಷನ್ ಮಾಡ್ತು. ರಿಷಬ್ ಶೆಟ್ಟಿ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು.

ಎಪಿಕ್ ಲವ್ ಸ್ಟೋರಿ 'ಸೀತಾರಾಮಂ'
ಮಲಯಾಳಂ ಹೀರೊ, ಮರಾಠಿ ಹೀರೊಯಿನ್ ಸೇರಿ ತೆಲುಗು ಸಿನಿಮಾದಲ್ಲಿ ನಟಿಸಿದರೆ ಅಷ್ಟೇನು ಕುತೂಹಲ ಇರುವುದಿಲ್ಲ. 'ಸೀತಾರಾಮಂ' ಬಿಡುಗಡೆ ವೇಳೆಯೂ ಯಾರು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಜೊತೆ ರಶ್ಮಿಕಾ ಮಂದಣ್ಣ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು. ಹನು ರಾಘವಪುಡಿ ನಿರ್ದೇಶನದ ಈ ಎಪಿಕ್ ಲವ್ ಸ್ಟೋರಿ ಹಿಂದಿಗೂ ಡಬ್ ಆಗಿ ಸಕ್ಸಸ್ ಆಯಿತು. ಓಟಿಟಿಯಲ್ಲೂ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.

ಬಾಲಿವುಡ್‌ನಲ್ಲಿ 'ಕಾರ್ತಿಕೇಯ- 2' ಹವಾ
ತೆಲುಗಿನ 'ಕಾರ್ತಿಕೇಯ- 2' ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ರಮೋಷನ್ ಮಾಡೋದಕ್ಕೂ ಸರಿಯಾದ ಬಜೆಟ್ ಇಲ್ಲದೇ ಸಿನಿಮಾ ರಿಲೀಸ್ ಆದರೆ ಸಾಕು ಎಂದುಕೊಂಡು ಕಾಟಾಚಾರಕ್ಕೆ ರಿಲೀಸ್ ಮಾಡಿದ ಸಿನಿಮಾ ಇದು. ನಿಖಿಲ್ ಸಿದ್ದಾರ್ಥ್ ಹಾಗೂ ಅನುಪಮಾ ಪರಮೇಶ್ವರನ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ದ್ವಾರಕೆಯ ಶ್ರೀಕೃಷ್ಣನ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಹಾಗಾಗಿ ಉತ್ತರಭಾರತದ ಪ್ರೇಕ್ಷಕರು ಚಿತ್ರಕ್ಕೆ ಕನೆಕ್ಟ್ ಆಗಿದ್ದರು. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿತ್ತು.

'ದಿ ಕಾಶ್ಮೀರಿ ಫೈಲ್ಸ್' ದಾಖಲೆ
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ವಿಚಾರವನ್ನಿಟ್ಟುಕೊಂಡು 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಕಟ್ಟಿಕೊಟ್ಟಿದ್ದರು. ಬಾಲಿವುಡ್ ಸ್ಟಾರ್ ನಟರು ಯಾರು ಈ ಚಿತ್ರದಲ್ಲಿ ನಟಿಸಿರಲಿಲ್ಲ. ಮಿಥುನ್ ಚಕ್ರವರ್ತಿ, ಅನುಪಮ್ ಕೇರ್‌ರಂತಹ ಹಿರಿಯ ಅನುಭವಿ ಕಲಾವಿದರು ಚಿತ್ರದಲ್ಲಿದ್ದರು. 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೀತು. ಸಿನಿಮಾ ನೋಡುತ್ತಾ ಪ್ರೇಕ್ಷಕರು ಕಾಶ್ಮೀರದಲ್ಲಿ ನಡೆದ ಪಂಡಿತರ ಕುಟುಂಬಗಳ ಮೇಲಿನ ದೌರ್ಜನ್ಯವನ್ನು ಊಹಿಸಿಕೊಂಡು ಭಾವುಕರಾಗಿದ್ದರು.

ಸಣ್ಣ ಚಿತ್ರಗಳ ದೊಡ್ಡ ಸಾಧನೆ
ಧನುಷ್ ನಟನೆಯ ತಮಿಳಿನ 'ತಿರುಚಿತ್ರಾಂಬಲಂ', ತೆಲುಗಿನ 'ಲವ್ ಟುಡೇ', ಮಲಯಾಳಂನ 'ಜಯ ಜಯ ಜಯ ಹೇ' ಸಿನಿಮಾಗಳು ಕೂಡ ಇದೇ ರೀತಿ ಎಲ್ಲರ ನಿರೀಕ್ಷೆ ಮೀರಿ ಸಕ್ಸಸ್ ಕಂಡಿವೆ. ಭಾಷೆಯ ಗಡಿಮೀರಿ ಪ್ರೇಕ್ಷಕರನ್ನು ರಂಜಿಸಿವೆ, ಆವರಿಸಿಕೊಂಡಿವೆ. ಬಜೆಟ್‌ಗಿಂತ ಹೆಚ್ಚು ಬ್ಯುಸಿನೆಸ್ ಮಾಡಿವೆ. ಬಜೆಟ್, ಸ್ಟಾರ್‌ಕಾಸ್ಟ್ ಮುಖ್ಯ ಅಲ್ಲ, ಕಂಟೆಂಟ್ ಮುಖ್ಯ, ಎಂದು ಸಾರಿ ಹೇಳಿವೆ.