twitter
    For Quick Alerts
    ALLOW NOTIFICATIONS  
    For Daily Alerts

    ಕೇಂದ್ರ ಬಜೆಟ್ 2022: ಚಿತ್ರರಂಗದ ನಿರೀಕ್ಷೆಗಳೇನು?

    |

    ಕೇಂದ್ರ ಬಜೆಟ್ 2022 ನಾಳೆ (ಫೆಬ್ರವರಿ 01) ಮಂಡನೆ ಆಗಲಿದೆ. ಪ್ರತಿ ಬಾರಿಯ ಬಜೆಟ್‌ನಂತೆ ಈ ಬಾರಿಯೂ ಬಜೆಟ್‌ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

    ಪಂಚ ರಾಜ್ಯ ಚುನಾವಣೆ ಘೋಷಣೆ ಆಗಿದ್ದು, ಎರಡು ರಾಜ್ಯಗಳು ಚುನಾವಣಾ ಹೊಸ್ತಿಲಲ್ಲಿ ಇರುವ ಕಾರಣ ಈ ಬಾರಿಯ ಬಜೆಟ್ 'ಜನಪ್ರಿಯ ಬಜೆಟ್' ಆಗಿರಲಿದೆ ಎಂಬುದು ಸುಲಭವಾಗಿ ಊಹಿಸಬಹುದಾದ ವಿಷಯ.

    ಕೊರೊನಾದಿಂದ ತತ್ತರಿಸಿದ್ದ ಸಣ್ಣ ಉದ್ದಿಮೆಗಳು, ಬೃಹತ್ ಉದ್ದಿಮೆಗಳು ದೇಶದ ವಿವಿಧ ವಲಯಗಳು ಪುನಶ್ಚೇತನ ಹಂತದಲ್ಲಿವೆ. ಉದ್ದಿಮೆಗಳ ಪುನಶ್ಚೇತನಕ್ಕೆ ನೆರವು ಸಿಗಬಹುದೆಂದು ಎಲ್ಲ ವಲಯಗಳು ಬಜೆಟ್‌ನತ್ತ ಕಾತರದ ಕಣ್ಣುಗಳಿಂದ ನೋಡುತ್ತಿದೆ. ಕೊರೊನಾದಿಂದ ತತ್ತರಿಸಿದ ಉದ್ದಿಮೆಗಳಲ್ಲಿ ಪ್ರಮುಖವಾದುದು ಮನರಂಜನಾ ವಲಯ ಸಹ ಒಂದು. ಆದರೆ ಕೇಂದ್ರ ಮಾತ್ರವೇ ಅಲ್ಲ ರಾಜ್ಯ ಬಜೆಟ್‌ಗಳು ಸಹ ಸಿನಿಮಾ ಅಥವಾ ಮನೊರಂಜನಾ ಉದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಟ್ಟ ಉದಾಹರಣೆ ಕಡಿಮೆ. ಆದರೂ ಪ್ರತಿಬಾರಿಯಂತೆಯೂ ಈ ಬಾರಿಯೂ ಬಜೆಟ್‌ ಮೇಲೆ ಕೆಲ ನಿರೀಕ್ಷೆಗಳನ್ನು ಮನರಂಜನಾ ಉದ್ದಿಮೆ ಇಟ್ಟುಕೊಂಡಿದೆ.

    ಜಿಎಸ್‌ಟಿ ಕಡಿತವೇ ಪ್ರಧಾನ ಬೇಡಿಕೆ

    ಜಿಎಸ್‌ಟಿ ಕಡಿತವೇ ಪ್ರಧಾನ ಬೇಡಿಕೆ

    ಕೊರೊನಾದಿಂದ ತತ್ತರಿಸಿರುವ ಭಾರತೀಯ ಚಿತ್ರರಂಗ ಕೇಂದ್ರದಿಂದ ನಿರೀಕ್ಷಿಸುತ್ತಿರುವ ಪ್ರಮುಖ ಅಂಶ ಜಿಎಸ್‌ಟಿ ಇಳಿಕೆ. ಮನರಂಜನೆ ಸೇವೆ ಮೇಲೆ 28% ಜಿಎಸ್‌ಟಿ ವಿಧಿಸಿರುವುದು ಚಿತ್ರರಂಗ ಹಾಗೂ ಇತರೆ ಮನರಂಜನಾ ಉದ್ದಿಮೆಗಳ ಬೆಳವಣಿಗೆಗೆ ದೊಡ್ಡ ಪೆಟ್ಟು. ಹಾಗಾಗಿ ಮನರಂಜನಾ ಸೇವೆಗಳ ಮೇಲಿನ ಜಿಎಸ್‌ಟಿ ಇಳಿಸಬೇಕೆಂಬ ಬೇಡಿಕೆಯನ್ನು ಮನರಂಜನಾ ಉದ್ದಿಮೆ ಹೊಂದಿದೆ. ಜೊತೆಗೆ ಚಿತ್ರಮಂದಿರಗಳ ಟಿಕೆಟ್‌ ಮೇಲಿನ ಜಿಎಸ್‌ಟಿ ತಗ್ಗಿಸಬೇಕೆಂಬ ಬೇಡಿಕೆಯೂ ಚಿತ್ರರಂಗಕ್ಕಿದೆ. ಕನಿಷ್ಟ, ಕೊರೊನಾ ಹೊಡೆತದಿಂದ ಚಿತ್ರರಂಗ ಸುಧಾರಿಸಿಕೊಳ್ಳುವವರೆಗೆ ಚಿತ್ರಮಂದಿರಗಳ ಟಿಕೆಟ್ ಮೇಲಿನ ಜಿಎಸ್‌ಟಿ ಕಡಿತಗೊಳಿಸಬೇಕೆಂಬುದು ಚಿತ್ರರಂಗದ ಬೇಡಿಕೆಯಾಗಿದೆ. ಟಿಕೆಟ್‌ಗಳ ಮೇಲೆ 28% ಜಿಎಸ್‌ಟಿ ವಿಧಿಸಲಾಗುತ್ತಿದೆ.

    ಸಿನಿಮಾ ನಿರ್ಮಾಪಕರಿಗೆ ಸಾಲ ಸೌಲಭ್ಯ

    ಸಿನಿಮಾ ನಿರ್ಮಾಪಕರಿಗೆ ಸಾಲ ಸೌಲಭ್ಯ

    ಬಾಲಿವುಡ್ ಸೇರಿದಂತೆ ಹಲವು ಸಿನಿಮಾ ರಂಗಗಳಲ್ಲಿ ಸಿನಿಮಾ ನಿರ್ಮಾಪಕರು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳ ಮೂಲಕ ಸಾಲ ಪಡೆದು ವಾರ್ಷಿಕ 25%ಕ್ಕೂ ಅಧಿಕ ಬಡ್ಡಿ ನೀಡುತ್ತಿರುವ ಉದಾಹರಣೆ ಇದೆ. ಕೆಲವು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಸಿನಿಮಾ ನಿರ್ಮಾಪಕರಿಗೆ ಬಡ್ಡಿಗೆ ಹಣ ನೀಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಸಿನಿಮಾ ನಿರ್ಮಾಪಕರಿಗೆ ವಿಶೇಷ ಸಾಲ ಸೌಲಭ್ಯವನ್ನು ಸರ್ಕಾರವೇ ನೀಡುವ ಅಥವಾ ಬ್ಯಾಂಕ್‌ಗಳ ಮೂಲಕ ಕೊಡಿಸುವ ವ್ಯವಸ್ಥೆಯ ಬಗ್ಗೆಯೂ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಇದು ಜಾರಿ ಆಗಬಹುದೇ ಎಂಬ ನಿರೀಕ್ಷೆ ಇದೆ.

    ರಂಗಭೂಮಿಗೆ ನೆರವು ಬೇಕಿದೆ

    ರಂಗಭೂಮಿಗೆ ನೆರವು ಬೇಕಿದೆ

    ಸಿನಿಮಾ ಮಾತ್ರವೇ ಅಲ್ಲದೆ ರಂಗಭೂಮಿಗೂ ಸರ್ಕಾರದ ನೆರವಿನ ಅಗತ್ಯತೆ ಇದೆ. ಕಳೆದ ಎರಡು ವರ್ಷದಿಂದ ಚಟುವಟಿಕೆಗಳು ನಡೆಯದೆ ರಂಗಭೂಮಿ ಚಿತ್ರಮಂದಿರಗಳು ತೀವ್ರ ಸಂಕಷ್ಟದಲ್ಲಿವೆ ಇವುಗಳ ಪುನಶ್ಚೇತನಕ್ಕೆ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ಘೋಸಿಸಬೇಕೆಂಬ ನಿರೀಕ್ಷೆ ಇದೆ. ಜೊತೆಗೆ ಕಳೆದ ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿರುವ ರಂಗಭೂಮಿ ಕಲಾವಿದರು, ತಂತ್ರಜ್ಞರಿಗೂ ಪರಿಹಾರ ಬೇಕಿದೆ. ಈ ಬಗ್ಗೆಯೂ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ.

    ಟಿವಿ ಉದ್ದಿಮೆಗಳ ಬೇಡಿಕೆ

    ಟಿವಿ ಉದ್ದಿಮೆಗಳ ಬೇಡಿಕೆ

    ಡಿಟಿಎಚ್‌ ಸೇವೆ ಮೇಲೆ ಜಿಎಸ್‌ಟಿ ಹೆಚ್ಚಳ ಮಾಡಿರುವುದು ಟಿವಿ ರಂಗದವರ ಪ್ರಧಾನ ಅಸಮಾಧಾನ. ಡಿಟಿಎಚ್ ಸೇವೆಗಳ ಮೇಲೆ ಜಿಎಸ್‌ಟಿ ಇಳಿಕೆಯ ಜೊತೆಗೆ ಕಿರುತೆರೆ ಕಂಟೆಂಟ್ ನಿರ್ಮಾಣ ಮಾಡುವವರಿಗೆ ಸೂಕ್ತ ಮೂಲಭೂತ ಸೌಲಭ್ಯದ ಬೇಡಿಕೆ ಇದೆ. ಜೊತೆಗೆ ಕಲಾವಿದರಿಗೆ ವಿಮೆ, ಆರೋಗ್ಯ ವಿಮೆಯ ಬೇಡಿಕೆಯಂತೂ ಬಹಳ ಹಳೆಯದ್ದು.

    ಪ್ರಾದೇಶಿಕ ಚಿತ್ರರಂಗಗಳಿಗೆ ಬೆಂಬಲ

    ಪ್ರಾದೇಶಿಕ ಚಿತ್ರರಂಗಗಳಿಗೆ ಬೆಂಬಲ

    ಪ್ರಾದೇಶಿಕ ಭಾಷೆಯ ಸಿನಿಮಾಗಳು, ವೆಬ್ ಸರಣಿಗಳು ಇತ್ತೀಚಿಗೆ ಸಾಕಷ್ಟು ಸದ್ದು ಮಾಡುತ್ತಿರುವ ಕಾರಣ ಪ್ರಾದೇಶಿಕ ಭಾಷೆಗಳ ಸಿನಿಮಾ ರಂಗಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ನೆರವು ಘೋಷಿಸುವ ನಿರೀಕ್ಷೆ ಇದೆ. ಜೊತೆಗೆ ಸಿನಿಮಾ ಅಕಾಡೆಮಿ, ಸಿನಿಮಾ ಶಾಲೆ, ನಾಟಕ ಅಕಾಡೆಮಿ, ವಿವಿ ಸ್ಥಾಪನೆಯ ಬೇಡಿಕೆಯೂ ಇದೆ. ಇವುಗಳ ಜೊತೆಗೆ ಚಿತ್ರರಂಗಕ್ಕೆ, ಸಿನಿಮಾ ನಿರ್ಮಾಣಕ್ಕೆ ಅಗತ್ಯ ಮೂಲ ಭೂತ ಸೌಲಭ್ಯದ ಕೊರತೆ ಇದೆ. ಅದನ್ನು ಒದಗಿಸುವ ಕಾರ್ಯವನ್ನು ಸರ್ಕಾರಗಳು ಮಾಡಬೇಕಿದೆ.

    ನಿರ್ಮಾಪಕರು, ವಿತರಕರಿಗೆ ಪರಿಹಾರ

    ನಿರ್ಮಾಪಕರು, ವಿತರಕರಿಗೆ ಪರಿಹಾರ

    ಸಿನಿಮಾ ರಂಗಕ್ಕೆ ಕೊರೊನಾ ಪರಿಹಾರ: ಕೊರೊನಾದಿಂದಾಗಿ ಚಿತ್ರರಂಗ ತೀವ್ರವಾಗಿ ಹೊಡೆತ ತಿಂದಿದ್ದು, ನಷ್ಟ ಅನುಭವಿಸಿರುವ ನಿರ್ಮಾಪಕರಿಗೆ, ಸಿನಿಮಾ ವಿತರಕರಿಗೆ ಪರಿಹಾರ ನೀಡುವುದು ಸಹ ಚಿತ್ರರಂಗದ ಬೇಡಿಕೆಗಳಲ್ಲಿ ಒಂದು. ನಷ್ಟ ಅನುಭವಿಸಿರುವ ಚಿತ್ರಮಂದಿರಗಳಿಗೆ ಜಿಎಸ್‌ಟಿ ಇಳಿಕೆ ಮೂಲಕ ಪರಿಹಾರ ನೀಡಬೇಕೆಂಬ ಬೇಡಿಕೆ ಜೊತೆಗೆ ಸಿನಿಮಾ ಸಬ್ಸಿಡಿ ಹೆಚ್ಚಳದ ಬೇಡಿಕೆಯೂ ಇದೆ. ಸಿಬಿಎಫ್‌ಸಿ ಸಮಸ್ಯೆ ಪರಿಹಾರ, ಪ್ರಶಸ್ತಿಗಳ ಮೊತ್ತ ಏರಿಕೆ ಇನ್ನೂ ಕೆಲವು ಬೇಡಿಕೆಗಳು ಇವೆ.

    ಚಿತ್ರರಂಗ ಸಣ್ಣ ಉದ್ದಿಮೆಯಲ್ಲ!

    ಚಿತ್ರರಂಗ ಸಣ್ಣ ಉದ್ದಿಮೆಯಲ್ಲ!

    ಭಾರತೀಯ ಚಿತ್ರರಂಗವು ಸಣ್ಣ ಉದ್ದಿಮೆಯಲ್ಲ. 2019ರಲ್ಲಿ 1.20 ಲಕ್ಷ ಕೋಟಿ ವ್ಯವಹಾರವನ್ನು ಚಿತ್ರರಂಗ ಮಾಡಿದೆ. ಆ ಮೂಲಕ ಲಕ್ಷಾಂತರ ಕೋಟಿ ನೇರ ಹಾಗೂ ಪರೋಕ್ಷ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದೆ. ಜೊತೆಗೆ ದೇಶದ ಜಿಡಿಪಿಗೆ 1 ಶೇಕಡಾಕ್ಕಿಂತಲೂ ಹೆಚ್ಚಿನ ಕೊಡುಗೆಯನ್ನು ಚಿತ್ರರಂಗ ನೀಡುತ್ತಾ ಬಂದಿದೆ. ಹಿಂದಿನಿಂದಲೂ ನೀಡುತ್ತಾ ಬಂದಿದೆ. ಹಾಗಾಗಿ ಈಗ ಕೊರೊನಾ ಕಾಲದಲ್ಲಿ ಕಷ್ಟದಲ್ಲಿರುವ ಚಿತ್ರರಂಗ ಕೇಂದ್ರ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ ಕೇಂದ್ರವು ಚಿತ್ರರಂಗದ ನಿರೀಕ್ಷೆಗಳನ್ನು ಈಡೇರಿಸುತ್ತದೆಯೇ ಇಲ್ಲವೇ ಕಾದು ನೋಡಬೇಕಿದೆ.

    English summary
    Union Budget 2022: Entertainment industry, specially movie and Tv industry has lot more expectations from this budget.
    Monday, January 31, 2022, 18:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X