For Quick Alerts
  ALLOW NOTIFICATIONS  
  For Daily Alerts

  2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು

  |

  ಒಟಿಟಿಗಳಿಗೆ ಅತಿದೊಡ್ಡ ಸಂಕ್ರಮಣ ಕಾಲ 2020. ಆಮೆ ವೇಗದಲ್ಲಿದ್ದ ಒಟಿಟಿಗಳಿಗೆ ಚಿರತೆ ವೇಗವನ್ನು ನೀಡಿದ್ದು ವರ್ಷಾರಂಭದಲ್ಲಿಯೇ ವಕ್ಕರಿಸಿದ ಕೊರೊನಾ ಲಾಕ್‌ಡೌನ್. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಟಿಟಿಗಳ ವೀವರ್‌ಶಿಪ್‌ನಲ್ಲಿ ಅಂದಾಜು 300% ಪಟ್ಟು ಹೆಚ್ಚಳವಾಗಿದೆ!

  ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ ಅಂತೂ ಭಾರತೀಯ ಕಂಟೆಂಟ್‌ ಮೇಲೆ ಕೋಟ್ಯಂತರ ಹಣ ಸುರಿದಿದ್ದು, ಭಾರತೀಯ ಮಾರುಕಟ್ಟೆ ಮೇಲೆ ಭವಿಷ್ಯದಲ್ಲಿ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಇದಕ್ಕೆ ಕಾರಣ, ಈ ವರ್ಷ ಭಾರತೀಯರು ನೆಟ್‌ಫ್ಲಿಕ್ಸ್‌ ಕಂಟೆಂಟ್‌ಗಳನ್ನು ವೀಕ್ಷಿಸಿರುವ ಪ್ರಮಾಣ.

  2020: ಕನ್ನಡ ಚಿತ್ರರಂಗದಲ್ಲಿ ವಿವಾದಗಳಿಂದ ಸುದ್ದಿಯಾದ ನಟ-ನಟಿಯರು

  ಇದೀಗ 2020 ರ ವರ್ಷಾಂತ್ಯದಲ್ಲಿ, ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಯಾವ ಸಿನಿಮಾಗಳು, ವೆಬ್ ಸರಣಿ, ಡಾಕ್ಯುಮೆಂಟರಿಗಳನ್ನು ಹೆಚ್ಚು ನೋಡಿದ್ದಾರೆ ಎಂಬ ಪಟ್ಟಿಯನ್ನು ನೆಟ್‌ಫ್ಲಿಕ್ಸ್‌ ಇಂಡಿಯಾ ಬಿಡುಗಡೆ ಮಾಡಿದ್ದು. ದಕ್ಷಿಣ ಭಾರತದ ಕೆಲವು ಸಿನಿಮಾಗಳು ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿರುವುದು ವಿಶೇಷ.

  ಟಾಪ್ ಟೆನ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳು

  ಟಾಪ್ ಟೆನ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳು

  ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಥ್ರಿಲ್ಲರ್ ಸಿನಿಮಾ, 'ರಾತ್ ಅಕೇಲಿ ಹೈ'. ಹೆಚ್ಚು ನೋಡಲ್ಪಟ್ಟ ಆಕ್ಷನ್ ಸಿನಿಮಾ, 'ಎಕ್ಸ್‌ಟ್ರಾಕ್ಷನ್', 'ಮಲಂಗ್', 'ದಿ ಓಲ್ಡ್ ಗಾರ್ಡ್‌'. ಹೆಚ್ಚು ವೀಕ್ಷಿಸಲ್ಪಟ್ಟ ಕಾಮಿಡಿ ಸಿನಿಮಾ, ಹಿಂದಿಯ 'ಲೂಡೊ'. ತೆಲುಗಿನ ಅಲಾ ವೈಕುಂಟಪುರಂಲೊ, ತಮಿಳಿನ ಕನ್ನುಂ ಕನ್ನುಂ ಕೊಲಯಾಡಿತ್ತಾಲ್, ಮಲಯಾಳಂನ ಕಪ್ಪೆಲಾ, ತೆಲುಗಿನ ಉಮಾ ಮಹೇಶ್ವರ ಉರಗ ರೂಪಸ್ಯ ಸಿನಿಮಾಗಳು ನೆಟ್‌ಫ್ಲಿಕ್ಸ್‌ನ ವಿವಿಧ ವಿಭಾಗಗಳಲ್ಲಿ ಟಾಪ್ 10 ರಲ್ಲಿರುವ ಇತರೆ ಭಾರತೀಯ ಸಿನಿಮಾಗಳು ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ ನೆಟ್‌ಫ್ಲಿಕ್ಸ್‌ ಇಂಡಿಯಾ.

  ಹೆಚ್ಚು ವೀಕ್ಷಿಸಲ್ಪಟ್ಟ ಮಹಿಳಾ ಪ್ರಧಾನ ಸಿನಿಮಾಗಳು

  ಹೆಚ್ಚು ವೀಕ್ಷಿಸಲ್ಪಟ್ಟ ಮಹಿಳಾ ಪ್ರಧಾನ ಸಿನಿಮಾಗಳು

  ಮಹಿಳಾ ಪ್ರಧಾನ ಸಿನಿಮಾ ವಿಭಾಗದಲ್ಲಿ, 'ಗುಂಜನ್ ಸಕ್ಸೆನಾ; ದಿ ಕಾರ್ಗಿಲ್ ಗರ್ಲ್', ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಆಗಿದೆ. ಗಿಲ್ಟಿ ಗೆ ಎರಡನೇ ಸ್ಥಾನ. ಮಸಾಬಾ-ಮಸಾಬಾ, ಬುಲ್‌-ಬುಲ್, ಶೀ, ನೆವರ್ ಹ್ಯಾವ್ ಐ ಎವರ್, ಎಮಿಲಿ ಇನ್ ಪ್ಯಾರಿಸ್ ವೆಬ್ ಸರಣಿಗಳನ್ನು ಹೆಚ್ಚು ವೀಕ್ಷಿಸಲಾಗಿದೆ.

  ಬಾಲಿವುಡ್ ನಲ್ಲಿ ಈ ವರ್ಷ ಸದ್ದು ಮಾಡಿದವರು-ಸುದ್ದಿ ಮಾಡಿದವರು

  ಪ್ರೇಮ ಪ್ರಧಾನ ಸಿನಿಮಾಗಳು

  ಪ್ರೇಮ ಪ್ರಧಾನ ಸಿನಿಮಾಗಳು

  ಪ್ರೇಮಕತೆ ಆಧಾರಿತ ಸಿನಿಮಾಗಳ ವೀಕ್ಷಣೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 250% ಹೆಚ್ಚಳವಾಗಿದೆಯಂತೆ. ಲವ್ ಆಜ್ ಕಲ್, ಗಿನ್ನಿ ವೆಡ್ಸ್ ಸನ್ನಿ, ಮಿಸ್‌ ಮ್ಯಾಚ್ಡ್‌ ಹೆಚ್ಚು ವೀಕ್ಷಿಸಲ್ಪಟ್ಟ ಲವ್ ಸ್ಟೋರಿ ಸಿನಿಮಾಗಳು.

  ಇತರ ಭಾಷೆಯ ವೆಬ್ ಸರಣಿ, ಸಿನಿಮಾಗಳು

  ಇತರ ಭಾಷೆಯ ವೆಬ್ ಸರಣಿ, ಸಿನಿಮಾಗಳು

  ಹಿಂದಿ ಹೊರತುಪಡಿಸಿ ಬೇರೆ ಭಾಷೆಯ ವೆಬ್ ಸರಣಿಗಳನ್ನು ಸಹ ಈ ವರ್ಷ ಭಾರತದಲ್ಲಿ ಹೆಚ್ಚು ವೀಕ್ಷಿಸಲಾಗಿದೆ. ಜರ್ಮನ್‌ ನ ವೆಬ್ ಸರಣಿ 'ಡಾರ್ಕ್', ಸ್ಪ್ಯಾನಿಷ್‌ನ ಮನಿ ಹೈಸ್ಟ್‌ ಭಾರತದಲ್ಲಿ ವೀಕ್ಷಿಸಲ್ಪಟ್ಟ ಟಾಪ್ ವೆಬ್ ಸರಣಿಗಳು. ಇದರ ಜೊತೆಗೆ ಟರ್ಕಿಯ 'ದಿ ಪ್ರೊಟೆಕ್ಟರ್', ಪೊಕೆಮಾನ್, ಬ್ಲಡ್ ಆಫ್ ಜೀವ್ಸ್ ಗಳನ್ನು ಸಹ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಿಂದಿಯ 'ಜಮ್ತಾರ; ಸಬ್‌ ಕಾ ನಂಬರ್ ಆಯೆಗಾ' ವೆಬ್ ಸರಣಿ ಸಹ ಹೆಚ್ಚು ವೀಕ್ಷಣೆಯಾಗಿದೆ.

  2020ರಲ್ಲಿ ಹೊಸ ಜೀವನ ಆರಂಭಿಸಿದ ಸೌತ್ ತಾರೆಯರು

  ಕೊರಿಯನ್ ಸಿನಿಮಾಗಳ ವೀಕ್ಷಣೆಯಲ್ಲಿ ಭಾರಿ ಹೆಚ್ಚಳ

  ಕೊರಿಯನ್ ಸಿನಿಮಾಗಳ ವೀಕ್ಷಣೆಯಲ್ಲಿ ಭಾರಿ ಹೆಚ್ಚಳ

  ಭಾರತೀಯ ವೀಕ್ಷಕರು ಕೊರಿಯನ್ ಸಿನಿಮಾಗಳಲ್ಲಿ ಭಾರಿ ಕುತೂಹಲ ಹೊಂದಿದ್ದಾರೆ ಎನ್ನುತ್ತಿದೆ ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿರುವ ಅಂಕಿ-ಅಂಶ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊರಿಯನ್ ಸಿನಿಮಾಗಳ ವೀಕ್ಷಣೆಯಲ್ಲಿ 390% ಹೆಚ್ಚಾಗಿದೆ. ಈ ವರ್ಷ ದಿ ಕಿಂಗ್, ಕಿಂಗ್‌ಡಮ್, ಇಟ್ಸ್ ಓಕೆ ನಾಟ್ ಟು ಬಿ ಓಕೆ, ಸ್ಟಾರ್ಟ್ ಅಪ್ ಕೊರಿಯನ್ ಸಿನಿಮಾಗಳನ್ನು ಭಾರತೀಯರು ಹೆಚ್ಚು ನೋಡಿದ್ದಾರೆ.

  ಮಕ್ಕಳ ಸಿನಿಮಾ ವಿಭಾಗ

  ಮಕ್ಕಳ ಸಿನಿಮಾ ವಿಭಾಗ

  ಮಕ್ಕಳ ಸಿನಿಮಾ ವಿಭಾಗವು ಸಹ ಕಳೆದ ವರ್ಷಕ್ಕೆ ಹೋಲಿಸಿದರೆ 100% ಹೆಚ್ಚು ವೀಕ್ಷಣೆ ಕಂಡಿದೆ. ಬೇಬಿ ಬಾಸ್‌, ಓವರ್ ದಿ ಮೂನ್, ಫೀಲ್ ದಿ ಬೀಟ್, ಮೈಟಿ ಲಿಟಲ್ ಭೀಮ್ ಸಿನಿಮಾಗಳನ್ನು ಹೆಚ್ಚು ಮಂದಿ ನೋಡಿದ್ದಾರೆ ಈ ವರ್ಷ.

  English summary
  What India watched on Netflix in year 2020. Netflix released the top viewed movie and web series list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X