For Quick Alerts
  ALLOW NOTIFICATIONS  
  For Daily Alerts

  ಕಪಿಲ್ ದೇವ್-ಬಾಲಿವುಡ್ ನಟಿ ಸಾರಿಕಾಳ ಒಂದು ಮಧುರ ಪ್ರೇಮ ಕಥೆ

  By ರವೀಂದ್ರ ಕೊಟಕಿ
  |

  ಐತಿಹಾಸಿಕ 83ರ ವರ್ಲ್ಡ್ ಕಪ್ ಗೆದ್ದ ಭಾರತ ತಂಡದ ಯಶೋಗಾಥೆಯನ್ನು ಹೊತ್ತು ತರುತ್ತಿರುವ ಬಹುನಿರೀಕ್ಷಿತ ಬಾಲಿವುಡ್ ಚಿತ್ರ '83' ಇದೇ ಡಿಸೆಂಬರ್ ಮಾಸದ 25ರಂದು ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ. ಖ್ಯಾತ ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ನಿರ್ದೇಶನದಲ್ಲಿ, ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ '83' ವರ್ಲ್ಡ್ ಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಸಾಧನೆಯ ಸುತ್ತಲೂ ಹೆಣೆಯಲಾದ ಬಯೋಪಿಕ್ ಇದು. 83ರ ವರ್ಲ್ಡ್ ಕಪ್ ಮೊದಲ ಬಾರಿಗೆ ಭಾರತ ವರ್ಲ್ಡ್ ಕಪ್ ಗೆದ್ದ ವರ್ಷವದು.

  ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಒನ್ ಡೇ ತಂಡ ಅದು. ಕೃಷ್ಣಮಾಚಾರಿ ಶ್ರೀಕಾಂತ್, ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ದಿಲೀಪ್ ವೆಂಗಸರ್ಕಾರ್, ಮಹಿಂದ್ರ ಅಮರನಾಥ್, ಸೈಯದ್ ಕಿರ್ಮಾನಿ, ಮದನ್ ಲಾಲ್, ಸಂದೀಪ್ ಪಾಟೀಲ್ ಜೊತೆಗೆ ಈ ತಂಡವನ್ನು ಮುನ್ನಡೆಸಿದ 1983ರಲ್ಲಿ ವಿಶ್ವಕಪ್ ಗೆದ್ದು ತಂದುಕೊಟ್ಟ ಮಹಾನ್ ನಾಯಕ ಕಪಿಲ್ ದೇವ್. ಕಬೀರ್ ಖಾನ್ ನಿರ್ದೇಶನದಲ್ಲಿ 83ರ ಭಾರತೀಯ ಕ್ರಿಕೆಟ್ ತಂಡದ ಐತಿಹಾಸಿಕ ವಿಜಯದ ಪ್ರತಿಕ್ಷಣವೂ ಕೂಡ ರೋಚಕವಾಗಿ ತೆರೆಯ ಮೇಲೆ ಮೂಡಿಬರಲಿದೆ ಅಂತ ಪ್ರತಿ ಕ್ರಿಕೆಟ್ ಪ್ರೇಮಿಯು ನಿರೀಕ್ಷಿಸುತ್ತಿದ್ದಾನೆ.

  ತಂದೆ-ತಾಯಿ ವಿಚ್ಛೇದನ ಪಡೆದು ದೂರ ಆದಾಗ ಸಂತೋಷ ಪಟ್ಟಿದ್ದೆ; ಶ್ರುತಿ ಹಾಸನ್ ತಂದೆ-ತಾಯಿ ವಿಚ್ಛೇದನ ಪಡೆದು ದೂರ ಆದಾಗ ಸಂತೋಷ ಪಟ್ಟಿದ್ದೆ; ಶ್ರುತಿ ಹಾಸನ್

  ನಿಸ್ಸಂದೇಹವಾಗಿ 83ರ ವರ್ಲ್ಡ್ ಕಪ್ ಹೀರೋ, ಭಾರತೀಯರ ಹೆಮ್ಮೆಯ ಆಟಗಾರ ಕಪಿಲ್ ದೇವ್. ಭಾರತೀಯರ ಆರಾಧ್ಯ ಆಟಗಾರ ಕಪಿಲ್ ದೇವ್ ಅವರ ಪ್ರೇಮಕಥೆಯ ಬಗ್ಗೆ ಎಷ್ಟು ಮಂದಿಗೆ ಗೊತ್ತಿದೆ? ಇಂದು ಕಪಿಲ್ ದೇವ್ ತನ್ನ ಪ್ರೀತಿಯ ಪತ್ನಿ ರೋಮಿ ಜೊತೆ ಅತ್ಯಂತ ಸಂತೋಷವಾಗಿ ಜೀವನ ಕಳೆಯುತ್ತಿದ್ದಾರೆ. ಆದರೆ ನಿಮಗೆ ಗೊತ್ತಾ ಕಪಿಲ್ ದೇವ್ ರೋಮಿ ಅವರನ್ನು ಮದುವೆ ಆಗುವುದಕ್ಕೆ ಮೊದಲು ಕಪಿಲ್ ಜೀವನದಲ್ಲಿ ಮತ್ತೊಂದು ಪ್ರೇಮ ನಡೆದಿತ್ತು! ಕಪಿಲ್ ಜೀವನದಲ್ಲಿ ನಡೆದ ಪ್ರೇಮ ಕಥೆಯ ನಾಯಕಿ ಯಾರು? ಕಪಿಲ್ ಆ ನಟಿಯನ್ನು ಬಿಟ್ಟು ರೋಮಿಯನ್ನು ಮದುವೆಯಾಗಿದ್ದು ಯಾಕೆ? ಈ ಆಸಕ್ತಿದಾಯಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮುಂದೆ ಓದಿ...

  ಶ್ರೀದೇವಿಯನ್ನು ಮದುವೆಯಾಗುವಂತೆ ಕಮಲ್ ಹಾಸನ್‌ಗೆ ಒತ್ತಾಯ ಮಾಡಿದ್ಯಾರು? ಕಮಲ್ ರಿಜೆಕ್ಟ್ ಮಾಡಿದ್ದೇಕೆ?ಶ್ರೀದೇವಿಯನ್ನು ಮದುವೆಯಾಗುವಂತೆ ಕಮಲ್ ಹಾಸನ್‌ಗೆ ಒತ್ತಾಯ ಮಾಡಿದ್ಯಾರು? ಕಮಲ್ ರಿಜೆಕ್ಟ್ ಮಾಡಿದ್ದೇಕೆ?

  ಕಪಿಲ್ ದೇವ್ ಮತ್ತು ಸಾರಿಕಾ ಪರಿಚಯ ಆಗಿದ್ದು ಹೇಗೆ?

  ಕಪಿಲ್ ದೇವ್ ಮತ್ತು ಸಾರಿಕಾ ಪರಿಚಯ ಆಗಿದ್ದು ಹೇಗೆ?

  ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ನೆಂಟು ಎಲ್ಲರಿಗೂ ತಿಳಿದಿರುವುದೇ. ಆದರೆ ಅನೇಕರಿಗೆ ತಿಳಿಯದ ಒಂದು ವಿಶೇಷ ಪ್ರೇಮಕಥೆ ಇದೆ. ಅದೇ ನಮ್ಮ '83' ವರ್ಲ್ಡ್ ಕಪ್ ಹೀರೋ ಕಪಿಲ್ ದೇವ್ ಬಾಲಿವುಡ್ ನಟಿ ಸಾರಿಕಾ ನಡುವಿನ ಪ್ರೇಮ ಕಥೆ. ಕೆಲವೊಂದು ವರದಿಗಳ ಪ್ರಕಾರ ಬ್ರಹ್ಮಚಾರಿ ಕಪಿಲ್ ಗೆ ಬಾಲಿವುಡ್ ಬ್ಯೂಟಿ ಸಾರಿಕಾಳನ್ನು ಹತ್ತಿರ ಮಾಡುವ ಆಲೋಚನೆ ಬಂದಿದ್ದು ಕ್ರಿಕೆಟ್ ಆಟಗಾರ ಮನೋಜ್ ಕುಮಾರ್ ಅವರ ಪತ್ನಿಗೆ. ಆಕೆ ಇವರಿಬ್ಬರ ಮಧ್ಯೆ ಒಂದು ಸೇತುವೆಯಂತೆ ಇಬ್ಬರು ಒಬ್ಬರಿಗೆ ಮತ್ತೊಬ್ಬರು ಹತ್ತಿರವಾಗುವಂತೆ ಮಾಡಿದಳು. ಇಬ್ಬರ ಮಧ್ಯೆ ಒಂದು ಒಳ್ಳೆಯ ಸ್ನೇಹ ಏರ್ಪಟ್ಟಿತ್ತು. ಅವರಿಬ್ಬರು ಬಿಡುವಿನ ವೇಳೆಯಲ್ಲಿ ಭೇಟಿಯಾಗಲು ಆರಂಭಿಸಿದರು. ಕಪಿಲ್-ಸಾರಿಕಾಳನ್ನು ಹೀಗೆ ಜೊತೆ ಜೊತೆಯಲ್ಲಿ ಸಾಗುತ್ತಿರುವಾಗಲೇ ಅವರಿಬ್ಬರ ನಡುವಿನ ಸಂಬಂಧ ಬಾಲಿವುಡ್ ಗಲ್ಲಿಗಳಲ್ಲಿ ಮಾತ್ರವಲ್ಲದೆ ಪತ್ರಿಕೆಗಳ ಗಾಸಿಪ್ ಕಾಲಂಗಳಲ್ಲಿಯೂ ಕಾಯಂ ಸದಾ ಸುದ್ದಿಯಾಗುತ್ತಿತ್ತು. ಸುದ್ದಿಯಾಯಿತು. ಹೀಗಾಗಿ ಆ ಸಮಯದಲ್ಲಿ ಸಮಯದಲ್ಲಿ ಇವರ ಪ್ರೇಮಕಥೆ ಸಿಕ್ಕಾಪಟ್ಟೆ ಹಲ್ಚಲ್ ಕೂಡ ಮಾಡಿತ್ತು.

  ಬಂದು ನಿಂತು ಹೋದ ಕಥೆ

  ಬಂದು ನಿಂತು ಹೋದ ಕಥೆ

  ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಸಾರಿಕಾಳನ್ನು ಮದುವೆಯಾಗಲು ಇಚ್ಛಿಸಿದ್ದ ಕಪಿಲ್ ಅವಳನ್ನು ಪಂಜಾಬ್ ನಲ್ಲಿ ಇದ್ದ ತನ್ನ ಮನೆಗೆ ಕರೆದುಕೊಂಡು ಹೋಗಿ ತಂದೆ-ತಾಯಿಗೆ ಪರಿಚಯ ಮಾಡಿಸಿದರು. ಸೋ ಹೀಗಾಗಿ ಅವರಿಬ್ಬರು ಮದುವೆಯಾಗುವುದು ನಿಶ್ಚಿತ ಅಂತಲೇ ಎಲ್ಲರೂ ಭಾವಿಸಿದ್ದರು. ಇನ್ನೇನು ಶುಭ ಮುಹೂರ್ತ ಹುಡುಕಿ ಮದುವೆ ಮಾಡುವುದಷ್ಟೇ ಬಾಕಿ ಅಂತ ಇವರಿಬ್ಬರ ಅಭಿಮಾನಿಗಳಲ್ಲೂ ಆನಂದ ಮನೆಮಾಡಿತ್ತು. ಆದರೆ ಆಲ್ ಆಫ್ ಸಡನ್ ಕಪಿಲ್ ದೇವ್ ಈ ಲವ್ ಲವ್ ಗೆ ನೋಬಾಲ್ (ಬ್ರೇಕಪ್) ಅಂದರು. ಸಾರಿಕಾಳ ಪ್ರೀತಿ ಹಿಟ್ ವಿಕೆಟ್ ಆಯ್ತು. ಇಡೀ ದೇಶದಲ್ಲಿ ಇವರಿಬ್ಬರ ಬ್ರೇಕಪ್ ಸುದ್ದಿಯಾಯಿತು, ಆದರೆ ಬ್ರೇಕ್ ಬ್ರೇಕಪ್ ಗೆ ಕಾರಣವಾದ ಸಂಗತಿ ಮಾತ್ರ ಯಾರಿಗೂ ತಿಳಿಯದಾಗಿತ್ತು. ಏಕೆಂದರೆ ಅವರಿಬ್ಬರೂ ಸಾರ್ವಜನಿಕವಾಗಿ ಈ ವಿಷಯದ ಬಗ್ಗೆ ಯಾವತ್ತು ಮಾತನಾಡಲಿಲ್ಲ.

  ಕಪಿಲ್ ಮದುವೆಯಿಂದ ಹಿಂದೆ ಸರಿಯಲು ಕಾರಣವೇನು?

  ಕಪಿಲ್ ಮದುವೆಯಿಂದ ಹಿಂದೆ ಸರಿಯಲು ಕಾರಣವೇನು?

  ಕಪಿಲ್ ಈ ಮದುವೆ ಆಲೋಚನೆಯಿಂದ ಹಿಂದೆ ಸರಿಯಲು ಸಾರಿಕಾ ಜೊತೆ ಯಾವುದೇ ಮನಸ್ತಾಪ ಏರ್ಪಟ್ಟಿದ್ದಲ್ಲ, ಬದಲಾಗಿ ರೋಮಿ ಜೊತೆಗೆ ಏರ್ಪಟ್ಟಿದ್ದ ಭಿನ್ನಾಭಿಪ್ರಾಯಗಳು ದೂರವಾಗಿದ್ದು. ಹೌದು ಸಾರಿಕಾ ಜೊತೆ ಕಪಿಲ್ ಪ್ರೀತಿಯ ಒಂಡೇ ಕ್ರಿಕೆಟ್ ಆಡುವುದಕ್ಕೆ ಮೊದಲೇ ರೋಮಿ ಜೊತೆ ಪ್ರೀತಿಯ ಟೆಸ್ಟ್ ಮ್ಯಾಚ್ ಆಡಿದ್ದರು. ರೋಮಿಯ ಪ್ರೀತಿ ಮುಂದೆ ಕಪಿಲ್ ಕ್ಲೀನ್ ಬೌಲ್ಡ್ ಆಗಿದ್ದರು. ರೋಮಿ ಭಾಟಿಯಾಯನ್ನು ಕಪಿಲ್ ಅವರ ಆತ್ಮೀಯ ಸ್ನೇಹಿತ ಸುನಿಲ್ ಭಾಟಿಯಾ ಮೊದಲ ಬಾರಿಗೆ ಪರಿಚಯಿಸಿದ್ದು. ಮೊದಲ ನೋಟದಲ್ಲೇ ಕಪಿಲ್, ರೋಮಿ ಎಸೆದ ಚೆಂಡಿಗೆ ಬೋಲ್ಡ್ ಆಗಿ ಬಿಟ್ಟಿದ್ದರು. ಅವಳ ಚುರುಕುತನ ಅವನನ್ನು ಹಿಡಿದಿತ್ತು. ರೋಮಿ ತನ್ನ ತಂದೆಗೆ ಬಿಸಿನೆಸ್ ನಲ್ಲಿ ಸಹಾಯ ಮಾಡುತ್ತಿದ್ದಳು. ಉದ್ಯಮಿಯಾಗಿ ಬೆಳೆಯುವ ಆಸೆ ಹೊಂದಿದ್ದಳು.

  ಇಬ್ಬರ ಮಧ್ಯೆ ಮೂಡಿದ ಭಿನ್ನಾಭಿಪ್ರಾಯ

  ಇಬ್ಬರ ಮಧ್ಯೆ ಮೂಡಿದ ಭಿನ್ನಾಭಿಪ್ರಾಯ

  ಕಪಿಲ್ ಸ್ಟಾರ್ ಕ್ರಿಕೆಟ್ ಆಟಗಾರ, ದೇಶ-ವಿದೇಶಗಳಲ್ಲಿ ಸುತ್ತುತ್ತಿದ್ದ. ಇನ್ನೊಂದಡೆ ರೋಮಿ ಭಾಟಿಯಾ ಮಹತ್ವಾಕಾಂಕ್ಷಿ ಉದ್ಯಮಿಯಾಗಿದ್ದಳು. ಇಬ್ಬರ ಮಧ್ಯೆ ಪ್ರೀತಿ ಇದ್ದರೂ ಜೊತೆಯಲ್ಲಿ ಕಳಿಯಲು ಹೆಚ್ಚಿನ ಸಮಯವಿರುತ್ತಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಸಣ್ಣ ಮನಸ್ತಾಪ, ಭಿನ್ನಾಭಿಪ್ರಾಯ ಮೂಡುತ್ತದೆ. ಇಬ್ಬರು ಕೂತು ಮಾತನಾಡಿಕೊಳ್ಳಲು ಸಮಯವಿಲ್ಲದೆ ಅದು ದೊಡ್ಡದಾಗಿ ಆಗಾಗ ಇಬ್ಬರ ಮಧ್ಯೆ ಜಗಳ ಕೂಡ ನಡೆಯುತ್ತಿರುತ್ತದೆ. ಇದರಿಂದ ಮನಸ್ತಾಪ ಮತ್ತು ಕೋಪಗೊಂಡಿದ್ದ ಕಪಿಲ್ ರೋಮಿಂದ ದೂರಸರಿದು ಸಾರಿಕಾಳಿಗೆ ಹತ್ತಿರವಾಗಿದ್ದರು. ಸಾರಿಕಾಳನ್ನು ಕಪಿಲ್ ದೇವ್ ವಿವಾಹವಾಗುತ್ತಿರುವ ಸುದ್ದಿ ಕೇಳಿ ಆಘಾತಗೊಂಡ ರೋಮಿ ತನ್ನ ಮೊದಲ ಪ್ರೀತಿಯನ್ನು ಹುಡುಕಿಕೊಂಡು ಬರುತ್ತಾಳೆ. ರೋಮಿಯನ್ನು ತುಂಬಾ ಪ್ರೀತಿಸುತ್ತಿದ್ದ ಕಪಿಲ್, ಸಾರಿಕಾಳ ಜೊತೆಗಿನ ಸಂಬಂಧಕ್ಕೆ ಗುಡ್ ಬೈ ಹೇಳಿ 1980ರಲ್ಲಿ ರೋಮಿ ಜೊತೆ ವಿವಾಹವಾದರು.

  ಇಂದಿಗೂ ಕಪಿಲ್ ಅವರದು ಸುಖಿ ಸಂಸಾರ

  ಇಂದಿಗೂ ಕಪಿಲ್ ಅವರದು ಸುಖಿ ಸಂಸಾರ

  ಕಪಿಲ್ ಮದುವೆಯಾದ ಮೇಲೆ ಸಾರಿಕಾಳ ಜೊತೆಗೆ ಎಲ್ಲಾ ಗಾಸಿಪ್ ಗಳಿಗೆ ತೆರೆಬಿತ್ತು. ರೋಮಿ ಜೊತೆ ಮದುವೆಯಾದ ಕಪಿಲ್ ಇಂದಿಗೂ ಕೂಡ ರೋಮಿ ಜೊತೆ ಸುಖ ಸಂತೋಷ ನೆಮ್ಮದಿ ಯೊಂದಿಗೆ ಬಾಳುತ್ತಿದ್ದಾರೆ. 1996ರಲ್ಲಿ ಹೆಣ್ಣು ಮಗುವಿಗೆ ಈ ದಂಪತಿಗಳು ಜನ್ಮ ನೀಡಿದರು. ಮದುವೆಯಾಗುವ ಮೊದಲು ತನ್ನ ತಂದೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ರೋಮಿ, ಮದುವೆಯಾದ ನಂತರ ಕಪಿಲ್ ಹೋಟೆಲ್ ವ್ಯವಹಾರವನ್ನು ಸಹ ಪರಿಣಾಮಕಾರಿಯಾಗಿ ನಡಿಸುತ್ತಿದ್ದಾರೆ. ಕಪಿಲ್ ಮತ್ತು ರೋಮಿ ಏಕಮಾತ್ರ ಸಂತಾನ ದೊಂದಿಗೆ ಸುಖಸಂಸಾರಿ ಯಾಗಿದ್ದಾರೆ.

  ಸಾರಿಕಾಳ ಬದುಕಿನಲ್ಲಿ ಏರುಪೇರು

  ಸಾರಿಕಾಳ ಬದುಕಿನಲ್ಲಿ ಏರುಪೇರು

  ಮದುವೆವರೆಗೂ ಬಂದ ಸಂಬಂಧ ಮುರಿದು ಹೋದ ಮೇಲೆ ಸಾರಿಕಾಳಿಗೆ ಏಕಾಂತ ಮತ್ತು ಒಂಟಿತನದ ನೋವು ಕಾಡಿತು. ಬದುಕಿಗೊಂದು ಆಸರೆ ಬಯಸುತ್ತಿದ್ದ ಸಮಯದಲ್ಲೇ ವಾಣಿ ಗಣಪತಿಯಿಂದ ದೂರ ಸರಿದಿದ್ದ ಕಮಲ್ ಹಾಸನ್, ಸಾರಿಕಾಳ ಬದುಕಿನೊಳಗೆ ಎಂಟ್ರಿಕೊಟ್ಟ, ಒಂದಷ್ಟು ಕಾಲ ಲಿವಿಂಗ್ ರಿಲೇಷನ್ಶಿಪ್ ನಂತರ ಇಬ್ಬರು ಮದುವೆ ಕೂಡ ಆದರೂ ಇಬ್ಬರ ಮಧ್ಯೆ ಹೊಂದಾಣಿಕೆ ಆಗಲೇ ಇಲ್ಲ. ನಾಲ್ಕಾರು ಬಾರಿ ಮನಸ್ತಾಪದಿಂದ ದೂರಸರಿದು ಮತ್ತೆ ಒಂದಾದರು. ಕೊನೆಗೆ ಕಮಲ್ ಹಾಸನ್ ಜೊತೆಗೆ ಬದುಕೋದು ಅತ್ಯಂತ ದುಸ್ಸಾಹಸವೇ ಸರಿ ಎಂಬಂತೆ ಭಾವಿಸಿದ ಸಾರಿಕಾ, ಕಮಲ್ ಹಾಸನ್ ಅವರನ್ನು ತೊರೆದು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಚೆನ್ನೈನಿಂದ ಹೊರಟು ಮುಂಬೈಯಲ್ಲಿ ಬಂದು ನೆಲೆಸಿದಳು. ಕಮಲ್ ಹಾಸನ್ ಸಿಮ್ರಾನ್, ಗೌತಮಿ ಹೀಗೆ ನಟಿಯರೊಂದಿಗೆ ಲಿವಿಂಗ್ ರೆಲೇಶನ್ಶಿಪ್ ಇಟ್ಟುಕೊಂಡರು. ಸಾರಿಕಾ ಮಾತ್ರ ಏಕಾಂಗಿಯಾಗಿಯೇ ತನ್ನ ಹಳೆಯ ಮಧುರ ನೆನಪಿನ ನೆನಪುಗಳೊಂದಿಗೆ ಇಂದಿಗೂ ಜೀವಿಸುತ್ತಿದ್ದಾರೆ.

  English summary
  What is the real reason why cricketer Kapil Dev and actress Sarika love break up?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X