twitter
    For Quick Alerts
    ALLOW NOTIFICATIONS  
    For Daily Alerts

    2022: ಗೆಲ್ಲದಿದ್ದರೂ ಈ ವರ್ಷ ಗಮನ ಸೆಳೆದ ಸಿನಿಮಾಗಳಿವು

    By ಫಿಲ್ಮಿಬೀಟ್ ಡೆಸ್ಕ್
    |

    ಕನ್ನಡ ಚಿತ್ರರಂಗಕ್ಕೆ ಚಿನ್ನದ ಬೆಳೆ ಬೆಳೆದುಕೊಟ್ಟ ವರ್ಷ 2022. ಈ ವರ್ಷವನ್ನು ಸ್ಯಾಂಡಲ್‌ವುಡ್ ಬಹಳ ವರ್ಷ ನೆನಪಿಟ್ಟುಕೊಳ್ಳಲಿದೆ.

    'ಲವ್ ಮಾಕ್ಟೆಲ್ 2' ಸಿನಿಮಾದಿಂದ ಆರಂಭಿಸಿ ಆ ನಂತರ ಬಿಡುಗಡೆ ಆದ ಹಲವು ಸಿನಿಮಾಗಳು ಹಿಟ್ ಎನಿಸಿಕೊಂಡವು. 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ', 'ವಿಕ್ರಾಂತ್ ರೋಣ', 'ಕಾಂತಾರ', 'ಗಂಧದ ಗುಡಿ' ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ, ಕನ್ನಡ ಚಿತ್ರರಂಗದ ಬಗ್ಗೆ ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮೂಡುವಂತೆ ಮಾಡಿದವು.

    ಜಪಾನ್‌ನಲ್ಲಿ ರಾಜಮೌಳಿ 'RRR'.. ಥೈಲ್ಯಾಂಡ್‌ನಲ್ಲಿ ರಕ್ಷಿತ್ ಶೆಟ್ಟಿ 777ಜಪಾನ್‌ನಲ್ಲಿ ರಾಜಮೌಳಿ 'RRR'.. ಥೈಲ್ಯಾಂಡ್‌ನಲ್ಲಿ ರಕ್ಷಿತ್ ಶೆಟ್ಟಿ 777

    ಹಾಗೆಂದು ಹಣ ಮಾಡಿದ ಈ ಮೇಲಿನ ಸಿನಿಮಾಗಳಷ್ಟೆ ಒಳ್ಳೆಯ ಸಿನಿಮಾಗಳೆಂದೇನೂ ಇಲ್ಲ. ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್‌ ಕಂಡ ಈ ಕೆಲವು ಸಿನಿಮಾಗಳ ಜೊತೆಗೆ ಹಲವು ಉತ್ತಮ ಸಿನಿಮಾಗಳು ಕನ್ನಡದಲ್ಲಿ ಈ ವರ್ಷ ಬಂದವು. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗೆಲುವು ಕಾಣದ ಆದರೆ ಉತ್ತಮ ಸಿನಿಮಾ ಎಂಬ ಹೆಸರು ಗಳಿಸಿಕೊಂಡ ಕೆಲವು ಸಿನಿಮಾಗಳ ಪಟ್ಟಿ ಇಲ್ಲಿದೆ.

    'ತಲೆದಂಡ'

    'ತಲೆದಂಡ'

    ಸಂಚಾರಿ ವಿಜಯ್ ನಟನೆಯ 'ತಲೆದಂಡ' ಸಿನಿಮಾ ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಅರೆಹುಚ್ಚನ ಪಾತ್ರದಲ್ಲಿ ಸಂಚಾರಿ ವಿಜಯ್ ಅದ್ಭುತವಾಗಿ ನಟಿಸಿದ್ದರು. ಪ್ರಕೃತಿ ಉಳಿಸಲು ಅರೆಹುಚ್ಚ ಮಾಡುವ ಹೋರಾಟದ ಕತೆ ಹಲವರನ್ನು ಭಾವುಕಗೊಳಿಸಿತು. ಅದ್ಭುತ ನಟ ಸಂಚಾರಿ ವಿಜಯ್ ಅಗಲಿಕೆಯ ನೋವಿನ ನೆನಪನ್ನು ಮತ್ತೆ ಸ್ಮೃತಿ ಪಟಲಕ್ಕೆ ನೂಕಿದ ಸಿನಿಮಾ ಇದು.

    'ಸಕುಟುಂಬ ಸಮೇತ'

    'ಸಕುಟುಂಬ ಸಮೇತ'

    ರಕ್ಷಿತ್ ಶೆಟ್ಟಿಯವರ ಪರಮವಃ ಸ್ಟುಡಿಯೋಸ್ ನಿರ್ಮಾಣ ಮಾಡಿದ 'ಸಕುಟುಂಬ ಸಮೇತ' ಈ ವರ್ಷ ಗಮನ ಸೆಳದ ಸಿನಿಮಾಗಳಲ್ಲಿ ಒಂದು. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡದಿದ್ದರು, ಈ ಸಿನಿಮಾದ ಕಂಟೆಂಟ್ ಚೆನ್ನಾಗಿತ್ತು. ಮದುವೆಯಾಗುವ ಗಂಡು-ಹೆಣ್ಣಿನ ಕುಟುಂಬ ಒಂದೇ ಮನೆಯಲ್ಲಿ ಕಾಲ ಕಳೆದು ಪರಸ್ಪರರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದ ಭಿನ್ನವಾದ ಕತೆಯನ್ನು ಈ ಸಿನಿಮಾ ಹೊಂದಿತ್ತು.

    'ವ್ಹೀಲ್ ಚೇರ್ ರೋಮಿಯೊ'

    'ವ್ಹೀಲ್ ಚೇರ್ ರೋಮಿಯೊ'

    ಈ ವರ್ಷ ಗಮನ ಸೆಳೆದ ಸಿನಿಮಾಗಳಲ್ಲಿ ಒಂದು 'ವ್ಹೀಲ್ ಚೇರ್ ರೋಮಿಯೊ' ಅಂಗವಿಕಲ ನಾಯಕ, ಕಣ್ಣು ಕಾಣದ ನಾಯಕಿಯ ನಡುವೆ ನಡೆದ ಅದ್ಭುತ ಪ್ರೇಮ ಹಾಗೂ ಜೀವನದ ಕತೆಯನ್ನು ಹೊಂದಿರುವ ಈ ಸಿನಿಮಾ ಹಲವರ ಕಣ್ಣು ತೇವಗೊಳಿಸಿತ್ತು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲವಾದರೂ ಈ ವರ್ಷದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿತು.

    'ಕೋಳಿ ತಾಲ್'

    'ಕೋಳಿ ತಾಲ್'

    'ಕೋಳಿ ತಾಲ್' ಸಿನಿಮಾ ಒಂದು ಭಿನ್ನ ಪ್ರಯತ್ನ. ಪಟ್ಟಣದಿಂದ ಬಂದ ಮೊಮ್ಮಗನಿಗೆ ಕೋಳಿ ಸಾರು ಮಾಡಿ ಹಾಕಬೇಕೆಂದು ಆಸೆಯಿಂದಿರುತ್ತಾನೆ ತಾತ. ಆದರೆ ಆ ಕೋಳಿ ಹಠಾತ್ತನೆ ಕಾಣೆಯಾಗಿಬಿಡುತ್ತದೆ. ಆ ಕೋಳಿಯ ಹುಡುಕಾಟದಲ್ಲಿ ತಾತ ತೊಡಗುತ್ತಾನೆ. ಆ ಹುಡುಕಾಟದ ಪಯಣವೇ 'ಕೋಳಿ ತಾಲ್' ಸಿನಿಮಾ. ಈ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಪ್ರಕಟವಾಗಿದ್ದವು. ಆದರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣಲಿಲ್ಲ.

    'ಕಂಬ್ಳಿಹುಳ'

    'ಕಂಬ್ಳಿಹುಳ'

    ಹೊಸ ಹುಡುಗರ ಹೊಸ ಪ್ರಯತ್ನ 'ಕಂಬ್ಳಿಹುಳ'ದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೊಸಬರ ಸಿನಿಮಾ ಆದ್ದರಿಂದ ಹೆಚ್ಚು ಚಿತ್ರಮಂದಿರಗಳು ಸಿಗಲಿಲ್ಲ. ಒಂದು ವಾರಕ್ಕೆ ಕೇವಲ ಎರಡು ಶೋಗಳಷ್ಟೆ ಉಳಿದವು. ಆದರೆ ಸಿನಿಮಾದ ಬಗ್ಗೆ ಅದ್ಭುತ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಲವು ಸೆಲೆಬ್ರಿಟಿಗಳು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡು ಹೊಗಳಿದರು.

    'ಧರಣಿ ಮಂಡಲ ಮಧ್ಯದೊಳಗೆ'

    'ಧರಣಿ ಮಂಡಲ ಮಧ್ಯದೊಳಗೆ'

    ವರ್ಷದ ಅಂತ್ಯದಲ್ಲಿ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಬಿಡುಗಡೆ ಆಯಿತು. ಸಿನಿಮಾವು ಭಿನ್ನ ಆದರೆ ಬಹಳ ಶಾರ್ಪ್‌ ಆದ ಚಿತ್ರಕತೆಯನ್ನು ಹೊಂದಿತ್ತು. ಇಂಥಹಾ ಸಿನಿಮಾಗಳು ಗೆಲ್ಲಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡರು. ಹಲವರು ಸಿನಿಮಾ ನೋಡಿದರಾದರೂ ದೊಡ್ಡ ಸಂಖ್ಯೆಯ ಜನರಿಗೆ ಸಿನಿಮಾ ತಲುಪಲಿಲ್ಲ. ಆದರೆ ಸಿನಿಮಾ ಗಮನ ಸೆಳೆದಿದ್ದಂತೂ ನಿಜ.

    'ಲವ್ 360'

    'ಲವ್ 360'

    ಶಶಾಂಕ್ ನಿರ್ದೇಶನದ ಈ ಸಿನಿಮಾದ ಬಗ್ಗೆ ಸಹ ಕೆಲವು ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಪ್ರೇಮಕತೆಯ ಜೊತೆಗೆ ಮರ್ಡರ್ ಮಿಸ್ಟರಿ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಹಾಡುಗಳು ಸಹ ಗಮನ ಸೆಳೆದಿದ್ದವು ಆದರೆ ಚಿತ್ರಮಂದಿರದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ.

    'ವಿಂಡೋ ಸೀಟ್'

    'ವಿಂಡೋ ಸೀಟ್'

    ಶೀಥಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಸಿನಿಮಾ ಸಹ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೊಳ್ಳೆ ಪ್ರದರ್ಶನ ತೋರಲಿಲ್ಲ ಆದರೆ ಸಿನಿಮಾದ ಬಗ್ಗೆ ತುಸು ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸಿನಿಮಾ ಒಟಿಟಿಗೆ ಬಿಡುಗಡೆ ಆದ ಬಳಿಕ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡರು. ಸಿನಿಮಾದಲ್ಲಿ ನಿರುಪ್ ಭಂಡಾರಿ ನಾಯಕಿ.

    English summary
    Here is the list of the Kannada movies that were good but did not succeed at box office.
    Wednesday, December 21, 2022, 14:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X