ಕತ್ರಿಗುಪ್ಪೆ ಕತ್ರಿದಾಸ -ಛೆ ಎಂಥಾ ಅಭಾಸ

ಆದರೆ, ಈಗ ಎಫ್ಎಂ ವಾಹಿನಿಗಳ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದು ಹಾಗೂ ಪ್ರತಿ ಬಾರಿ ಹೊಸ ಹೊಸ ಕಾರ್ಯಕ್ರಮ ನೀಡಲು ವಾಹಿನಿಗಳು ಪ್ರಯತ್ನಿಸುವುದು ನಡದೇ ಇದೆ. ಸದ್ಯ. 104 ಎಫ್ ಎಂ ವಾಹಿನಿಯಿಂದ ಪ್ರಸಾರವಾಗುವ ಕತ್ರಿಗುಪ್ಪೆ ಕತ್ರಿದಾಸ ಎಂಬ ಅಣುಕು ಹರಿಕಥೆ ಕಾರ್ಯಕ್ರಮ ಆಸ್ತಿಕ, ದಾಸಾನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಮೇಲೆ ಮೇಲ್ ಹಾಕಿ ಇಮೇಲ್ ಸಮರ ಮಾಡುತ್ತಿರುವ ಕೆಲ ಮಾಧ್ವ ಮಿತ್ರರು. ಈ ಕಾರ್ಯಕ್ರಮದ ಔಚಿತ್ಯ ಹಾಗೂ ದಾಸ ಪದ ಪ್ರಯೋಗದ ಬಗ್ಗೆ ಎಫ್ ಎಂ ವಾಹಿನಿಯ ವ್ಯವಸ್ಥಾಪಕರಲ್ಲಿ ಸಮಜಾಯಿಷಿ ಕೇಳಿದ್ದಾರೆ. ಎಂದಿನಂತೆ, ಅವರಿಂದ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ.
ಇದೀಗ ಎಲ್ಲಾ ದಾಸ ಶ್ರೇಷ್ಠರ ಅನುಯಾಯಿಗಳು ಒಟ್ಟಾಗಿ ಎಫ್ ಎಂ ವಾಹಿನಿಯ ಮೇಲೆ ಪ್ರಹಾರ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಇದು ಯಾವುದೇ ಒಂದು ಜಾತಿ ಮತ ಪಂಥಕ್ಕೆ ಸಂಬಂಧಿಸಿದ ವಿಷಯವಲ್ಲ. ನಮ್ಮ ಸಂಸ್ಕೃತಿ ಪರಂಪರೆ, ಎಲ್ಲಾ ದಾಸವರೇಣ್ಯರ ಘನತೆ ಗೌರವದ ಪ್ರಶ್ನೆಯಾಗಿದೆ. ಇದಕ್ಕೆ ಸರಿಯುತ್ತರ ಸಿಗುವವರೆಗೂ ಹಿಂದೆ ಸರಿಯುವುದಿಲ್ಲ ಎನ್ನುತ್ತಾರೆ ಕೇಶವಾಚಾರ್ಯ
ಪ್ರತಿದಿನ ಕ್ರಿಯಾಶೀಲ ಪ್ರಯೋಗಗಳನ್ನು ಮಾಡುವ ಉತ್ಸಾಹದಲ್ಲಿ ಎಫ್ ಎಂವಾಹಿನಿಗಳು ನಮ್ಮ ಸಂಸ್ಖೃತಿಯನ್ನು ಮರೆಯುತ್ತಿವೆಯೇ? ಅಪ್ಪಟ ಕನ್ನಡ ಶ್ರೋತೃಗಳನ್ನು ಬೆಳೆಸುವಲ್ಲಿ ವಿಫಲವಾಗುತ್ತಿವೆಯೇ ಕಾಲವೇ ಉತ್ತರಿಸಬೇಕು. ಅಂದಹಾಗೆ, ಅತಿ ಕಡಿಮೆ ಜಾಹೀರಾತುಗಳ ಜತೆ ಹೆಚ್ಚೆಚ್ಚು ಕನ್ನಡ ಹಾಡುಗಳನ್ನು ಮೊಟ್ಟ ಮೊದಲಿಗೆ ಪ್ರಸಾರ ಮಾಡಿದ ಕೀರ್ತಿ ಕೂಡ 104 ಫೀವರ್ ಎಫ್ ಎಂ ವಾಹಿನಿಗೆ ಸಲ್ಲುತ್ತದೆ.40 ನಿಮಿಷಗಳ ನಾನ್ ಸ್ಟಾಪ್ ಗೀತೆಗಳನ್ನು ಕೂಡ ಪ್ರಸಾರ ಮಾಡುವ ಫೀವರ್ ಎಫ್ ಎಂ ಇತರೆ ವಾಹಿನಿಗಳಿಗೆ ಒಳ್ಳೆ ಪೈಪೋಟಿ ನೀಡುತ್ತಿದೆ.


Click it and Unblock the Notifications











