twitter
    For Quick Alerts
    ALLOW NOTIFICATIONS  
    For Daily Alerts

    ಬಿಸಿಸಿಐಗೆ ಪೂನಂ ಪಾಂಡೆ ಬರೆದ 'ನಗ್ನ' ಪತ್ರ

    By Prasad
    |

    ಹದಿಹರೆಯದ ರೂಪದರ್ಶಿ ಪೂನಂ ಪಾಂಡೆ ಬಿಸಿಸಿಐಗೆ ಪತ್ರವೊದನ್ನು ಬರೆದಿದ್ದಾಳೆ. ಪೂನಂ ಪಾಂಡೆ ಅಂದ್ರೆ ನಿಮಗೆ ನೆನಪಿರಬಹುದು. ಭಾರತ ವಿಶ್ವಕಪ್ ಗೆದ್ದರೆ ಬೆತ್ತಲೆಯಾಗುವುದಾಗಿ ಆಕೆ ಹೇಳಿಕೆ ನೀಡಿದ್ದಳು. ಆಕೆ ಬಿಸಿಸಿಐಗೆ ಬರೆದ 'ನಗ್ನ' ಪತ್ರದ ಪ್ರತಿಯೊಂದು ನಮಗೂ ಸಿಕ್ಕಿದೆ.

    ಅದರಲ್ಲಿ ನಾನು ಮಾಡುವುದೆಲ್ಲ ದೇಶಾಭಿಮಾನದಿಂದ ಅಂತ ಘೋಷಿಸಿಕೊಂಡಿದ್ದಾಳೆ. ಆಟಗಾರರ ಉತ್ಸಾಹ ಹೆಚ್ಚಿಸಲು, ಅವರಲ್ಲಿ ಹೊಸ ಸ್ಫೂರ್ತಿ ಉಕ್ಕಿಸಲು ಇದೊಂದು ತರಹ "ಥೆರಪಿ" ಎಂದಿದ್ದಾಳೆ. ಇದಕ್ಕಾಗಿ ಸಾಕ್ಷಿ ಸಮರ್ಥನೆಗಳನ್ನೆಲ್ಲ ಉಲ್ಲೇಖಿಸಿದ್ದಾಳೆ. ಅವಳ ಪತ್ರದ ಕುರಿತು ಬಿಸಿಸಿಐ ಏನು ನಿರ್ಧಾರ ಕೈಗೊಳ್ಳುತ್ತೋ ಗೊತ್ತಿಲ್ಲ. ಅದರ ಪ್ರತಿಯೊಂದು ನಮಗೂ ಸಿಕ್ಕಿದೆ. ಅವಳ ಕೇಳಿಕೆಯನ್ನು ನಾವು ಕನ್ನಡದಲ್ಲಿ ಹೀಗೆ ಓದಿಕೊಳ್ಳಬಹುದು.

    ಬೋರ್ಡ್ ಆಫ್ ಗವರ್ನರ್/ಮ್ಯಾನೆಜರ್
    ದಿ ಬಿಸಿಸಿಐ

    ಮಾನ್ಯರೆ,

    ನಾನು ನಿಮಗೆ ಕ್ರಿಕೆಟ್ ನ ಅಗಾಧ ಅಭಿಮಾನಿ ಮತ್ತು ದೇಶಾಭಿಮಾನಿಯಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ವಿಶ್ವಕಪ್ 2011 ಭಾರತದ ಪಾಲಾಗಬೇಕೆಂದು ನಾನು ಬಯಸಿದ್ದೇನೆ. ರೂಪದರ್ಶಿ ಮತ್ತು ಚಿತ್ರನಟಿಯಾಗಿರುವ ನಾನು ನನ್ನ ಭಾರತಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧಳಿದ್ದೇನೆ.

    ಭಾರತ ಕ್ರಿಕೆಟ್ ತಂಡಕ್ಕೆ ಇನ್ನಷ್ಟು ಉತ್ತೇಜನ ನೀಡಲು, ಅತ್ಯುತ್ತಮವಾಗಿ ಆಡಿ ಟ್ರೋಫಿ ಪಡೆಯಲು ನಾನು ಏನು ಮಾಡಲಿದ್ದೇನೆ ಎಂಬುದನ್ನು ಈಗಾಗಲೇ ಪ್ರಕಟಿಸಿದ್ದೇನೆ. ಆಟಗಾರರ ಕ್ರೀಡಾ ಸ್ಫೂರ್ತಿ ಹೆಚ್ಚಿಸಿ ಅತ್ಯುತ್ತಮವಾಗಿ ಆಡುವಂತಾಗಲು ಟೀಂ ಇಂಡಿಯಾ ಯಾವ ಸ್ಥಳ/ಸಮಯವನ್ನು ಆಯ್ಕೆ ಮಾಡಿಕೊಳ್ಳುವುದೋ ಅಂದು/ಅಲ್ಲಿ ನಾನು ನಗ್ನ ಪ್ರದರ್ಶನ ನೀಡಲು ಸಿದ್ಧಳಾಗಿದ್ದೇನೆ.

    ನಾನು ಗಂಭೀರವಾಗಿಯೇ ಹೇಳುತ್ತಿದ್ದೇನೆ. ನಗ್ನ ಪ್ರದರ್ಶನ ನೀಡುವ ಮೂಲಕ ಕ್ರೀಡೆ ಅಥವಾ ಇನ್ಯಾವುದೇ ಕ್ಷೇತ್ರದ ಜನರಿಗೆ ಉತ್ತೇಜನ ನೀಡಿ ಕ್ಷಮತೆ ಹೆಚ್ಚಿಸಬಹುದೆಂದು ಹಲವು ವಿದೇಶಿ ವಿಶ್ವವಿದ್ಯಾನಿಲಯಗಳು ನಡೆಸಿದ ಸಂಶೋಧನೆಗಳು ಸಾಧಾರಪಡಿಸಿವೆ. ಸೈಕಾಲಜಿ ಇತ್ಯಾದಿ ವೈದ್ಯಕೀಯ ಪುಸ್ತಕಗಳಲ್ಲೂ ಇದನ್ನು ದೃಢಪಡಿಸಲಾಗಿದೆ. ನನ್ನ ಈ ಪ್ರದರ್ಶನದ ನೆರವಿನಿಂದ ವಿಶ್ವಕಪ್ ನಲ್ಲಿ ಹಿಂದೆಂದು ಕಾಣದಂತೆ ಭಾರತ ಪ್ರದರ್ಶನ ನೀಡುವುದನ್ನು ಕಂಡು ನೀವು ಚಕಿತಗೊಳ್ಳಲಿದ್ದೀರಿ. ಭಾರತದಲ್ಲೀಗ ಕ್ರಿಕೆಟ್ ಅಂದ್ರೆ ಧರ್ಮ. ಇಲ್ಲಿ ವಿಶ್ವಕಪ್ ಟ್ರೋಫಿ ಕಳೆದುಕೊಳ್ಳುವುದೆಂದರೆ ನೂರಾರು ಕೋಟಿ ಭಾರತೀಯರನ್ನು ಧೃತಿಗೆಡುವಂತೆ ಮಾಡಲಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಗಲಭೆಗಳೂ ನಡೆಯಬಹುದು.

    ಭಾರತ ಕ್ರಿಕೆಟ್ ತಂಡದ ಖಾಸಗಿ ಡ್ರೆಸಿಂಗ್ ರೂಂ ಅಥವಾ ಅವರು ಬಯಸುವ ಇನ್ಯಾವುದೇ ಸ್ಥಳದಲ್ಲಿ ನನಗೆ ಪ್ರದರ್ಶನ ನೀಡಲು ಅವಕಾಶ ನೀಡಬೇಕಾಗಿ ಸವಿನಯವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. (ಭಾರತದ ಕಾನೂನು ಇಂಥವುದಕ್ಕೆ ಅವಕಾಶ ನೀಡುವುದಿಲ್ಲ ಎಂದಾದರೆ ಪ್ಯಾರೀಸ್ ಅಥವಾ ಇನ್ಯಾವುದೇ ವಿದೇಶಿ ನೆಲದಲ್ಲಿ ನನಗೆ "ಶೋ" ನೀಡಲು ಅವಕಾಶ ನೀಡಬಹುದು). ನಾನು ಸೈಕಾಲಜಿಸ್ಟ್ ಒಬ್ಬರ ಉಪಸ್ಥಿತಿಯಲ್ಲಿ ಈ ಖಾಸಗಿ ಚಿಕಿತ್ಸಾ ಕ್ರಮದ "ನಗ್ನ ಪ್ರದರ್ಶನ" ನೀಡಲಿದ್ದೇನೆ. ತಂಡದ ಸದಸ್ಯರ ತಕರಾರು ಇಲ್ಲದಿದ್ದರೆ ಇದು ಯಾವುದೇ ರೀತಿಯಾಗಿ ಕಾನೂನಿನ ಪ್ರಕಾರ ಅಪರಾಧವಲ್ಲ. ಬಿಸಿಸಿಐ ನನಗೆ ಅವಕಾಶ ನೀಡುವುದಾಗಿ ನಂಬಿದ್ದೇನೆ.

    ಕಾನೂನು ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ನಗ್ನವಾಗಿ ಸಂಚರಿಸುವುದು ಅಪರಾಧ. ಆದರೆ ಚಿಕಿತ್ಸಾ ಕ್ರಮವಾಗಿ ಪ್ರೌಢರೆದುರು ನಗ್ನವಾಗುವುದು ಅಪರಾಧವಲ್ಲ. ಇದಕ್ಕಾಗಿ ನಾನು ಇಂಡಿಯನ್ ಕಾಂಟ್ರಾಕ್ಟ್ ಆಕ್ಟ್ ವಿರೋಧವಿಲ್ಲದಂತೆ ಪ್ರದರ್ಶನ ನೀಡಲಿದ್ದೇನೆ. ಬಿಸಿಸಿಐ ಎಂಬುದು ಸರಕಾರಿ ಅಂಗಸಂಸ್ಥೆಯಾಗದೇ ಇರುವುದರಿಂದ ಇಂತಹ ಒಪ್ಪಂದವೊಂದನ್ನು ಮಾಡಿಕೊಳ್ಳಬಹುದು ಎಂದು ಆರಿಕೆ ಮಾಡಿಕೊಳ್ಳುತ್ತೇನೆ. ಇಂತಹ ಒಪ್ಪಂದ ಮಾಡಿಕೊಳ್ಳುವ ಅಗತ್ಯ ಕಂಡುಬಂದರೆ ನನ್ನ ವಕೀಲರನ್ನು ಸಂಪರ್ಕಿಸಬಹುದು. ಅಡ್ವೊಕೇಟ್ ಪ್ರಶಾಂತ್ ಉಚ್ಚಿಲ್ ಅವರನ್ನು ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು : 022-32639020.

    ವಿಶ್ವಕಪ್ 2011ರಲ್ಲಿ ಟೀಮ್ ಇಂಡಿಯಾ ಗೆಲುವು ಪಡೆಯಲು ನಿಮ್ಮ ಸಹಕಾರದ ನಿರೀಕ್ಷೆಯಲ್ಲಿದ್ದೇನೆ.

    ಪ್ರೀತಿಯಿಂದ
    ಪೊನಂ ಪಾಂಡೆ

    English summary
    Model and actress Poonam Pandey, who has offered to go nude if India wins the World Cup 2011, has written a letter to BCCI asking permission to strip in front of India team. She has said it is not illegal to strip with somebodies permission.
    Saturday, April 2, 2011, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X