»   »  ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ

ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ

Subscribe to Filmibeat Kannada
Sudeep
'ವೀರ ಮದಕರಿ' ಹೆಸರನ್ನು ಕನ್ನಡ ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿರುವ ಬಗ್ಗೆ ಚಿತ್ರದುರ್ಗದ ಹಿರಿಯ ಸಾಹಿತಿ ಬಿ.ಎಲ್.ವೇಣು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಐತಿಹಾಸಿಕ ಮಹತ್ವವುಳ್ಳ ವೀರ ಮದಕರಿ ಹೆಸರು ದುರುಪಯೋಗವಾಗುತ್ತಿದೆ ಎಂದುಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಆ ವಿಚಾರವನ್ನು ನಟ ಸುದೀಪ್ ಕೆದಕುವ ಮೂಲಕ ಆ ವಿವಾದ ಮತ್ತೆ ಜೀವ ಪಡೆದುಕೊಂಡಿದೆ.

ನಟ ಸುದೀಪ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ''ವೀರ ಮದಕರಿ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ.ಸಾಹಿತಿ ಬಿ.ಎಲ್.ವೇಣು ಅವರೇನು ಭಾರತದ ಪ್ರಧಾನಿಯಲ್ಲ. ಇದರಿಂದ ಅವರಿಗೆ ಏನು ಆಗಬೇಕಾಗಿದೆ ಎನ್ನುವುದು ಅವರಿಗೇ ಗೊತ್ತಿಲ್ಲ'' ಎಂದರು. ಇದೆಲ್ಲಾ ನಡೆದದ್ದು ಗುರುವಾರ (ಜ.1) ರಾತ್ರಿ, ಹೋಟೆಲ್ ಏಟ್ರಿಯಾದಲ್ಲಿ 'ವೀರಮದಕರಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ನಟ ಸುದೀಪ್ ಮಾತನಾಡುತ್ತಾ, ಹಿರಿಯ ಸಾಹಿತಿ ಬಿ.ಎಲ್.ವೇಣು ಅವರ ಮೇಲೆ ಹರಿಹಾಯ್ದರು.

ವೀರ ಮದಕರಿ ಎಂದು ಹೆಸರಿಟ್ಟು ನಾವೇನು ತಪ್ಪು ಮಾಡಿಲ್ಲ ಎಂದು ನಟ ಸುದೀಪ್ ಸ್ಪಷ್ಟಪಡಿಸಿದರು. ಯಾವುದೇ ಕಾರಣಕ್ಕೂ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವುದಿಲ್ಲ ಎಂದು ತಿಳಿಸಿದರು. ಇದೊಂದು ರೀಮೇಕ್ ಚಿತ್ರವಾಗಿದ್ದು ಇತಿಹಾಸ ಪ್ರಸಿದ್ಧ ವೀರ ಮದಕರಿಗೂ ಚಿತ್ರಕಥೆಗೂ ಯಾವುದೇ ಸಂಬಂಧವಿಲ್ಲ.ಚಿತ್ರದ ನಾಯಕ ಒಬ್ಬ ಐಪಿಎಸ್ ಅಧಿಕಾರಿ. ಇತಿಹಾಸ ಪ್ರಸಿದ್ಧ ವ್ಯಕ್ತಿಯ ಹೆಸರನ್ನು ಚಿತ್ರಕ್ಕೆ ಶೀರ್ಷಿಕೆಯಾಗಿಡುವುದು ತಪ್ಪಲ್ಲವೆ ಎಂಬುದು ಬಿ.ಎಲ್.ವೇಣು ಅವರ ವಾದ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಮದಕರಿ ಸುದೀಪರ ಕಳ್ಳ ಪೊಲೀಸ್ ಆಟ
ಚೋರ ಗುರು ಮದಕರಿಗೆ ಸಿಕ್ತು ಗೋದಾಮು
ಚಾಣಾಕ್ಷ ವೀರ ಮದಕರಿ ಮಗುವಿಗೆ ಹೆದರಿನಂತೆ!!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada