»   »  ಮಳವಳ್ಳಿ ಸಾಯಿ ಕೃಷ್ಣಗೆ 'ಬಳೆ' ಚುಚ್ಚಿದ ಕಥೆ!

ಮಳವಳ್ಳಿ ಸಾಯಿ ಕೃಷ್ಣಗೆ 'ಬಳೆ' ಚುಚ್ಚಿದ ಕಥೆ!

By: *ಜಯಂತಿ
Subscribe to Filmibeat Kannada

ಇದು ಭಾಗ್ಯದ ಬಳೆಗಾರ ಚಿತ್ರದ ವ್ಯಥೆಯ ಕಥೆ. ಶಿವರಾಜ್‌ಕುಮಾರ್ ಮೇಲಿನ ಪ್ರೀತಿಯಿಂದ ಚಿತ್ರಕ್ಕೆ ಸಂಭಾಷಣೆ ಬರೆಯಲು ಮಳವಳ್ಳಿ ಒಪ್ಪಿಕೊಂಡರು. ಸೆಟ್‌ಗೇ ಹೋಗಿ ಸಂಭಾಷಣೆ ತಿದ್ದುವ ಕೆಲಸವೂ ಸೇರಿದಂತೆ ಎರಡು ಲಕ್ಷ ರೂಪಾಯಿಗೆ ಮಾತುಕತೆಯಾಗಿತ್ತು. ಚಿತ್ರದಲ್ಲಿ ಸಾಯಿ ಒಂದು ಪಾತ್ರವನ್ನೂ ನಿರ್ವಹಿಸಿದ್ದರು. ಅದಕ್ಕೆ ಸಂಭಾವನೆಯೇನೂ ಇಲ್ಲ. ಆದರೆ, ಚಿತ್ರ ಮುಗಿದ ನಂತರವೂ ಅವರ ಸಂಭಾಷಣೆಗೆ ಬಾಕಿ ಸಂದಾಯವಾಗಲೇ ಇಲ್ಲ.

'ನಿರ್ಮಾಪಕ ರಮೇಶ್ ಕಶ್ಯಪ್ ಅವರನ್ನು ಪದೇಪದೇ ಕೇಳಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಶಿವಣ್ಣನಿಗೇ ಹೇಳಿದೆ. ಆದರೂ ಅದೂ ಇದೂ ನೆಪ ಹೇಳಿ ಕೈಚೆಲ್ಲಿಬಿಟ್ಟರು. ನಿರ್ದೇಶಕ ಸಾಯಿಪ್ರಕಾಶ್ ಅವರಿಗೂ ಚಿತ್ರೀಕರಣದುದ್ದಕ್ಕೂ ಕಹಿ ಅನುಭವ ಆಗಿತ್ತು. ಒಮ್ಮೆಯಂತೂ ಅವರಿಟ್ಟಿದ್ದ ಶಾಟನ್ನೇ ನಿರ್ಮಾಪಕರು ಬದಲಿಸಿದರು. ಅವರನ್ನು ಕೂಲಿಯವನಂತೆ ಕಾಣುತ್ತಿದ್ದರು. ಇದರಿಂದ ಸಾಯಿಪ್ರಕಾಶ್ ಕಣ್ಣಲ್ಲಿ ನೀರು ಹಾಕಿದ್ದೂ ಉಂಟು. ಹೀಗಿದೆ ನಮ್ಮ ಸಿನಿಮಾ ಪರಪಂಚ" ಅಂತ ಸಾಯಿಕೃಷ್ಣ ಬೇಸರಪಟ್ಟರು.

ನಿರ್ಮಾಪಕರು ಶಿವರಾಜ್‌ಕುಮಾರ್‌ಗೂ ಯಾರೂ ನಿಮ್ಮ ಚಿತ್ರವನ್ನು ಮೂಸಿ ನೋಡುತ್ತಿಲ್ಲ ಅಂತ ನೇರವಾಗಿ ಹೇಳಿದ್ದರಂತೆ. ಸಾಯಿಕೃಷ್ಣ ಸ್ಫೋಟಿಸಿರುವ ಈ ಸತ್ಯ ಸುದ್ದಿಗೋಷ್ಠಿಗಳಲ್ಲಿ ರಮೇಶ್ ಕಶ್ಯಪ್ ಆಡಿದ ಮಾತುಗಳೆಲ್ಲವೂ ನಾಟಕ ಎಂಬುದನ್ನು ಸ್ಪಷ್ಟಪಡಿಸುತ್ತದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada