For Quick Alerts
  ALLOW NOTIFICATIONS  
  For Daily Alerts

  ಡರ್ಟಿ ಗರ್ಲ್ ನಾನಲ್ಲ; ನಿಖಿತಾ ಸಿಕ್ಕಾಪಟ್ಟೆ ಗರಂ

  |
  ನಟಿ ನಿಖತಾ ತುಕ್ರಲ್ ಗರಂ ಆಗಿದ್ದಾರೆ. ಕಾರಣ ವಾರದಿಂದೀಚೆಗೆ ಮಾಧ್ಯಮಗಳಲ್ಲಿ ಅವರ ಬಗ್ಗೆ ಹರಿದಾಡುತ್ತಿದ್ದ ಸುದ್ದಿ. ಹಿಂದಿ 'ದಿ ಡರ್ಟಿ ಪಕ್ಚರ್' ಕನ್ನಡದಲ್ಲಿ ರೀಮೇಕ್ ಆಗುತ್ತಿದ್ದು ಅದರಲ್ಲಿ ನಿಖಿತಾ ಹಿಂದಿಯಲ್ಲಿ ವಿದ್ಯಾ ಬಾಲನ್ ಮಾಡಿರುವ ನಟಿ ಸಿಲ್ಕ್ ಸ್ಮಿತಾ ಪಾತ್ರವನ್ನು ಪೋಷಿಸಲಿದ್ದಾರೆ ಎಂಬ ಸುದ್ದಿ ನಿಖತಾರನ್ನು ಅಕ್ಷರಶಃ ಕೆರಳಿಸಿದೆ. ಕಾರಣ ಆಕೆಗೆ ಆ ಆಫರ್ ಬಂದೇ ಇಲ್ಲವಂತೆ.

  ನಿಖಿತಾ ಹೇಳುವುದಿಷ್ಟು. "ನನಗೆ ಆ ಪಾತ್ರ ಮಾಡುವ ಬಗ್ಗೆ ಯಾವುದೇ ಆಫರ್ ಬಂದಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಯೂ ಇಲ್ಲ. ಅದನ್ನು ಯಾರೋ ಯೋಚಿಸಿರಬಹುದು, ನನ್ನನ್ನು ಸಂಪರ್ಕಿಸಲು ಸಿದ್ಧವಾಗಿರಬಹುದು. ಅದೇ ವಿಷಯ ಬಾಯಿಂದ ಬಾಯಿಗೆ ಹರಡಿ ಸುದ್ದಿಯಾಗಿರಬಹುದು. ಆದರೆ ಅದು ಅಧಿಕೃತ ಮಾಹಿತಿ ಅಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ ನಿಖಿತಾ.

  ಇದೀಗ ನಿಖತಾರನ್ನು ಸಿಲ್ಕ್ ಸ್ಮಿತಾ ಪಾತ್ರದಲ್ಲಿ ನೋಡಲು ಕಲ್ಪಿಸಿಕೊಂಡು ರೋಮಾಂಚನಗೊಂಡಿದ್ದ ಚಿತ್ರರಸಿಕರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಾರಣ, ವಿದ್ಯಾ ಬಾಲನ್ ಮಾಡಿರುವ ಆ ಪಾತ್ರ ಅದೆಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡುವಂತಿದೆ. ಆ ಪಾತ್ರದಲ್ಲಿ ನಿಖಿತಾರನ್ನೂ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಅದು ರೆಡ್ ಸಿಗ್ನಲ್. (ಒನ್ ಇಂಡಿಯಾ ಕನ್ನಡ)

  English summary
  Actress Nikita Thukral Refuses the Reports of she acts in the Bollywood remake Kannada movie 'The Dirty Picture'. 
 
  Tuesday, April 3, 2012, 12:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X