»   » ಪುರುಷರ ಶೌಚಾಲಯದಲ್ಲಿ ಸೆಕ್ಸಿ ತಾರೆ ಶೆರ್ಲಿನ್

ಪುರುಷರ ಶೌಚಾಲಯದಲ್ಲಿ ಸೆಕ್ಸಿ ತಾರೆ ಶೆರ್ಲಿನ್

Posted By:
Subscribe to Filmibeat Kannada

ರಾತ್ರಿ ಸರಿಹೊತ್ತಿನಲ್ಲಿ ನವದೆಹಲಿಯ ಸಭೆಯೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ, ಸೆಕ್ಸಿ ತಾರೆ ಶೆರ್ಲಿನ್ ಚೋಪ್ರಾ ಪುರುಷರ ಶೌಚಾಲಯಕ್ಕೆ ನುಗ್ಗಿ ಸುದ್ದಿ ಮಾಡಿದ್ದಾರೆ. ವಿವಾದಗಳಿಗೂ ಶೆರ್ಲಿನ್ ಗೂ ಹಾಲು ಸಕ್ಕರೆ ಇದ್ದಂತೆ. ಇತ್ತೀಚೆಗೆ ಆಕೆ ತನ್ನ ಅರೆ ನಗ್ನ ಛಾಯಾಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡು ಭಾರಿ ಸುದ್ದಿ ಮಾಡಿದ್ದರು.

ನಿಯತಕಾಲಿಕೆಯೊಂದನ್ನು ಅನಾವರಣ ಮಾಡಲು ಶೆರ್ಲಿನ್ ದೆಹಲಿಗೆ ಹೋಗಿದ್ದರಂತೆ. ಸಭೆ ಮುಗಿದ ಬಳಿಕ ಆಕೆ ಮೂತ್ರ ವಿಸರ್ಜನೆಗೆಂದು ಸೀದಾ ಪುರುಷರ ಶೌಚಾಲಯ ಪ್ರವೇಶಿಸಿದ್ದಾರೆ. ಕತ್ತಲಾಗಿದ್ದರಿಂದ ಯಾರೂ ನೋಡುವುದಿಲ್ಲ ಎಂದು ತಿಳಿದರೋ ಏನೋ ಗೊತ್ತಿಲ್ಲ. ಮಹಿಳಾ ಶೌಚಾಲಯವಿದ್ದರೂ ಅವರು ಹೀಗೇಕೆ ಮಾಡಿದರು ಎಂಬುದು ಹಲವರ ತಲೆ ಕೆಡಿಸಿದೆ.

ಪುರುಷರ ಶೌಚಾಲಯಕ್ಕೆ ಹೋದ ಶೆರ್ಲಿನ್ ಅಲ್ಲಿ ಮಾಡಿದ್ದಾದರು ಏನು?! ಆಕೆ ನಿಧಾನಕ್ಕೆ ತನ್ನ ಪರ್ಸ್ ನಿಂದ ಸಿಗರೇಟೊಂದನ್ನು ತೆಗೆದು ಲೈಟರ್ ಹೊತ್ತಿಸಿದ್ದಾರೆ. ಧಂ ಮಾರೋ ಧಂ ಎಂದು ಸಿಗರೇಟ್ ನ ಕೊನೆಯ ಧಂ ಎಳೆದ ಬಳಿಕ ಹೊರಬಂದಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು.

ಪುರುಷರ ಶೌಚಾಲಯದಲ್ಲಿ ಇಪ್ಪತ್ತು ನಿಮಿಷಗಳಿಗೂ ಅಧಿಕ ಕಾಲ ಕಳೆದರು ಎಂಬುದು ತಾಜಾ ಸಮಾಚಾರ. ಬಳಿಕ ಆಕೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ನನಗೆ ಮೈ ಹುಷಾರಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ. ಅಲ್ಲೇ ಉಳಿದುಕೊಳ್ಳಲು ಆಕೆಗೆ ವ್ಯವಸ್ಥೆ ಮಾಡಲಾಗಿತ್ತು. "ಇಲ್ಲ ನನಗೆ ಸ್ವಲ್ಪ ಸಮಸ್ಯೆಯಿದೆ. ಹುಡುಗಿಯರ ಸಮಸ್ಯೆ ಎಂದು ಹೇಳಿ ಹೊರಟೇ ಬಿಟ್ಟರು" ಎಂಬುದು ಸುದ್ದಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada