»   »  ವೀರಮದಕರಿಗೆ ಕೊಟ್ಟೂರಿನಲ್ಲಿ ಕುರಿಗಳ ಬಲಿ!

ವೀರಮದಕರಿಗೆ ಕೊಟ್ಟೂರಿನಲ್ಲಿ ಕುರಿಗಳ ಬಲಿ!

Posted By:
Subscribe to Filmibeat Kannada
Sudeep
ನಟ ಸುದೀಪ್ ಅಭಿನಯದ 'ಈ ಶತಮಾನದ ವೀರ ಮದಕರಿ' ಚಿತ್ರ ಕೊಟ್ಟೂರು ಪಟ್ಟಣದ ರೇಣುಕಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರಕ್ಕೆ ಶುಭಕೋರಿ ಸುದೀಪ್ ಅಭಿಮಾನಿಗಳು 5- 6 ಕುರಿಗಳನ್ನು ಬಲಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ತಾಲೂಕಿನ ಸೂಲದಾರಹಳ್ಳಿಯ ವಾಲ್ಮೀಕಿ ಜನಾಂಗದ ಯುವಕರು ಮೆರವಣಿಗೆ ನಡೆಸಿದರು. ಮೆರವಣಿಗೆಯ ನೇತೃತ್ವವನ್ನು ತಾಲುಕಿ ಪಂಚಾಯಿತಿ ಸದಸ್ಯರೊಬ್ಬರು ವಹಿಸಿದ್ದಿದ್ದು ವಿಶೇಷ.

ಈ ಚಿತ್ರದಲ್ಲಿನ ಸುದೀಪ್ ಪೋಸ್ಟರನ್ನು ಅಲಂಕರಿಸಲಾದ ಟ್ರ್ಯಾಕ್ಟರ್ ನಲ್ಲಿಟ್ಟು ತಮಟೆ, ಹಲಗೆ, ಉರಿಮೆ ವಾದ್ಯಗಳೊಂದಿಗೆ ಮೆರವಣೆಗೆ ಮಾಡಿದರು. ಮೆರವಣಿಗೆಯುದ್ಧಕ್ಕೂ 5-6 ಕುರಿಗಳನ್ನು ಹಿಡಿದು ಸಾಗಿದ ಅಭಿಮಾನಿಗಳು ಬಳಿಕ ಪೋಲೀಸರ ಕಣ್ಣುತಪ್ಪಿಸಿ ಬಲಿಕೊಟ್ಟರು.

ವೀರಮದಕರಿ ಚಿತ್ರ ಬಿಡುಗಡೆಯಾದ ದಿನವೂ ಇದೇರೀತಿ ಮೆರವಣಿಗೆ ನದೆಸಿದ್ದ ಸುದೀಪ್ ಅಭಿಮಾನಿಗಳು ಈಗ ಮತ್ತೆ ಮೆರವಣಿಗೆ ನಡೆಸಿ ನಟ ಸುದೀಪ್ ಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸಿದರು. ಆರಂಭದಲ್ಲಿ ವೀರಮದಕರಿ ಚಿತ್ರಕ್ಕೆ ಶೀರ್ಷಿಕೆ ವಿವಾದವಾಗಿ ಪರಿಣಮಿಸಿತ್ತು. ಈಗ ಕುರಿಗಳ ಬಲಿಯಿಂದ ಮತ್ತೊಂದು ವಿವಾದ ತಲೆಯೆತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada