»   » ನಿತ್ಯಾನಂದ ರಾಸಲೀಲೆ; ಪ್ರೇಮಾನಂದನ ಕೈವಾಡ

ನಿತ್ಯಾನಂದ ರಾಸಲೀಲೆ; ಪ್ರೇಮಾನಂದನ ಕೈವಾಡ

Posted By:
Subscribe to Filmibeat Kannada
ನಿತ್ಯಾನಂದ ಸ್ವಾಮಿಯ ಲೈಂಗಿಕ ಹಗರಣ ವಿಡಿಯೋ ಹೊಸ ತಿರುವು ಪಡೆದುಕೊಂಡಿದೆ. ಇದರ ಹಿಂದೆ ಆಶ್ರಮದ ನಿವಾಸಿ ಪ್ರೇಮಾನಂದ ಅಲಿಯಾಸ್ ಲೆನಿನ್ ಕರುಪ್ಪನ್ ಕೈವಾಡ ಇದೆಯೆಂದು ಆಶ್ರಮದ ವಕ್ತಾರರು ಆರೋಪಿಸಿದ್ದಾರೆ. ಮಾರ್ಚ್ 2ರಂದು ಸನ್ ನ್ಯೂಸ್ ನಲ್ಲಿ ಪ್ರಸಾರವಾದ ನಿತ್ಯಾನಂದ ಸ್ವಾಮಿ ರಾಸಲೀಲೆ ವಿಡಿಯೋ ರಾಜ್ಯಾದ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು.

ಇಬ್ಬರು ಮಹಿಳೆಯರ ಜೊತೆ ಇರುವ ನಿತ್ಯಾನಂದ ಸ್ವಾಮಿಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರು ಮಹಿಳೆಯಲ್ಲಿ ಒಬ್ಬರು ತಮಿಳು ನಟಿ ರಂಜಿತಾ ಎಂದು ಗುರುತಿಸಲಾಗಿತ್ತು. ಈಗಾಗಲೇ ರಂಜಿತಾ ಮದುವೆಯಾಗಿದ್ದು ಅವರ ಪತಿ ಸೈನಿಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸನ್ ನ್ಯೂಸ್ ನಲ್ಲಿ ಪ್ರಸಾರವಾಗುತ್ತಿದ್ದ ಲೈಂಗಿಕ ವಿಡಿಯೋವನ್ನು ನಿತ್ಯಾನಂದ ತಡೆಯಲು ಬಹಳಷ್ಟು ಶ್ರಮಿಸಿದ್ದ ಎನ್ನಲಾಗಿದೆ. ಆದರೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ ಎನ್ನುತ್ತವೆ ಮೂಲಗಳು. ಪೊಲೀಸ್ ಭದ್ರತೆಯಲ್ಲಿ ನಿತ್ಯಾನಂದ ಸ್ವಾಮಿಯ ವಕ್ತಾರರೊಬ್ಬರು ಮಾತನಾಡುತ್ತಾ, ಟಿವಿಯಲ್ಲಿ ಪ್ರಸಾರವಾದ ಲೈಂಗಿಕ ವಿಡಿಯೋ ನಕಲಿ. ಗ್ರಾಫಿಕ್ಸ್ ನಲ್ಲಿ ಈ ವಿಡಿಯೋವನ್ನು ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ವಾಮೀಜಿ ಅವರ ಏಳಿಗೆಯನ್ನು ಸಹಿಸದೆ ಅವರ ಮುಖಕ್ಕೆ ಮಸಿ ಬಳಿಯುವ ಕಾರ್ಯವನ್ನು ಮಾಡಿದ್ದಾರೆ.ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನುಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಮಾರ್ಚ್ 8ರಂದು ವಿಚಾರಣೆ ನಡೆಯಲಿದೆ ಎಂದು ನಿತ್ಯಾನಂದ ಸ್ವಾಮಿ ಆಶ್ರಮದ ವಕ್ತಾರರು ತಿಳಿಸಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ರಾಸಲೀಲೆಯಲ್ಲಿ ಕಾಣಿಸಿಕೊಂಡಿದ್ದ ನಟಿ ರಂಜಿತಾ ಮಾತ್ರ ತುಟಿ ಬಿಚ್ಚುತ್ತಿಲ್ಲ.ಆಶ್ರಮದ ಮೂಲಗಳು ಮಾತ್ರ ಇದೊಂದು ನಕಲಿ ವಿಡಿಯೋ ಎಂದು ಪ್ರತಿಕ್ರಿಯಿಸಿವೆ. ಆದರೆ ಆಶ್ರಮದಲ್ಲಿನ ಭಕ್ತರೊಬ್ಬರು ಮಾತನಾಡುತ್ತಾ, ಸ್ವಾಮೀಜಿ ಜೊತೆ ರಂಜಿತಾರನ್ನು ನೋಡಿದ್ದಾಗಿ ಹೇಳಿದ್ದಾರೆ. ನಟಿ ರಂಜಿತಾ ಅವರು ಕಳೆದ ಮೂರು ತಿಂಗಳಿಂದ ಸ್ವಾಮೀಜಿ ಜೊತೆಗೆ ಇದ್ದರು ಎಂದಿದ್ದಾರೆ.

ಪರಮಹಂಸ ನಿತ್ಯಾನಂದ ಸ್ವಾಮಿ ಅವರ 10,000 ಆಶ್ರಮಗಳು 33 ದೇಶಗಳಲ್ಲಿವೆ. ಆಶ್ರಮಕ್ಕೆ ರಾಜಕಾರಣಿಗಳು ಹಾಗೂ ಚಿತ್ರರಂಗದ ಖ್ಯಾತ ತಾರೆಗಳಿಂದ ಆದಾಯ ಹರಿದು ಬರುತ್ತಿತ್ತು ಎನ್ನಲಾಗಿದೆ. ಏತನ್ಮಧ್ಯೆ ಸ್ವಾಮೀಜಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ರಾಜ್ಯದ ಗುಪ್ತದಳದ ಹಿರಿಯ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ. ಇದೊಂದು ಕೇವಲ ವದಂತಿ ಅಷ್ಟೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada