»   »  ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಟಿ ಶ್ರುತಿ

ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಟಿ ಶ್ರುತಿ

Subscribe to Filmibeat Kannada
Shruthi mahendar applies for divorce
ವಿವಾಹ ವಿಚ್ಛೇದನಕ್ಕಾಗಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲದಲ್ಲಿ ಮಂಗಳವಾರ ಶ್ರುತಿ ಅರ್ಜಿ ಸಲ್ಲಿಸಿದ್ದಾರೆ. ಇಷ್ಟು ದಿನ ನಟಿ ಶ್ರುತಿ ಮತ್ತು ನಿರ್ದೇಶಕ ಎಸ್ ಮಹೇಂದರ್ ಅವರ ಅನ್ಯೋನ್ಯ ದಾಂಪತ್ಯ ಜೀವನದಲ್ಲಿದ್ದ ದೊಡ್ಡ ಬಿರುಕು ಈಗ ಬಹಿರಂಗವಾಗಿದೆ. ಶ್ರುತಿ ಮತ್ತು ಮಹೇಂದರ್ ಅವರ ಹತ್ತು ವರ್ಷಗಳ ಸುದೀರ್ಘ ದಾಂಪತ್ಯ ಜೀವನದಲ್ಲಿ ಅಪಶ್ರುತಿ ಮಿಡಿದಿದೆ.

ಹಣಕಾಸು ವಿಚಾರದಲ್ಲಿನ ಭಿನ್ನಾಭಿಪ್ರಾಯವೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣ ಎನ್ನಲಾಗಿದೆ. ''ಮಹೇಂದರ್ ಅವರು ಮಗಳ ಯೋಗಕ್ಷೇಮದ ಬಗ್ಗೆ ನಿರಾಸಕ್ತರಾಗಿದ್ದರು. ಮಗಳ ಶೈಕ್ಷಣಿಕ ವೆಚ್ಚ ಭರಿಸಲು ಮಹೇಂದರ್ ಬೇಸರ ವ್ಯಕ್ತಪಡಿಸುತ್ತಿದ್ದರು'' ಎಂಬ ಕಾರಣಗಳನ್ನು ಶ್ರುತಿ ನೀಡಿದ್ದಾರೆ. ''ಮಹೇಂದರ್ ಅವರು ತಮ್ಮ ವೃತ್ತಿ ಜೀವನದಲ್ಲಿ ನಿರಾಸಕ್ತರಾಗಿದ್ದರು. ಮಗಳ ಶೈಕ್ಷಣಿಕ ವೆಚ್ಚವನ್ನು ನಾನೇ ಭರಿಸಬೇಕಾಗಿತ್ತು.ಅವರಿಗೆ ಸರಿಯಾದ ಉದ್ಯೋಗ ಇಲ್ಲ '' ಎಂಬಂತಹ ಕಾರಣಗಳನ್ನು ನ್ಯಾಯಾಲತಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಶ್ರುತಿ ತಿಳಿಸಿದ್ದಾರೆ.

ಮಂಗಳವಾರ ಯಾವುದೇ ಸುಳಿವು ನೀಡದೆ ಬೆಂಗಳೂರು ಡಬಲ್ ರಸ್ತೆಯಲ್ಲಿರುವ ಕೌಟುಂಬಿಕ ನ್ಯಾಯಾಲಕ್ಕೆ ಬಂದು ಗೋಪ್ಯವಾಗಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರ ಜತೆ ವಕೀಲ, ಅನಾಮಿಕ ವ್ಯಕ್ತಿ ಹಾಗೂ ವಾಹನ ಚಾಲಕ ಮಾತ್ರ ಇದ್ದರು. ಟಿವಿ 9 ಸುದ್ದಿ ವಾಹಿನಿಯ ವರದಿಗಾರನ ಕಣ್ಣಿಗೆ ಬಿದ್ದ ಶ್ರುತಿ ಈ ಬಗ್ಗೆ ಏನನ್ನೂ ಪ್ರತಿಕ್ರಿಯಿಸದೆ ಹೊರಟು ಹೋಗಿದ್ದಾರೆ. ಪ್ರಸ್ತುತ ಶ್ರುತಿ ಅವರು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಸರಕಾರಿ ವಾಹನದಲ್ಲೇ ಅವರು ಇಂದು ನ್ಯಾಯಾಲಯಕ್ಕೆ ಆಗಮಿಸಿದ್ದರು.

ಮಹೇಂದರ್ ಮತ್ತು ಶ್ರುತಿ ಅವರ ಮದುವೆ 1998ರಲ್ಲಿ ಪುರಿ ಜಗನ್ನಾಥ ದೇವಾಲಯದಲ್ಲಿ ಆಗಿತ್ತು. ಇವರಿಬ್ಬರೂ ಒಬ್ಬರನ್ನೊಬ್ಬರು ಮೆಚ್ಚಿ ಅಂತರ್ಜಾತಿಯ ವಿವಾಹ ಮಾಡಿಕೊಂಡಿದ್ದರು. ಬಹಳ ಅನ್ಯೋನ್ಯ ದಂಪತಿಗಳು ಎಂದೂ ಗುರುತಿಸಿಕೊಂಡಿದ್ದರು. ಆದರೆ ಇಂದು ಶ್ರುತಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಆ ಮಾತು ಹುಸಿಯಾಗಿದೆ. ಮಹೇಂದರ್ ಅವರು ರಾಜಕೀಯ ಜೀವನ ಮತ್ತು ಸಿನಿಮಾ ಜೀನದಿಂದ ಆರ್ಥಿಕವಾಗಿ ದುರ್ಬಲರಾಗಿದ್ದರು ಎಂಬ ಮಾತುಗಳು ಕೇಳಿಸುತ್ತಿವೆ. ಬಿಜೆಪಿ ಕಾರ್ಯಕರ್ತರಾಗಿಯೂ ಶ್ರುತಿ ಮತ್ತು ಮಹೇಂದರ್ ದಂಪತಿಗಳು ಸಕ್ರಿಯರಾಗಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸಿನಿಮಾ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಟಿ ಶ್ರುತಿ?
ನಗೆದೋಣಿಯೇರಿದ ಅಳುಮುಂಜಿ ಶ್ರುತಿ
ವಿಧಾನ ಪರಿಷತ್ ಚುನಾವಣೆಗೆ ನಟಿ ಶ್ರುತಿ?
ಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada