»   »  ತಮಿಳಿಗೆ ಹೋದ ಕನ್ನಡ ಕುವರಿ ಆದ್ಳೇ ಕುರಿ

ತಮಿಳಿಗೆ ಹೋದ ಕನ್ನಡ ಕುವರಿ ಆದ್ಳೇ ಕುರಿ

Posted By: * ಮಹೇಶ್ ಮಲ್ನಾಡ್
Subscribe to Filmibeat Kannada
meghna sundarj in trouble
'ಒಮ್ಮೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದರೆ ಮುಗಿತು, ಹಿಂದಿರುಗಿ ನೋಡುವ ಮಾತಿಲ್ಲ' ಎಂಬ ಮಾತು ನಿಜ ಎನ್ನುವಷ್ಟರಲ್ಲೇ ವಿವಾದಗಳ ಹುತ್ತದಲ್ಲಿ ಕನ್ನಡ ಕುವರಿ ಮೇಘನಾ(ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ಮಗಳು) ಕುಳಿತು ಬಿಟ್ಟಿದ್ದಾರೆ. ತಮಿಳಿನ ಕೆ. ಬಾಲಚಂದರ್ ರಂತಹ ಹಿರಿಯ ಚಿತ್ರಕರ್ಮಿ ಅವರ ಕವಿತಾಲಯ ಬ್ಯಾನರ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೇಘನಾ ಈಗ ಅದೇ ಸಂಸ್ಥೆಯ ನಿರ್ಮಾಪಕರ ಸಿಟ್ಟಿಗೆ ಗುರಿಯಾಗಿದ್ದಾರೆ.

ಕವಿತಾಲಯ ಬ್ಯಾನರ್ ನ ನಿರ್ಮಾಪಕಿ ಪುಷ್ಪಾ ಕಂದಸ್ವಾಮಿ ಅವರು ಮೇಘನಾ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಬ್ಯಾನರ್ ನಲ್ಲಿ ಜೀವನ್ ನಾಯಕತ್ವದ 'ಕೃಷ್ಣ ಲೀಲೈ' ಚಿತ್ರದಲ್ಲಿ ನಾಯಕಿಯಾಗಿ ಮೇಘನಾ ಅಭಿನಯಿಸುತ್ತಿದ್ದು, ಈ ಬಗ್ಗೆ ಮಾಡಿಕೊಂಡಿರುವ ಕರಾರನ್ನು ಮುರಿದಿದ್ದಾರೆ. ಚಿತ್ರ ಪೂರ್ಣಗೊಳ್ಳುವ ಮೊದಲೇ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡಿನ ನಿರ್ಮಾಪಕ ಸಂಘಕ್ಕೆ ನೀಡಿರುವ ದೂರಿನಲ್ಲಿ ನಿರ್ಮಾಪಕಿ ಪುಷ್ಪಾ ಹೇಳಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಘನಾ ಸುಂದರ್ ರಾಜ್ , ಇದೆಲ್ಲಾ ಸುಳ್ಳು, ನಾನು ಯಾವುದೇ ಒಪ್ಪಂದ ಮುರಿದಿಲ್ಲ ಎಂದು ಹೇಳಿದ್ದಾರೆ. ಬದಲಿಗೆ ತಾವೂ ಕೂಡ ತಮಿಳು ನಟ/ನಟಿಯರ ಸಂಘಕ್ಕೆ ಪ್ರತಿದೂರನ್ನು ನೀಡಿದ್ದಾರೆ. ಸದ್ಯ ದೂರಿನ ಪರೀಶೀಲನೆ ನಡೆಯುತ್ತಿದೆ. ಮೇಘನಾ ಅವರು ಕೃಷ್ಣಲೀಲೈ ಚಿತ್ರದ ನಂತರ ಭರತ್ ನಾಯಕತ್ವದ 'ಎಂಗ ವೀಟು ಪಿಳ್ಳೈ(ಎಂಜಿಆರ್  ಅವರ ಯಶಸ್ವಿ ಚಿತ್ರದ ಹೆಸರು) ಚಿತ್ರದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ನಡುವೆ ಕನ್ನಡ ಚಿತ್ರರಂಗದ 'ಧನುಷ್ ' (ರಜಿನಿಕಾಂತ್  ಅಳಿಯ, ತಮಿಳು ನಟ)ಎಂದು ಖ್ಯಾತಿ ಗಳಿಸುತ್ತಿರುವ ನಮ್ಮ ಲೂಸ್ ಮಾದ ಯೋಗೀಶ್ ಅವರ ಮುಂದಿನ ಚಿತ್ರ 'ಪಡ್ಡೆ ಹುಡ್ಗ' ಕ್ಕೂ ಮೇಘನಾ ಆಯ್ಕೆಯಾಗಿದ್ದಾರೆ.

ಪೂರಕ ಓದಿಗೆ: ಕನ್ನಡದ ಕುವರಿ ಮೇಘನಾ ತಮಿಳಿನಲ್ಲಿ ಪಾದಾರ್ಪಣೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada