»   »  ಟ್ರಿಬ್ಯುನಲ್ ಮೆಟ್ಟಿಲು ಹತ್ತಿದ ಸುನಾಮಿ

ಟ್ರಿಬ್ಯುನಲ್ ಮೆಟ್ಟಿಲು ಹತ್ತಿದ ಸುನಾಮಿ

Subscribe to Filmibeat Kannada

ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಸೆನ್ಸಾರ್ ಮಂಡಲಿಯೊಂದಿಗೆ ಸೆಣಸಾಡುತ್ತಿರುವ ಚಿತ್ರಗಳೇ ಹೆಚ್ಚು. ತಾಯಿ ಕೂಸಿನ ಬಾಂಧವ್ಯದಂತೆ ನಿರ್ಮಾಪಕ ಹಾಗೂ ಚಿತ್ರದ ಸಂಬಂಧ. ಶಿಸ್ತಿಗೆ ಹೆಸರಾಗಿರುವ ಪ್ರಾದೇಶಿಕ ಸೆನ್ಸಾರ್ ಮಂಡಲಿ ಸಮಾಜಮುಖಿಯಾಗಿ ಅರ್ಹತಾಪತ್ರವನ್ನು ನೀಡುತ್ತದೆ. ಆದರೆ ಮಂಡಲಿಯ ತೀರ್ಪನ್ನು ಪ್ರಶ್ನಿಸುವ ಅಧಿಕಾರ ನಿರ್ಮಾಪಕನಿಗಿದೆ.

ರಾಜುಪಾಟೀಲ್ ನಿರ್ಮಾಣದ 'ಸುನಾಮಿ' ಚಿತ್ರಕ್ಕೂ ಇದೇರೀತಿ ಪರಿಸ್ಥಿತಿ ಬಂದೊದಗಿದೆ. 'ಸುನಾಮಿ'ಯಲ್ಲಿ ಹೊಡೆದಾಟ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡೆಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಲಿ ಚಿತ್ರಕ್ಕೆ 'ಎ' ಅರ್ಹತಾಪತ್ರವನ್ನು ನೀಡಿದೆ. ಮಂಡಲಿಯ ತೀರ್ಪಿನಿಂದ ಬೇಸತ್ತ ನಿರ್ಮಾಪಕ ರಾಜುಪಾಟೀಲ್ ನವದೆಹಲಿಯಲ್ಲಿರುವ ಟ್ರಿಬ್ಯುನಲ್‌ಗೆ ಮೊರೆ ಹೋಗಿದ್ದಾರೆ. ಅಲ್ಲಿಂದ ತೀರ್ಪನ್ನು ನಿರೀಕ್ಷಿಸುತ್ತಿರುವ ನಿರ್ಮಾಪಕರು ನಂತರ ಚಿತ್ರವನ್ನು ಬಿಡುಗಡೆಗೊಳಿಸಬೇಕೆಂದಿದ್ದಾರೆ.

ಶ್ರೀ ಪದ್ಮಾವತಿ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಸುನಾಮಿ'ಗೆ ನಿರ್ದೇಶಕ ಮಾಕಂ ಮನೋಹರ್ ಅವರೇ ಕಥೆ, ಚಿತ್ರಕಥೆ, ಬರೆದಿದ್ದಾರೆ. ಸದ್ಗುಣರಾಜರ ಸಂಗೀತವಿರುವ ಚಿತ್ರಕ್ಕೆ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್‌ಮಂಜು, ಕೌರವವೆಂಕಟೇಶ್, ಟೈಗರ್‌ಮಧು ಸಾಹಸ, ಬಾಲನಾಯಕ್ ಸಂಕಲನ, ಪ್ರಸಾದ್, ಪರಮೇಶ್ ನೃತ್ಯ, ಶ್ರೀನಿವಾಸ್ ಕೌಶಿಕ್ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಜ, ಪೂನಂ, ರಂಗಾಯಣ ರಘು, ದೊಡ್ದಣ್ಣ, ಟೆನ್ನಿಸ್‌ಕೃಷ್ಣ, ಬುಲೆಟ್‌ಪ್ರಕಾಶ್, ಗಜರ್‌ಖಾನ್, ರೇಖಾದಾಸ್, ಕಿಲ್ಲರ್‌ವೆಂಕಟೇಶ್, ರಾಜಾರವೀಂದ್ರ, ಮೈಕಲ್‌ಮಧು, ಹ್ಯಾರಿ, ಮೈಕಲ್‌ಮಧು, ಭರತ್‌ಕಪೂರ್, ದೀಪಕ್ ಇದ್ದಾರೆ.

(ದಟ್ಸ್ ಕನ್ನಡಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada