»   » ಎರಡನೇ ಮದುವೆಯಲ್ಲಿ ಎಚ್ಡಿಕೆ ರಾಧಿಕಾ ಪ್ರಸಂಗ

ಎರಡನೇ ಮದುವೆಯಲ್ಲಿ ಎಚ್ಡಿಕೆ ರಾಧಿಕಾ ಪ್ರಸಂಗ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಚಿತ್ರನಟಿ ರಾಧಿಕಾ ಕುರಿತ ಎರಡು ಕನ್ನಡ ಚಿತ್ರಗಳು ಇನ್ನೂ ಡಬ್ಬದಲ್ಲೇ ಕುಳಿತಿವೆ. ಈಗ ಇವರಿಬ್ಬರ ಪ್ರೇಮ ಪ್ರಸಂಗ ಕುರಿತ ಮತ್ತೊಂದು ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡಿದೆ. ಚಿತ್ರದ ಹೆಸರು 'ಎರಡನೇ ಮದುವೆ'.ಅನಂತನಾಗ್ ಮತ್ತು ಸುಹಾಸಿನಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ.

ಈ ಚಿತ್ರದಲ್ಲಿ ಕೆಲವೊಂದು ಆಕ್ಷೇಪಾರ್ಹ ಸಂಭಾಷಣೆಗಳಿವೆಯಂತೆ. ಆದರೆ ಚಿತ್ರದ ನಿರ್ದೇಶಕ ದಿನೇಶ್ ಬಾಬು ಈ ಮಾತನ್ನು ಒಪ್ಪುವುದಿಲ್ಲ. ಇದೊಂದು ಸಂಪೂರ್ಣ ಹಾಸ್ಯಭರಿತ ಚಿತ್ರ. ಯಾರನ್ನೂ ನೋಯಿಸುವ ಸನ್ನಿವೇಶಗಳು ಚಿತ್ರದಲ್ಲಿಲ್ಲ ಎಂದಿದ್ದಾರೆ. ಚಿತ್ರದ ನಿರ್ಮಾಪಕ ಸುರೇಶ್ ಸಹ ಇದೇ ಮಾತನ್ನು ಹೇಳುತ್ತಾರೆ.

ಚಿತ್ರದಲ್ಲಿ ಅನಂತನಾಗ್ ಹೇಳುವ ಸಂಭಾಷಣೆ ಹೀಗಿದೆ ; ಸಿಎಂ ಮನೆಯನ್ನು ಶೋಧಿಸಿದಾಗ ನಾನು ಸಿಕ್ಕಿಬಿದ್ದೆ. ಸಿಎಂ ಗೆಳತಿ ರೋಸಿ ಮನೆಯಲ್ಲಿ ಕೋಟಿಗಟ್ಟಲೆ ಕಪ್ಪು ಹಣವಿದೆ ಎಂಬ ಮಾಹಿತಿ ಆಧರಿಸಿ ನಾನು ಅಲ್ಲಿಗೆ ಹೋಗಿದ್ದೆ. ನನ್ನನ್ನು ನೋಡಿದ್ದೆ ತಡ ರೋಸಿಯ ಸೀರೆ ಜಾರಿತು. ಆದಷ್ಟು ಮುಚ್ಚಲು ಪ್ರಯತ್ನಿಸಿದೆ. ಖಂಡಿತ ನಾನೇನು ನೋಡ್ತಿಲ್ಲಪ್ಪ ಎಂಬರ್ಥದ ಸಂಭಾಷೆ ಇದೆಯಂತೆ.

ಸುಹಾಸಿನಿ: ಸಿನಿಮಾಗಳಲ್ಲಿ ರೋಸಿ ಬಟ್ಟೆ ತೊಡುವುದೇ ಇಲ್ಲ. ಅಂದಹಾಗೆ ಸೀರೆ ಯಾಕೆ ಉಟ್ಟುಕೊಂಡಿದ್ದರೋ? ಅನಂತನಾಗ್: ನನಗೂ ಹಾಗೇ ಅನ್ನಿಸುತ್ತಿದೆ. ಹೌದು ರೋಸಿ ಸೀರೆ ಯಾಕೆ ಉಟ್ಟುಕೊಂಡಿದ್ದರು ಎಂಬ ಅನುಮಾನ ನನಗೂ ಕಾಡುತ್ತಿದೆ...ಹೀಗೆ ಸಾಗುತ್ತದೆ ಸಂಭಾಷಣೆ.

ಕೆಲ ವರ್ಷಗಳ ಹಿಂದೆ ರಾಧಿಕಾ ಅವರ ಮನೆಯಲ್ಲಿ ಅಪಾರ ಪ್ರಮಾಣದ ಕಪ್ಪು ಹಣ ಪತ್ತೆಯಾದ ಸುದ್ದಿ ಬಂದಿತ್ತು. ಆ ಹಣ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸೇರಿದ್ದು ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಚಿತ್ರದಲ್ಲಿ ಆ ಸನ್ನಿವೇಶವನ್ನು ನೆನಪಿಸುವ ಸಂಭಾಷಣೆ ಇರುವುದು ವಿವಾದಕ್ಕೆ ಕಾರಣವಾಗಿದೆ.

ಇದೊಂದು ಸಂಪೂರ್ಣ ಹಾಸ್ಯಭರಿತ ಚಿತ್ರ. ಕೆಲವು ಮಂದಿ ಅನಗತ್ಯವಾಗಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಎರಡನೆ ಮದುವೆ ಸಂಪೂರ್ಣ ಮನರಂಜನಾತ್ಮಕ ಚಿತ್ರ. ಯಾರ ಮನಸ್ಸನ್ನು ನೋಯಿಸಲು ಈ ಚಿತ್ರವನ್ನು ತೆಗೆದಿಲ್ಲ ಎಂದಿದ್ದಾರೆ ಚಿತ್ರದ ನಿರ್ಮಾಪಕ ಸುರೇಶ್. ಎಚ್ಡಿಕೆ ಮತ್ತು ರಾಧಿಕಾ ಬಗ್ಗೆ ಅನಗತ್ಯ ಸಂಭಾಷಣೆ ಹೆಣೆದಿರುವ ಕಾರಣ ಚಿತ್ರ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎನ್ನುತ್ತವೆ ಮೂಲಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada