»   » ಗಲ್ ರಾಣಿಯ ಪ್ರಥಮ ಚುಂಬನ ಪ್ರಸಂಗ

ಗಲ್ ರಾಣಿಯ ಪ್ರಥಮ ಚುಂಬನ ಪ್ರಸಂಗ

Posted By:
Subscribe to Filmibeat Kannada

'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಅಲಿಯಾಸ್ ಅರ್ಚನಾ ಗಲ್ ರಾಣಿ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಈ ಬಾರಿ ಅವರು ಕ್ರಿಕೆಟಿಗ ಶ್ರೀಶಾಂತ್ ಗೆ ಚುಂಬನ ನೀಡಿ ಸುದ್ದಿಯಾಗಿರುವುದು ವಿಶೇಷ. ಗಲ್ ರಾಣಿಗೆ ಇದು ಪ್ರಥಮ ಚುಂಬನ ಅಲ್ಲ ಅನ್ನಿಸುತ್ತದೆ. ಯಾಕೆಂದರೆ ಆಕೆಗೆ ದಂತ ಭಗ್ನವಾಗಿರುವ ಬಗ್ಗೆ ಎಲ್ಲೂ ಸುದ್ದಿಯಿಲ್ಲ.

ಗೋವಾ ತೀರದಲ್ಲಿ ಶ್ರೀಶಾಂತ್ ನನ್ನು ಅಪ್ಪಿ ಮುದ್ದಾಡಿ ಹೊಸ ವರ್ಷವನ್ನು ಗಲ್ ರಾಣಿ ಬರಮಾಡಿಕೊಂಡಿದ್ದರು. ಈ ಸಂದರ್ಭದಲ್ಲೇ ಶ್ರೀಶಾಂತ್ ನನ್ನು ಚುಂಬಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಎಲ್ಲಾ ಅಂತೆ ಕಂತೆಗಳನ್ನು ಸಂಜನಾ ನಯವಾಗಿ ತಿರಸ್ಕರಿಸಿದ್ದಾರೆ.

ಇದು ಕೇವಲ ವದಂತಿಯಷ್ಟೆ. ಕೆಲಸ ಇಲ್ಲದವರು ಮಾಡಿದ ಪುಕಾರು ಎಂದು ಸಂಜನಾ ಚುಂಬನ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಗೋವಾ ತೀರದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಶ್ರೀಶಾಂತ್ ಜತೆ ಸಂಜನಾ ಕಾಣಿಸಿಕೊಂಡಿದ್ದರು. ಆದರೆ ಚುಂಬನ, ಬಾಹುಬಂಧನ, ಆಲಿಂಗನ ಎಂತಹದ್ದು ಇಲ್ಲ ಎಂದು ಸಂಜನಾ ಹೇಳಿದ್ದಾರೆ.

''ಶ್ರೀಶಾಂತ್ ಮತ್ತು ಹೈದರಾಬಾದ್ ನ15 ಮಂದಿ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದು ನಿಜ. ಆದರೆ ಡಿಸೆಂಬರ್ 31ರ ರಾತ್ರಿ ನಾನು ಶ್ರೀಶಾಂತ್ ಜತೆ ಇರಲಿಲ್ಲ. ಕೆಲಸವಿಲ್ಲದವರು ಯಾರೋ ಈ ರೀತಿಯ ಸುದ್ದಿ ಹಬ್ಬಿಸಿದ್ದಾರೆ. ನಮ್ಮ ಸ್ನೇಹ ಸಂಬಂಧಕ್ಕೆ ಯಾರೋ ಹುಳಿ ಹಿಂಡುವ ಪ್ರಯತ್ನ ಮಾಡಿದ್ದಾರೆ ಅಷ್ಟೇ'' ಎಂದು ಸಂಜನಾ ಸಮಜಾಯಿಷಿ ನೀಡಿದ್ದಾರೆ.

ಈ ಹಿಂದೆ ಶ್ರೀಶಾಂತ್ ಹೆಸರಿನೊಂದಿಗೆ ಕನ್ನಡ ನಟಿ ಡೈಸಿ ಬೋಪಣ್ಣ ಹೆಸರು ಥಳುಕು ಹಾಕಿಕೊಂಡಿತ್ತು. ಇವರಿಬ್ಬರೂ ಕೇರಳದಲ್ಲಿ ಜಾಹೀರಾತು ಚಿತ್ರೀಕ್ರಣದಲ್ಲಿ ಭಾಗವಹಿಸಿದ್ದೇ ಈ ವದಂತಿಗೆ ಕಾರಣವಾಗಿತ್ತು. ಹಾಗೆಯೇ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಹೆಸರಿನೊಂದಿಗೂ ಶ್ರೀಶಾಂತ್ ಹೆಸರು ಅಂಟಿಕೊಂಡು ರಾದ್ಧಾಂತವಾಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada