»   » ಶ್ರುತಿ, ಮಹೇಂದರ್ ರಾಜಿ ಸಂಧಾನ ವಿಫಲ

ಶ್ರುತಿ, ಮಹೇಂದರ್ ರಾಜಿ ಸಂಧಾನ ವಿಫಲ

Posted By:
Subscribe to Filmibeat Kannada

ನಟಿ ಶ್ರುತಿ ಹಾಗೂ ಎಸ್ ಮಹೇಂದರ್ ದಂಪತಿಗಳು ಒಂದಾಗಿ ಬಾಳಲು ನಡೆಸಿದ ರಾಜಿ ಸಂಧಾನ ವಿಫಲವಾಗಿದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಇವರಿಬ್ಬರು ಒಂದಾಗಿ ಬಾಳಲು ಮನವೊಲಿಸುವ ಪ್ರಯತ್ನ ಮಾಡಲಾಯಿತು.

ವಿವಾಹ ವಿಚ್ಛೇದನ ಪ್ರಕರಣ ವಿಚಾರಣೆ ಪ್ರಾರಂಭವಾದ ನಂತರ ಇದೇ ಮೊದಲ ಸಲ ಶ್ರುತಿ ಮತ್ತು ಮಹೇಂದರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇಬ್ಬರ ಮನವೊಲಿಸಿ ರಾಜಿ ನಡೆಸಲು ಪ್ರಯತ್ನಿಸಲಾಯಿತು. ಶ್ರುತಿ ಮತ್ತು ಮಹೇಂದರ್ ಒಂದಾಗಲು ನಿರಾಕರಿಸಿದ್ದಾರೆ.

''ನಮ್ಮ್ಮಿಬ್ಬರ ನಡುವೆ ಮನಸ್ತಾನ ಉಂಟಾಗಿರುವುದರಿಂದ ಮತ್ತೆ ಒಟ್ಟಿಗೆ ಬಾಳಲು ಸಾಧ್ಯವಿಲ್ಲ'' ಎಂದು ಇವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಾಧೀಶರು ವಿಚಾರಣೆಯನ್ನು 15 ದಿನ ಮುಂದೂಡಿದ್ದಾರೆ. ''ಮಹೇಂದರ್ ಅವರಿಗೆ ನನ್ನನ್ನು ಪೋಷಿಸುವ ಸಾಮರ್ಥ್ಯವಿಲ್ಲ. ಹಾಗೆಯೇ ಬಹಿರಂಗಪಡಿಸಲಾಗದ ಕೆಲವು ಕಾರಣಗಳು ಇವೆ'' ಎಂದು ಶ್ರುತಿ ವಿವಾಹ ವಿಚ್ಛೇದನಕ್ಕೆ ಕಾರಣ ನೀಡಿದ್ದರು.

ಶ್ರುತಿ ಮತ್ತು ಮಹೇಂದರ್ ಕಳೆದ ಒಂದು ದಶಕದ ಹಿಂದೆ ಪ್ರೇಮ ವಿವಾಹವಾಗಿದ್ದರು. ಇವರಿಗೆ ಎಂಟು ವರ್ಷದ ಹೆಣ್ಣು ಮಗು ಸಹ ಇದೆ. ಈ ನಡುವೆ ಶ್ರುತಿ ಪತ್ರಕರ್ತ ಚಂದ್ರಚೂಡ್ (ಚಕ್ರವರ್ತಿ) ಅವರನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗಿತ್ತು. ನಂತರ ಇವರಿಬ್ಬರ ಸಂಬಂಧವೂ ಮುರಿದು ಬಿದ್ದಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಶ್ರುತಿ ರಾಜೀನಾಮೆ ನೀಡಬೇಕಾಯಿತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada