For Quick Alerts
  ALLOW NOTIFICATIONS  
  For Daily Alerts

  ನಮ್ಮಿಬ್ಬರ ಸಂಬಂಧ ಹದಗೆಟ್ಟಿಲ್ಲ, ಚೆನ್ನಾಗಿದ್ದೇವೆ: ರಾಧಿಕಾ

  |
  <ul id="pagination-digg"><li class="next"><a href="/gossips/07-radhika-acts-again-kannada-movie-home-banner-aid0172.html">Next »</a></li></ul>

  ನಟಿ ರಾಧಿಕಾ ಅವರು ಮತ್ತೆ ಮತ್ತೆ ಸುದ್ದಿಯಲ್ಲಿರುವಂತಾಗಿದೆ. ಕಾರಣ, ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅವರ ನಿರ್ಮಾಣದ ಲಕ್ಕಿ ಚಿತ್ರ ಒಂದಾದರೆ, (ಅವರೇ ಹೇಳಿಕೊಂಡಂತೆ ಅವರು ಮದುವೆಯಾಗಿರುವ) ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಜೊತೆ ರಾಧಿಕಾ ಸಂಬಂಧ ಹದಗೆಟ್ಟಿದೆ, ಅವರಿಬ್ಬರೂ ದೂರವಾಗಿದ್ದಾರೆಂಬ ವದಂತಿ ಇನ್ನೊಂದು.

  ಆದರೆ ಅವರಿಬ್ಬರೂ ದೂರವಾಗಿರುವ ಸುದ್ದಿಯನ್ನು ತಳ್ಳಿಹಾಕಿರುವ ರಾಧಿಕಾ ಅನಾವಶ್ಯಕ ಹಬ್ಬುತ್ತಿರುವ ಸುಳ್ಳುಸುದ್ದಿಯಿಂದ ಬೇಸರಪಟ್ಟುಕೊಂಡಿದ್ದಾರೆ. "ನಾವು ಚೆನ್ನಾಗಿಯೇ ಇದ್ದೇವೆ, ಸುದ್ದಿ ಸುಳ್ಳು. ನಾವಿಬ್ಬರೂ ದೂರವಾಗಿದ್ದೇವೆ ಅಂತ ಈಗಲೂ ಕೆಲವು ಪತ್ರಿಕೆಗಳು ಬರೆಯುತ್ತಿವೆ. ಅದನ್ನು ಓದಿದಾಗ ತುಂಬಾ ನೋವಾಗುತ್ತದೆ. ನಿಜ ಹೇಳಬೇಕೆಂದರೆ, ಆಗ ನನಗೆ ಧೈರ್ಯ ತುಂಬಿ ಸಮಾಧಾನ ಮಾಡುವುದು ನಮ್ಮೆಜಮಾನ್ರು. ಇಲ್ಲದೇ ಇರುತ್ತಿದ್ದರೆ ನಾನು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದೆ.

  ನಾವಿಬ್ಬರು ಚೆನ್ನಾಗಿರುವಾಗ ನೀನು ಚಿಂತೆ ಮಾಡುವ ಅಗತ್ಯವೇನಿದೆ? ಯಾರು ಏನು ಬೇಕಾದ್ರೂ ಬರೆದುಕೊಳ್ಳಲಿ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಅದರಿಂದಲೇ ನಾನೀಗ ಖುಷಿಯಾಗಿದ್ದೇನೆ. ಇದೊಂದೇ ಅಲ್ಲ, ಎಲ್ಲಾ ವಿಚಾರಗಳಲ್ಲೂ ಅವರು ನನಗೆ ಬೆಂಬಲವಾಗಿದ್ದಾರೆ. ನಿನಗೆ ಏನು ಮಾಡಬೇಕು ಅನ್ನಿಸುತ್ತೋ, ಅದನ್ನು ಮಾಡು ಅಂತ ಹುರಿದುಂಬಿಸುತ್ತಾರೆ. ಎಲ್ಲವನ್ನೂ ತಾಳ್ಮೆಯಿಂದ ಬಗೆಹರಿಸುತ್ತಾರೆ.

  ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಂಗಲೆಯಲ್ಲಿ ನನ್ನ ತಂದೆ, ತಾಯಿ ಮತ್ತು ಅಜ್ಜಿ ಇದ್ದೇವೆ. ನಾವೆಲ್ಲರೂ ಮನೆಯಲ್ಲಿ ತುಳು ಮಾತನಾಡುತ್ತೇವೆ. ಮಗಳು ಶಮಿಕಾಗೂ ತುಳು ಕಲಿಸಿದ್ದೇವೆ. ಆದರೆ ಅವರಿಗೆ ತುಳು ಬರುವುದಿಲ್ಲ. ಶಮಿಕಾಗೆ ಅಪ್ಪ ಅಂದ್ರೆ ತುಂಬಾನೇ ಇಷ್ಟ. ಕುಮಾರಸ್ವಾಮಿ ಮನೆಗೆ ಬರುತ್ತಿದ್ದಂತೆ ನನ್ನನ್ನೇ ಆಕೆ ಮರೆತು ಬಿಡ್ತಾಳೆ. ಅವರ ಹೊಟ್ಟೆ ಮೇಲೆ ಬಿದ್ದು ಹೊರಳಾಡುತ್ತಿರುತ್ತಾಳೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/gossips/07-radhika-acts-again-kannada-movie-home-banner-aid0172.html">Next »</a></li></ul>
  English summary
  Actress Radhika told that she and her husband HD Kumaraswamy are good in their relationship. Radhika has denied rumours about breakup with HD Kumaraswamy. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X