»   »  ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು

ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು

Subscribe to Filmibeat Kannada
Protest against Jaggesh
''ನನ್ನ ಪಾಲಿಗೆ ಅಂಬರೀಷ್ ಅಲ್ಲ ಡಾ.ರಾಜ್ ಸರ್ವೋತ್ತಮ ನಾಯಕ '' ಎಂದು ಹೇಳಿಕೆ ನೀಡಿರುವ ನಟ ಜಗ್ಗೇಶ್ ವಿರುದ್ಧ ಅಂಬರೀಷ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಸದಸ್ಯರು ಬೆಂಗಳೂರಿನ ನವರಂಗ್ ವೃತ್ತದಲ್ಲಿ ಜಗ್ಗೇಶ್ ವಿರುದ್ಧ ಘೋಷಣೆಗಳನ್ನು ಕೂಗಿ ಬುಧವಾರ ಪ್ರತಿಭಟಿಸಿದರು.

''ಕನ್ನಡ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರಕ್ಕೆ ನಟ ಅಂಬರೀಷ್ ಅವರ ಕೊಡುಗೆ ಅಪಾರ. ಅಂತಹ ನಟನ ಬಗ್ಗೆ ಜಗ್ಗೇಶ್ ಕೆಟ್ಟದಾಗಿ ಮಾತನಾಡಿ ಕೀಳುತನ ಪ್ರದರ್ಶಿಸಿದ್ದಾರೆ'' ಎಂದು ಅಂಬರೀಷ್ ಅಭಿಮಾನಿಗಳು ಕಿಡಿಕಾರಿದರು. ಜಗ್ಗೇಶ್ ಅವರ ಭೂತ ದಹನ ಮಾಡುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದರು.

''ಅಂಬರೀಷ್ ಅವರ ಬೆಂಬಲದಿಂದ ಚಿತ್ರರಂಗದಲ್ಲಿ ನೆಲೆಕಂಡುಕೊಂಡವರು ಜಗ್ಗೇಶ್. ಈಗ ಅವರನ್ನೇ ತೆಗಳುವ ಮೂಲಕ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅವರೊಬ್ಬ ಸರ್ವೋತ್ತಮ ನಾಯಕ ಅಲ್ಲ ಎಂದು ಹೇಳಿದ್ದಾರೆ. ಅವರ ಮನೆ ಬಾಗಿಲು ಕಾಯುವಾಗ ಜಗ್ಗೇಶ್ ಗೆ ಈ ವಿಷಯ ಮರೆತುಹೋಗಿತ್ತೇ?'' ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಟಿ ಕೆ ರಾಮು ಪ್ರಶ್ನಿಸಿದರು.

''ಹಣ ಮತ್ತು ಅಧಿಕಾರಕ್ಕಾಗಿ ಜಗ್ಗೇಶ್ ಏನು ಮಾಡಲೂ ಹೇಸುವುದಿಲ್ಲ.ಅವರ ಕಾರು ಚಾಲಕನ ಮೇಲೆ ನಡೆಸಿದ ಹಲ್ಲೆಯೇ ಇದಕ್ಕೆ ಸಾಕ್ಷಿ. ಕನ್ನಡದ ಬಗ್ಗೆ ಮಾತನಾಡುವ ಜಗ್ಗೇಶ್ ಯಾವ ಭಾಷೆ ಮಾತನಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ'' ಎಂದು ಟಿ ಕೆ ರಾಮು ಆಕ್ರೋಶ ವ್ಯಕ್ತಪಡಿಸಿದರು. ವಾರದಲ್ಲಿ ಜಗ್ಗೇಶ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಜಗ್ಗೇಶ್, ಅಂಬರೀಶ್ ಈಗ ಒಡೆದ ಹೃದಯಗಳು
ನವರಸ ನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ
ಅಂಬಿ ಮತ್ತು ಜಯಮಾಲಾ ಚುನಾವಣೆಗೆ ಸ್ಪರ್ಧೆ?
ಜಗ್ಗೇಶ್ ಸಾಲ ಕೇಳಿದರೆ ನಾನು ಕೊಟ್ಟು ಬಿಡ್ತೀನಾ?
ನವರಸ ನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada