»   » ಬಸಂತಕುಮಾರ್ ಪಾಟೀಲ್ ವಿರುದ್ಧ ಪ್ರತಿಭಟನೆ

ಬಸಂತಕುಮಾರ್ ಪಾಟೀಲ್ ವಿರುದ್ಧ ಪ್ರತಿಭಟನೆ

Posted By:
Subscribe to Filmibeat Kannada

ಮೇ.8ರಂದು ಪ್ರತಿಷ್ಠಿತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸದಸ್ಯರ ಓಲೈಕೆ, ಮನವೊಲಿಸುವ ಪ್ರಯತ್ನಗಳು ಜೋರಾಗಿ ನಡೆಯುತ್ತಿವೆ. ಬಸಂತಕುಮಾರ್ ಪಾಟೀಲ್ ಗೆ ಮತ ಹಾಕುವಂತೆ ಒಂದು ಗುಂಪು ಮಂಡಳಿಸದಸ್ಯರನ್ನು ಒತ್ತಾಯಿಸಿದ್ದನ್ನು ವಿರೋಧಿಸಿ ಮತ್ತೊಂದು ಸಸದ್ಯರ ಗುಂಪು ಶುಕ್ರವಾರ (ಮೇ.7) ಫಿಲ್ಮಂ ಚೇಂಬರ್ ಮುಂದೆ ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರು ಫಿಲ್ಮಂ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಸಂತಕುಮಾರ್ ಪಾಟೀಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಸ್ ಎಂ ಎಸ್ ಮೂಲಕ ಮತಹಾಕುವಂತೆ ಬೆದರಿಕೆಯೊಡ್ಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂಬಂಧ ಬೆಂಗಳೂರಿನ ಕುಮಾರಪಾರ್ಕ್ ಬಳಿಯ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಸಿನಿಮಾ ವಿತರಕ ಬಸಂತಕುಮಾರ್ ಪಾಟೀಲ್ ಬೆಂಬಲಿತ ಗುಂಪು ಮಂಡಳಿ ಸದಸ್ಯರನ್ನು ಬಸಂತ ಅವರಿಗೇ ಮತ ನೀಡುವಂತೆ ಒತ್ತಾಯಿಸಿದ್ದರು. ಬಸಂತಕುಮಾರ್ ಗೆ ಮತನೀಡುವಂತೆ ಎಸ್ ಎಂ ಎಸ್ ಮೂಲಕವೂ ಬೆದರಿಕೆಯೊಡ್ಡಲಾಗಿತ್ತು ಎಂದು ಮಂಡಳಿಯ ಸದಸ್ಯರು ಆರೋಪಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada