»   »  ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ

ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ

Subscribe to Filmibeat Kannada
Chakravarthy (File Photo)
ಎಸ್ ಮಹೇಂದರ್ ಅವರಿಂದ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಮೇ.5ರಂದು ಶ್ರುತಿ ಅರ್ಜಿ ಸಲ್ಲಿಸಿದ ವಿಚಾರ ಗೊತ್ತೇ ಇದೆ. ಇದೀಗ ಚಲನಚಿತ್ರ ಪತ್ರಕರ್ತ ಚಕ್ರವರ್ತಿ ಅವರನ್ನು ಮರುಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸುವ ಮೂಲಕ ಶ್ರುತಿ ವಿವಾಹ ವಿಚ್ಛೇದನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

''ಕಳೆದ 25 ವರ್ಷಗಳಿಂದ ಶ್ರುತಿ ಅವರು ನನಗೆ ಗೊತ್ತು. ಅಷ್ಟೇ ಅಲ್ಲ ನಾವಿಬ್ಬರೂ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನವರು. ವಿಶ್ವಕರ್ಮ ಸಮುದಾಯಕ್ಕೆ ಸೇರಿದ್ದು, ನನ್ನ ಮತ್ತು ಶ್ರುತಿ ಅವರ ತಾಯಿ ದೂರದ ಸಂಬಂಧಿಗಳು. ಆದರೆ ನಾವಿಬ್ಬರೂ ಒಂದಾಗಲು ಈ ಹೋಲಿಕೆಗಳಷ್ಟೇ ಕಾರಣವಲ್ಲ. ಇದಕ್ಕಿಂತಲೂ ಹೆಚ್ಚಾಗಿ ಶ್ರುತಿ ಮತ್ತು ನಾನು ಒಬ್ಬರನ್ನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ'' ಎನ್ನುತ್ತಾರೆ ಚಕ್ರವರ್ತಿ. ಚಿತ್ರನಿರ್ಮಾಪಕರೂ ಆಗಿರುವ ಚಕ್ರವರ್ತಿ ಅವರ ಮೊದಲ ಚಿತ್ರ 'ಜನ್ಮ' ನಿರ್ಮಾಣ ನಂತರದ ಕೆಲಸಗಳಲ್ಲಿದೆ. ಈ ಚಿತ್ರ ಬಿಡುಗಡೆಯ ನಂತರ ಶ್ರುತಿ ಅವರ ಚಿತ್ರ ಸೆಟ್ಟೇರಲಿದೆ.

''ಶ್ರುತಿ ಅವರಿಗೆ ವಿವಾಹ ವಿಚ್ಛೇದನ ಸಿಕ್ಕ ಕೂಡಲೇ ನಾನು ಅವರನ್ನುಮರು ಮದುವೆಯಾಗುತ್ತೇನೆ. ಶ್ರುತಿ ಅವರ ವಿವಾಹ ವಿಚ್ಛೇದನಕ್ಕೆ ಕಾರಣ ಏನು ಎಂಬುದು ನನಗೆ ಗೊತ್ತಿಲ್ಲ.ಅವರದೇ ಆದ ವೈಯಕ್ತಿಕ ಕಾರಣಗಳಿರಬಹುದು'' ಎಂದು ಚಕ್ರವರ್ತಿ ಪ್ರತಿಕ್ರಿಯಿಸಿದರು. ನಟಿ ಶ್ರುತಿ ಸಹ ಚಕ್ರವರ್ತಿಯೊಂದಿಗಿಗೆ ಮರು ಮದುವೆಯಾಗಲು ಒಮ್ಮತ ವ್ಯಕ್ತಪಡಿಸಿದ್ದಾರೆ. ''ವಿವಾಹ ವಿಚ್ಛೇದನ ಪಡೆಯಬೇಕು ಎಂದು ಬಹಳ ಹಿಂದೆಯೇ ನಿರ್ಧರಿಸಿದ್ದೆ. ಆದರೆ ಯಾಕೋ ಏನೋ ಧೈರ್ಯ ಬರಲಿಲ್ಲ. ಡೈವೋರ್ಸ್ ತೆಗೆದುಕೊಂಡರೆ ನನ್ನ ಬದುಕೇ ಮುಗಿದು ಹೋಗುತ್ತದೇನೋ ಎಂಬ ಭಯ ಕಾಡುತ್ತಿತ್ತು. ಆಗಲೇ ನನಗೆ ಚಕ್ರವರ್ತಿ ಪರಿಚಯವಾಗಿದ್ದು. ನಾವಿಬ್ಬರೂ ಹದಿಹರಯದ ಪ್ರೇಮಿಗಳೇನು ಅಲ್ಲ. ನಾವಿಬ್ಬರೂ ಮಧ್ಯ ವಯಸ್ಕರು. ಉಳಿದ ಜೀವನವನ್ನು ಚಕ್ರವರ್ತಿಯೊಂದಿಗೆ ಕಳೆಯಲು ನಿರ್ಧರಿಸಿದ್ದೇನೆ'' ಎನ್ನುತ್ತಾರೆ ಶ್ರುತಿ.

ಆದರೆ ಎಸ್ ಮಹೇಂದರ್ ಅವರ ಆಪ್ತರ ಪ್ರಕಾರ ಬಹಳ ಹಿಂದಿನಿಂದಲೇ ಚಕ್ರವರ್ತಿಯವರೊಂದಿಗೆ ಶ್ರುತಿ ಸಂಪರ್ಕದಲ್ಲಿದ್ದರಂತೆ. ಶ್ರುತಿ ರಾಜಕೀಯಕ್ಕೆ ಧುಮುಕಿದ ಮೇಲಂತೂ ಅವರಿಬ್ಬರು ಮತ್ತಷ್ಟು ಹತ್ತಿರವಾದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾದ ನಂತರ ಶ್ರುತಿ ಅವರು ಚಕ್ರವರ್ತಿಯನ್ನು ತಮ್ಮ ಕಾರಿನಲ್ಲೇ ಕಚೇರಿಗೆ ಕರೆದೊಯ್ಯುತ್ತಿದ್ದರಂತೆ. ಮುಂದಿನ ನಿರ್ಧಾರ ತೆಗೆದುಕೊಳ್ಳಿ ಎಂದು ಮಹೇಂದರ್ ಅವರಿಗೆ ನೇರವಾಗಿ ಇವರಿಬ್ಬರೂ ಹೇಳಿದ್ದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸುತ್ತಾರೆ.

Chakravarthy (File Photo)
ಮಹೇಂದರ್ ಗೆ ಸೇರಿದ ಬಂಗಲೆ ಮತ್ತು ಕಾರುಗಳು ಒಳಗೊಂಡಂತೆ ಎಲ್ಲಾ ಸ್ಥಿರ ಮತ್ತು ಚರಾಸ್ತಿಗಳು ಶ್ರುತಿ ಅವರ ಹೆಸರಿನಲ್ಲೇ ಇವೆಯಂತೆ. ಒಟ್ಟಿನಲ್ಲಿ ಶ್ರುತಿ ವಿವಾಹ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ನೀಡಿದರೆ ಮಹೇಂದರ್ ನಿಜಕ್ಕೂ ಅನಾಥವಾಗುತ್ತಾರೆ ಎನ್ನುತ್ತದೆ ಅವರ ಆಪ್ತ ವಲಯ. ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತಿರುವ ಮಹೇಂದರ್ ಮೈಸೂರಿಗೆ ಹೊರಟು ಹೋಗಿದ್ದಾರೆ. ಆತ್ಮೀಯರ ಬಳಿ ಮಹೇಂದರ್ ಕಣ್ಣೀರಿಟ್ಟಿರುವ ವಿಚಾರವೂ ಗುಟ್ಟಾಗಿ ಉಳಿದಿಲ್ಲ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆಯುವುದಾಗಿ ಮಹೇಂದರ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಟಿ ಶ್ರುತಿ
ಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!
ನಗೆದೋಣಿಯೇರಿದ ಅಳುಮುಂಜಿ ಶ್ರುತಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada