twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಸ್ಮಾರಕ ನಿರ್ಮಿಸಲು ಸರ್ಕಾರಕ್ಕೆ ಭಾರತಿ ಡೆಡ್‌ಲೈನ್

    By Rajendra
    |

    Bharathi Vishnuvardhan
    ಸಾಹಸಸಿಂಹ ವಿಷ್ಣುವರ್ಧನ್ ಕನ್ನಡಿಗರನ್ನು ಅಗಲಿ ಎರಡು ವರ್ಷಗಳೇ ಕಳೆಯುತ್ತಿವೆ. ಆದರೆ ಅವರ ಸ್ಮಾರಕ ನಿರ್ಮಾಣದ ಕನಸು ಇನ್ನೂ ಸಾಕಾರವಾಗಿಲ್ಲ. ಸರ್ಕಾರದ ಈ ದಿವ್ಯ ನಿರ್ಲಕ್ಷ್ಯಕ್ಕೆ ಭಾರತಿ ವಿಷ್ಣುವರ್ಧನ್ ಅವರು ಗುರುವಾರ (ಸೆ.8) ತಿರುಗೇಟು ನೀಡಿದರು.

    ಸೆಪ್ಟೆಂಬರ್ 18ರೊಳಗೆ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸ್ಮಾರಕ ಕಾಮಗಾರಿಯನ್ನು ಸರ್ಕಾರ ಆರಂಭಿಸಬೇಕು. ಇಲ್ಲದಿದ್ದರೆ ಅಭಿಮಾನಿಗಳ ಜೊತೆ ಸೇರಿ ತಾವೇ ಸ್ಮಾರಕ ನಿರ್ಮಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ. ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಸೆ.18ರೊಳಗೆ ವಿಷ್ಣು ಸ್ಮಾರಕ ಕಾಮಗಾರಿ ಆರಂಭಿಸಿ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ತಾವು ರಾಜ್ಯ ಸರ್ಕಾರದ ಮೊರೆ ಹೋಗುವುದಿಲ್ಲ ಎಂದರು. ವಿಷ್ಣು ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕಣ್ಣು ಕಿವಿ ಮುಚ್ಚಿ ಕುಳಿತಿರುವುದಕ್ಕೆ ಅವರು ಅಸಮಾಧಾನದ ಕಟ್ಟೆಹೊಡೆದಿತ್ತು.

    ದ್ವಾರಕೀಶ್‌ಗೆ ಷರತ್ತು: ದ್ವಾರಕೀಶ್ ನಿರ್ಮಿಸಿರುವ ವಿಷ್ಣುವರ್ಧನ ಚಿತ್ರದ ಬಿಡುಗಡೆಗೂ ಭಾರತಿ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಚಿತ್ರದ ಪ್ರಥಮ ಪ್ರತಿ ನೋಡಿದ ಬಳಿಕವಷ್ಟೆ ಚಿತ್ರ ಬಿಡುಗಡೆಗೆ ಅನುಮತಿ ನೀಡಲಾಗುತ್ತದೆ. ಚಿತ್ರರಂಗದ 10 ಮಂದಿ ಚಿತ್ರ ನೋಡುತ್ತೇವೆ. ವಿಷ್ಣು ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಸನ್ನಿವೇಶಗಳು, ಸಂಭಾಷಣೆ ಚಿತ್ರದಲ್ಲಿ ಇದ್ದರೆ ಚಿತ್ರ ಬಿಡುಗಡೆ ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರೆ.

    ಅನಂತ್ ಕುಮಾರ್‌ಗೆ ತರಾಟೆ: ಇದೇ ಸಂದರ್ಭದಲ್ಲಿ ಅವರು ಸಂಸದ ಅನಂತಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸರ್ಜಾಪುರ ಕೆಂಗೇರಿ ವರೆಗಿನ ರಸ್ತೆಗೆ ವಿಷ್ಣು ಹೆಸರಿಡುವುದಾಗಿ ಅನಂತಕುಮಾರ್ ಸೇರಿದಂತೆ ಹಲವು ಸಂಸದರು ಭರವಸೆ ನೀಡಿದರು. ಆದರೆ ಇದುವರೆಗೂ ರಸ್ತೆಗೆ ವಿಷ್ಣು ಹೆಸರಿಟ್ಟಿಲ್ಲ ಎಂದು ಬೇಸರಿಸಿಕೊಂಡರು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Bharathi Vishnuvardhan gives Sept 18th deadline for constructing Vishnuvardhan memorial in Abhiman Studio.Two years after the death of Vishnuvardhan, the work on a memorial for the actor, as promised by the State Government, is yet to take off.
    Thursday, September 8, 2011, 19:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X