»   » ದಿಗಂತ್ ಜತೆ ಜೆನ್ನಿಫರ್ ಕೊತ್ವಾಲ್ ಹೆಸರು ತಳುಕು

ದಿಗಂತ್ ಜತೆ ಜೆನ್ನಿಫರ್ ಕೊತ್ವಾಲ್ ಹೆಸರು ತಳುಕು

Subscribe to Filmibeat Kannada

ದೂದ್ ಪೇಡಾ ದಿಗಂತ್ ಹೆಸರಿನ ಜೊತೆಗೆ ಬಳುಕುವ ಬಳ್ಳಿ ಜೆನ್ನಿಫರ್ ಕೊತ್ವಾಲ್ ಹೆಸರು ತಳುಕು ಹಾಕಿಕೊಂಡಿದೆ. ಇವರಿಬ್ಬರ ನಡುವೆ ಸಂಬಂಧ ಇರುವ ಬಗ್ಗೆ ಗುಸುಗುಸು ಸುದ್ದಿಗಳು ಹರಿದಾಡಿದ್ದವು. ಒಂದು ಹಂತದಲ್ಲಿ ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಹ ಇತ್ತು. ಈ ಸುದ್ದಿಯಲ್ಲಿ ಹುರುಳಿಲ್ಲ ಎಂದು ಜೆನ್ನಿಫರ್ ಕೊತ್ವಾಲ್ ಇದೀಗ ಪ್ರತಿಕ್ರಿಯಿಸಿದ್ದಾರೆ.

''ನಾನು ಅಧಿಕೃತವಾಗಿ ಒಂಟಿಯಾಗಿದ್ದೇನೆ'' ಎಂದು ಜೆನ್ನಿಫರ್ ಕೊತ್ವಾಲ್ ತಿಳಿಸಿದ್ದಾರೆ. 'ಬಿಸಿಲೇ' ಚಿತ್ರ ಸೆಟ್ಟೇರಿದಾಗಿನಿಂದ ಇವರಿಬ್ಬರ ನಡುವಿನ ಸಂಬಂಧದ ವಿಷಯವೂ ಕಾವೇರಿತ್ತು. ಈ ಹಿಂದೆ ಆಲ್ ರೌಂಡ್ ಕ್ರಿಕೆಟರ್ ಯುವರಾಜ್ ಸಿಂಗ್ ಜೊತೆಗೂ ಜೆನ್ನಿಫರ್ ಹೆಸರು ಬೆಸೆದುಕೊಂಡಿತ್ತು.

ಇನ್ನು ದಿಗಂತ್ ವಿಷವೂ ಅಷ್ಟೇ. 'ಮನಸಾರೆ' ಚಿತ್ರದ ನಾಯಕಿ ಐಂದ್ರಿತಾ ರೇ, 'ಸ್ವಯಂವರ' ಬೆಡಗಿ ಶರ್ಮಿಳಾ ಮಾಂಡ್ರೆ ಜೊತೆಗೆ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಈ ಪಟ್ಟಿಗೆ ಹೊಸದಾಗಿ ಜೆನ್ನಿಫರ್ ಕೊತ್ವಾಲ್ ಸೇರ್ಪಡೆಯಾಗಿದ್ದಾರೆ. ಆದರೆ ಇದೆಲ್ಲಾ ಬರೀ ಗಾಸಿಪ್ ಸುದ್ದಿಗಳಷ್ಟೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಜೆನ್ನಿಫರ್ ಕೊತ್ವಾಲ್ ಮಾತನಾಡುತ್ತಾ, ದಿಗಂತ್ ಕೇವಲ ಸ್ಮಾರ್ಟ್ ನಟ ಅಷ್ಟೇ ಅಲ್ಲ, ಸ್ನೇಹಜೀವಿ ಸಹ. 'ಬಿಸಿಲೇ' ಸೆಟ್ಸ್ ನಲ್ಲಿ ದಿಗಂತ್ ಜೊತೆಗೆ ಒಂಚೂರು ಸಲುಗೆಯಿಂದಲೇ ಇದ್ದೆ. ಹಾಗಾಗಿ ಈ ರೀತಿಯ ಸುದ್ದಿ ಹಬ್ಬಿರಬೇಕು ಅಷ್ಟೆ. ಯಾರು ಏನೇ ಅರ್ಥ ಮಾಡಿಕೊಂಡರೂ ದಿಗಂತ್ ಮಾತ್ರ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಎನ್ನುತ್ತಾರೆ ಜೆನ್ನಿಫರ್.

ಇತ್ತೀಚೆಗೆ ಜೆನ್ನಿಫರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲವಲ್ಲಾ? ಎಂದು ಕಾರಣ ಕೇಳಿದರೆ, ಇದೀಗ ಚೇತರಿಕೊಂಡಿರುವ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರಂತೆ. ಆಗಾಗ 'ಬಿಸಿಲೇ' ಚಿತ್ರದ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. 'ಬಿಸಿಲೇ' ಡಿಸೆಂಬರ್ ಮಧ್ಯ ದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು 2010ರ ವೇಳೆಗೆ 'ಜೋಗಿ 2' ಆರಂಭವಾಗಲಿದೆ ಎನ್ನುತ್ತಾರೆ ಜೆನ್ನಿಫರ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada