»   »  ಸರೋಜ್ ಖಾನ್‌ಗೆ ಏಕೋ ಮುನಿಸು

ಸರೋಜ್ ಖಾನ್‌ಗೆ ಏಕೋ ಮುನಿಸು

Subscribe to Filmibeat Kannada

*ಜಯಂತಿ

Saroj Khan
'ಯುವ' ಸಿನಿಮಾದಲ್ಲಿ ನೀವು ಕೆಲಸ ಮಾಡಿದ್ದೀರಂತಲ್ಲಾ? ಆ ಅನುಭವ ಹೇಗಿತ್ತು? ಅಂತ ಸರೋಜ್ ಖಾನ್‌ಗೆ ಇ-ಮೇಲ್ ಮೂಲಕ ಪ್ರಶ್ನೆ ಕಳುಹಿಸಿಕೊಟ್ಟೆವು. ಅದಕ್ಕೆ ಅವರು ಬರೆದ ಒಂದೇ ಸಾಲಿನ ಉತ್ತರ-ಪ್ಲೀಸ್ ಡೋಂಟ್ ಆಸ್ಕ್ ಮಿ ಎನಿಥಿಂಗ್ ಅಬೌಟ್ ದಟ್ ಪ್ರಾಜೆಕ್ಟ್. ಐ ಆಮ್ ನಾಟ್ ಹ್ಯಾಪಿ. ಸೋ, ಐ ಡೋಂಟ್ ವಾಂಟ್ ಟು ಕಮೆಂಟ್ ಆನ್ ಇಟ್.

ಸರೋಜ್ ಖಾನ್ ಕನ್ನಡ ಸಿನಿಮಾದ ಹಾಡೊಂದಕ್ಕೆ ಮೊದಲ ಬಾರಿಗೆ ನೃತ್ಯ ನಿರ್ದೇಶನ ಮಾಡಿದ ಖುಷಿಯನ್ನು ಯುವ ಚಿತ್ರತಂಡ ಇತ್ತೀಚೆಗಷ್ಟೇ ಹಂಚಿಕೊಂಡಿತ್ತು. ಆದರೆ, ಈಗ ಸರೋಜ್ ಖಾನ್ ಹೀಗೆ ಯಾಕೆ ಹೇಳುತ್ತಿದ್ದಾರೆ ಅನ್ನೋದು ಚಿತ್ರತಂಡಕ್ಕೂ ಅಚ್ಚರಿಯಾಗಿ ಕಾಣುತ್ತಿದೆ. ನಿರ್ದೇಶಕ ನರೇಂದ್ರ ಬಾಬು ಈ ಮಾತು ಕೇಳಿ ಬೆಚ್ಚುವುದೊಂದೇ ಬಾಕಿ.

ಸರೋಜ್ ಖಾನ್ ನೃತ್ಯ ನಿರ್ದೇಶಿಸಿರುವ ಹಾಡಿಗೆ ಅಂದಾಜು ಇಪ್ಪತ್ತು ಲಕ್ಷ ರೂಪಾಯಿ ಖರ್ಚಾಗಿದೆ. ಇದರಲ್ಲಿ ಸರೋಜ್ ಸಂಭಾವನೆ ಕೂಡ ಸೇರಿದೆ. ಅದು ಹೆಚ್ಚೇನೂ ಅಲ್ಲ; ಕೇವಲ ಮೂರೂವರೆ ಲಕ್ಷ. ನಾಯಕಿ ಮಧು ಈ ಹಾಡಿಗೆಂದೇ ಹದಿನೈದು ದಿನ ರಿಹರ್ಸಲ್ ಮಾಡಿದ್ದರು. ಸರೋಜ್ ತಮಗೆ ನೃತ್ಯವನ್ನಷ್ಟೇ ಅಲ್ಲ; ಕೆಲವು ಮುಖ್ಯ ಮ್ಯಾನರಿಸಂಗಳನ್ನೂ ಹೇಳಿಕೊಟ್ಟದ್ದರು ಅಂತ ಮುಂಬೈ ಮೂಲದ ಮಧು ಕ್ಯಾಸೆಟ್ ಬಿಡುಗಡೆ ದಿನ ಹೇಳಿದ್ದರು. ಹಾಗಾದರೆ ಸರೋಜ್ ಖಾನ್‌ಗೆ ಈ ಸಿನಿಮಾ ಬಗ್ಗೆ ಆಗಿರುವ ಬೇಸರವಾದರೂ ಏನು? ಅದಕ್ಕೆ ಮಾತ್ರ ಉತ್ತರ ಸಿಕ್ಕೇ ಇಲ್ಲ.

ಕನ್ನಡಕ್ಕೆ ಏಕ್ ದೋ ತೀನ್... ನೃತ್ಯ ನಿರ್ದೇಶಕಿ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada