twitter
    For Quick Alerts
    ALLOW NOTIFICATIONS  
    For Daily Alerts

    ಗುರುವಿಗೇ ತಿರುಮಂತ್ರ: ಎಸ್ ನಾರಾಯಣ್ vs ಮೈಲಾರಿ ಚಂದ್ರು

    |

    S Narayan & R Chandru
    ಕನ್ನಡದಲ್ಲಿ 'ತಾಜ್ ಮಹಲ್' ಕಟ್ಟಿ 'ಮೈಲಾರಿ'ಯನ್ನು ಕರೆತಂದ ಆರ್ ಚಂದ್ರು ನಿರ್ದೇಶನದ ಬಹು ನಿರೀಕ್ಷಿತ ಕೋ.ಕೋ. ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಗಾಂಧಿನಗರದ ಮೂಲಗಳ ಪ್ರಕಾರ ಕೋ.ಕೋ. ಚಿತ್ರ ಕೆಂಪೇಗೌಡ ರಸ್ತೆಯ ಸಾಗರ್ ಚಿತ್ರಮಂದಿರದಲ್ಲಿ ತೆರೆಕಾಣುವುದು ಖಚಿತ.

    2011 ಡಿಸೆಂಬರ್ ನಲ್ಲಿ ತೆರೆಕಂಡ ಎಸ್ ನಾರಾಯಣ್ ನಿರ್ದೇಶನದ ಗಣೇಶ್ ಅಭಿನಯದ ಶೈಲೂ ಚಿತ್ರ ಸಾಗರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಈಗ ಕೋ.ಕೋ. ಚಿತ್ರ ಬಿಡುಗಡೆಯಾದರೆ ಶೈಲೂ ಅಲ್ಲಿಂದ ಎತ್ತಂಗಡಿಯಾಗುವುದು ಖಂಡಿತ.

    ಈ ಬಗ್ಗೆ ಎಸ್ ನಾರಾಯಣ್ ಅವರನ್ನು ಕೇಳಿದರೆ, ಸಾಗರ್ ಚಿತ್ರಮಂದಿರದಿಂದ ನನ್ನ ಚಿತ್ರವನ್ನು ಎತ್ತಂಗಡಿ ಮಾಡುವ ಪ್ರಶ್ತ್ನೆಯೇ ಇಲ್ಲ. ರಾಜ್ಯಾದ್ಯಂತ ಶೈಲೂ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಕುಟುಂಬ ಸಮೇತ ಬಂದು ಜನ ಚಿತ್ರ ನೋಡುತ್ತಿದ್ದಾರೆ. ಶೈಲೂ ಚಿತ್ರವನ್ನು ಒಂದು ವೇಳೆ ಎತ್ತಂಗಡಿ ಮಾಡಿದರೆ ನಾನು ಮುಂದಿನ ತಂತ್ರದ ಬಗ್ಗೆ ಯೋಚಿಸುತ್ತೇನೆ ಎಂದು ಖಾರವಾಗಿ ಹೇಳಿದ್ದಾರೆ.

    ಇತ್ತ, ಆರ್ ಚಂದ್ರು ಶೈಲೂ ಕಲೆಕ್ಷನ್ ಕಡಿಮೆಯಾಗಿದೆ. ಸಾಗರ್ ನಲ್ಲೆ ಕೋ.ಕೋ. ಚಿತ್ರ ಬಿಡುಗಡೆ ಮಾಡುವುದು ಖಂಡಿತ ಎಂದು ತನ್ನ ಆಪ್ತರ ಬಳಿಯಲಿ ಹೇಳಿಕೊಂಡು ತಿರುಗಾಡುತ್ತಿದ್ದಾರಂತೆ. ಈ ಮೂಲಕ ಗುರು ಎಸ್ ನಾರಾಯಣ್ ಗೆ ಸಡ್ಡು ಹೊಡೆದು ಚಿತ್ರ ಬಿಡುಗಡೆ ಮಾಡಲು ಶಿಷ್ಯ ಚಂದ್ರು ಏನು ತಿರುಮಂತ್ರ ಹಾಕುತ್ತಾರೆ ಎಂದು ಕಾದು ನೋಡಬೇಕು.

    ಈ ಮೂಲಕ ಮತ್ತೊಮ್ಮೆ ಗಾಂಧಿನಗರದಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆಯ ಕೂಗು ಕೇಳಿ ಬರುತ್ತಿದೆ.

    English summary
    Kannada films again facing theater problem in K G Road. Much awaited Ko. Ko. movie set to release in Sagar theater where Sahiloo is now screening.
    Tuesday, January 10, 2012, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X