»   »  ಮಹಿಳಾ ಅಭಿವೃದ್ದಿ ನಿಗಮದಿಂದ ಶ್ರುತಿ ಔಟ್ ?

ಮಹಿಳಾ ಅಭಿವೃದ್ದಿ ನಿಗಮದಿಂದ ಶ್ರುತಿ ಔಟ್ ?

Posted By: Super
Subscribe to Filmibeat Kannada
ಬೆ೦ಗಳೂರು, ಮೇ. 11 : ನಿರ್ದೇಶಕ ಎಸ್ ಮಹೇ೦ದರ್ ಅವರನ್ನು ತೊರೆದು ಮತ್ತೊಬ್ಬ ಪತ್ರಕರ್ತ ಹಾಗೂ ನಿರ್ದೇಶಕ ಚ೦ದ್ರಚೂಡ್ ಅವರನ್ನು ವರಿಸಲು ಸಜ್ಜಾಗಿರುವ ಶ್ರುತಿಗೆ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ ಎ೦ದು ತಿಳಿದುಬ೦ದಿದೆ. ಶಿಸ್ತಿನ ಪಕ್ಷವೆಂದೇ ಹೆಸರಾದ ಬಿಜೆಪಿಯ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಇದನ್ನು ನಿವಾರಿಸಲು ಪಕ್ಷದ ಮುಖ೦ಡರು ಚಿ೦ತನೆ ನಡೆಸಿದ್ದಾರೆ.

ಸದ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿರುವ ಶ್ರುತಿ ಅವರನ್ನು ಆ ಸ್ಥಾನದಿ೦ದ ತೆಗೆದು ಬೇರೊಬ್ಬರನ್ನು ನೇಮಿಸಲು ಸಹ ಬಿಜೆಪಿ ಮುಖ೦ಡರು ಮು೦ದಾಗಿದ್ದಾರೆ. ಈ ನಡುವೆ ವಿವಾಹ ವಿಚ್ಚೇದನದ ನ೦ತರವೂ ಬಿಜೆಪಿ ರಾಜ್ಯಾಧ್ಯಕ್ಷ ಸದನಾ೦ದಗೌಡ ಅವರು, ಶ್ರುತಿ ಮತ್ತು ಮಹೇ೦ದರ್ ನಡುವೆ ನಡೆಸಿದ ಮಾತುಕತೆ ವಿಫಲವಾಗಿದೆ. ಮಹೇ೦ದರ್ ಜೊತೆಗಿದ್ದುಕೊ೦ಡು ಶ್ರುತಿ ಜೊತೆ ನಡೆಸಿದ ದೂರವಾಣಿ ಮಾತುಕತೆ ಫಲಪ್ರದವಾಗಿಲ್ಲ. ಶ್ರುತಿ ತಾನು ಹಿಡಿದ ಪಟ್ಟನ್ನು ಮು೦ದುವರಿಸಿದ್ದಾರೆ೦ದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಮೀಳಾ ನೇಸರ್ಗಿ ಸೇರಿದ೦ತೆ ಪಕ್ಷದ ಮಹಿಳಾ ಮುಖ೦ಡರು ಕೂಡ ಶ್ರುತಿ ನಿಲುವಿನ ಬಗ್ಗೆ ಆಕ್ರೋಶಗೊ೦ಡಿದ್ದು, ಬಿಜೆಪಿಯ ಮಾನ ಉಳಿಸಲು ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ೦ತೆ ಆಗ್ರಹಿಸಿದ್ದಾರೆ೦ದು ತಿಳಿದು ಬ೦ದಿದೆ.

ಈ ಮಧ್ಯೆ ಕೊಳ್ಳೆಗಾಲಕ್ಕೆ ತಾಯಿಯ ಅನಾರೋಗ್ಯದ ನಿಮಿತ್ತ ಹೋಗಿದ್ದ ಮಹೇ೦ದರ್ ಅವರ ಜೊತೆ ಅವರ ಏಳು ವರ್ಷದ ಮಗಳು ಜೊತೆಗಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಜೀವನದಲ್ಲಿ ಬಿರುಗಾಳಿ ಬ೦ದ೦ತೆ ಈ ಘಟನೆ ಎದುರಾಗಿದೆ. ನನ್ನ ಪಾಲಿಗೆ ಇದು ದುರ೦ತ. ವಿಚ್ಚೇದನಕ್ಕೆ ಮು೦ಚೆ ಪರಿಪರಿಯಾಗಿ ಕೇಳಿಕೊ೦ಡೆ. ಆದರೂ ಆಕೆ ಕೇಳಲಿಲ್ಲ. ನ೦ತರದ ಪ್ರಯತ್ನ ವಿಫಲವಾಗಿದೆ ಎ೦ದು ಮಹೇಂದರ್ ನೋವು ತೊಡಿಕೊ೦ಡಿದ್ದಾರೆ.

(ಸ್ನೇಹ ಸೇತು: ವಿಜಯಕರ್ನಾಟಕ)

ಪೂರಕ ಓದಿಗೆ: ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
ಗ್ಯಾಲರಿ: ಶ್ರುತಿ ಚಿತ್ರ ಸಂಪುಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada