Just In
- 1 hr ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 2 hrs ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
- 3 hrs ago
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- 15 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
Don't Miss!
- News
ನೆದರ್ಲೆಂಡ್ಸ್ ಅಂಗಸಂಸ್ಥೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲಿದೆ ಟೆಸ್ಲಾ
- Automobiles
ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್ ಪಡೆದುಕೊಳ್ಳಲಿದೆ ಟಾಟಾ ಹೊಸ ಸಫಾರಿ ಎಸ್ಯುವಿ
- Finance
ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಪೆಟ್ರೋಲ್: ನಿಮ್ಮ ನಗರದಲ್ಲೆಷ್ಟು?
- Sports
ಐಎಸ್ಎಲ್: ಸಮಬಲದ ಪ್ರದರ್ಶನ ನೀಡಿ ಡ್ರಾ ಮಾಡಿಕೊಂಡ ಎಟಿಕೆಎಂಬಿ, ಗೋವಾ
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿನಿಮಾ ಚಾನ್ಸ್ ಕೊಡಿಸ್ತೀನಿ ಎಂದು ಕೈ ಕೊಟ್ಟ
ಬಣ್ಣದ ಲೋಕದ ಬೆಡಗಿಗೆ ಮರುಳಾಗಿ ಬರುವ ಮಾಡೆಲ್ ಗಳನ್ನು ಪಾಪದ ಕೂಪಕ್ಕೆ ತಳ್ಳುವುದು, ವಂಚಿಸಿ ಬೇಕಾದಂತೆ ಬಳಸಿಕೊಳ್ಳುವುದು ಮುಂಬೈ ಸಿನಿಲೋಕದಲ್ಲಿ ಕಾಮನ್. ಅಲ್ಲಿ ಎಲ್ಲವೂ ನಂಬಿಕೆ ಮೇಲೆ ನಡೆಯುತ್ತದೆ. ಗಾಡ್ ಫಾದರ್ ಗಳಿಲ್ಲದ ಎಷ್ಟೋ ನಟಿಯರು ಫೀಲ್ಡ್ ಗೆ ಎಂಟ್ರಿ ಕೊಡಲು ಏಜೆಂಟ್ ಅನ್ನು ನಂಬಿ ಆತನಿಗೆ ಒಂದಿಷ್ಟು ಅಮೌಂಟ್ ಕೊಟ್ಟು ತಮ್ಮ ಜೀವತಾವಧಿಯ ಕನಸು ಇನ್ನೇನು ನನಸಾಯಿತು ಎಂದು ಗರಿ ಬಿಚ್ಚಿದ ಹಕ್ಕಿಯಂತೆ ಯುವತಿಯರು ಹಾರುತ್ತಿರುತ್ತಾರೆ.
ಆದರೆ, ಹೀಗೆ ಹಾರಲು ಹೊರಟ ನಟಿಯರ ರೆಕ್ಕೆ ಕತ್ತರಿಸಿದರೆ ಹೇಗೆ, ತಮಗೆ ಮಾರ್ಗದರ್ಶಿಯಾಗಿ ದಾರಿ ತೋರಲು ಇರುವ ಏಜೆಂಟ್, ಪಿಂಪ್ ನಂತೆ ಆಡಿದರೆ ಏನು ಮಾಡುವುದು? ಸ್ಪಷ್ಟ ಉತ್ತರ ಯಾರ ಬಳಿಯೂ ಇಲ್ಲ. ಹೆಚ್ಚೆಂದರೆ ಪೊಲೀಸರಿಗೆ ದೂರು, ಮಾಧ್ಯಮಗಳ ಮುಂದೆ ಕಣ್ಣೀರಿಡುವುದು ಮಾಡಬಹುದು ಅಷ್ಟೇ. ಸಚಿನ್ ಸುವರ್ಣ ನಾಯಕತ್ವದ ಕನ್ನಡ ಚಿತ್ರ ಶ್ರೀಮೋಕ್ಷದ ನಾಯಕಿ ರಿತು ಸಚದೇವ ಮಾಡಿದ್ದು ಇದನ್ನೇ.
ಅತಿ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಮನೆಗೆ ಪ್ರವೇಶ ನೀಡುವುದಾಗಿ ಹೇಳಿದ್ದ ಏಜೆಂಟ್ ನಡುನೀರಿನಲ್ಲಿ ಕೈಬಿಟ್ಟಿದ್ದಾನೆ. ಆತನ ಜೋಳಿಗೆ ಲಕ್ಷಾಂತರ ದುಡ್ಡು ಸುರಿದಿದ್ದೀನಿ. ಆತ ಹೇಳಿದ ರೀತಿ ತಯಾರಿ ನಡೆಸಿದ್ದೀನಿ ಆದರೂ, ಆತ ನನ್ನನ್ನು ಕಡೆಗಣಿಸಿದ್ದಲ್ಲದೆ, ಬಿಗ್ ಬಾಸ್ ಪ್ರವೇಶದ ಅವಕಾಶ ವಂಚಿಸಿದ್ದಾನೆ. ಕೆಟ್ಟ ಭಾಷೆಯಲ್ಲಿ ಸಂದೇಶಗಳನ್ನು ಕಳಿಸಿದ್ದಲ್ಲದೆ, ಕಿರುಕುಳ ನೀಡಿದ್ದಾನೆ ಎಂದು ಮಾಧ್ಯಮಗಳ ಮುಂದೆ ರಿತು ದುಃಖ ತೋಡಿಕೊಂಡಿದ್ದಾಳೆ.
ಫ್ಲಿನ್ ರೆಮೆಡಿಯೋಸ್ ಎಂಬ ಏಜೆಂಟ್ ನಿಂದ ನಾಲ್ಕು ಲಕ್ಷ ರೂ ವಂಚನೆಯಾಗಿದೆ. ಮ್ಯೂಸಿಕ್ ಅಲ್ಬಂ, ಬಿಗ್ ಬಾಸ್ ಪ್ರವೇಶ ಸೇರಿದಂತೆ ಹಲವು ಪೋಗ್ರಾಂಗಳಿಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ದ್ರೋಹ ಬಗೆದಿದ್ದಾನೆ. ಆರ್ಥಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಎಂದು ರಾತ್ರಿ ಹೊತ್ತು ಮೆಸೇಜ್ ಕಳಿಸುತ್ತಾನೆ. ಅವನ ನಡವಳಿಕೆ ಭಯ ಹುಟ್ಟಿಸಿದೆ ಎಂದು ಮುಂಬೈನ ವರ್ಸೊವಾ ಪೊಲೀಸ್ ಠಾಣೆಯಲ್ಲಿ ರಿತು ದೂರು ದಾಖಲಿಸಿದ್ದಾರೆ.
ರಿತು ದೂರಿಗೆ ಪ್ರತಿಕ್ರಿಯಿಸಿರುವ ಫ್ಲಿನ್, ಆಕೆಯನ್ನು ಇಷ್ಟಪಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಆದರೆ, ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಮ್ಯೂಸಿಕ್ ಅಲ್ಬಂ ಲಾಂಚ್ ಮಾಡಲು 3 ಲಕ್ಷ ಪಡೆದಿರುವುದು ನಿಜ. ಆದರೆ, ಸಮಯಕ್ಕೆ ಸರಿಯಾಗಿ ಅಮೌಂಟ್ ಸಿಗದೆ ಅಲ್ಬಂ ಹೊರತರಲು ವಿಳಂಬವಾಗಿದೆ. ಇದರಿಂದ ಆಕೆಗೆ ಕೋಪ ಬಂದು, ಈ ರೀತಿ ಆಡಿದ್ದಾಳೆ ಎಂದಿದ್ದಾನೆ.
ತೆಲುಗು ನಿರ್ಮಾಪಕ ಎಂದು ಹೇಳಿ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ರಿತು, ಹೈದರಾಬಾದ್ ಪೊಲೀಸರಿಗೆ ದೂರಿತ್ತಿದ್ದಳು.