For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕನ ಮೇಲೆ ಕೇಸ್ ಜಡಿದ ಸೆಕ್ಸಿ ತಾರೆ ಸೋನಾ!

  By Rajendra
  |

  ದಕ್ಷಿಣ ಭಾರತದ ಮಾಜಿ ಸೌಂದರ್ಯ ರಾಣಿ, ಫ್ಯಾಷನ್ ಡಿಸೈನರ್, ಕನ್ನಡ ಚಿತ್ರ 'ನಮ್ ಯಜಮಾನ್ರು' ಚಿತ್ರದಲ್ಲಿ ನಟಿಸಿದ್ದ ಬಿಚ್ಚುಡುಗೆಯ ಸಿನೆಮಾ ತಾರೆ ಸೋನಾ ಹೇಡನ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ರ ಎಸ್ಪಿಬಿ ಚರಣ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಬಳಿಕ ಇಬ್ಬರ ನಡುವೆ ನಡೆದ ರಹಸ್ಯ ಸಂಧಾನದ ಮೂಲಕ ವಿವಾದ ಬಗೆಹರಿದಿತ್ತು.

  ಈ ಬಾರಿ ಮತ್ತೊಮ್ಮೆ ಸುದ್ದಿ ಮಾಡಿರುವ ಸೋನಾ ನಿರ್ಮಾಪಕರೊಬ್ಬರ ಮೇಲೆ ಚೀಟಿಂಗ್ ಕೇಸ್ ಜಡಿದಿದ್ದಾಳೆ. ಟಿ ಶಿವ ಎಂಬ ನಿರ್ಮಾಪಕನ ಮೇಲೆ ತಮಿಳು ಚಿತ್ರ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾಳೆ. 'ಕನ್ನಿಮೋಳಿ' ಎಂಬ ಚಿತ್ರವನ್ನು ಶಿವ ಮತ್ತು ನಾನು ಇಬ್ಬರೂ ಕೂಡಿಯೇ ಶೇ.50-50ರ ಪಾಲುದಾರಿಕೆಯಲ್ಲಿ ನಿರ್ಮಿಸಿದ್ದೆವು.

  ಈ ಚಿತ್ರದ ರೀಮೇಕ್ ಹಾಗೂ ಡಬ್ಬಿಂಗ್ ರೈಟ್ಸ್‌ನಲ್ಲಿ ಪಾಲು ನೀಡಲು ಇಬ್ಬರ ನಡುವೆ ಮಾತುಕತೆಯಾಗಿತ್ತು. ಆದರೆ ಶಿವ ಈಗ ತಮಗೆ ಹೇಳದೆ ಕೇಳದೆ ಚಿತ್ರದ ಡಬ್ಬಿಂಗ್ ರೈಟ್ಸ್ ತೆಲುಗು ನಿರ್ಮಾಪಕ ಜಕ್ಕುಲ ನಾಗೇಶ್ವರ ರಾವ್ ಎಂಬುವವರಿಗೆ ಮಾರಿದ್ದಾರೆ ಎಂದು ಸೋನಾ ಕಂಪ್ಲೇಟ್ ಶೀಟ್‌ನಲ್ಲಿ ತಿಳಿಸಿದ್ದಾರೆ. ನಿರ್ಮಾಪಕರ ಸಂಘ ಏನು ಕ್ರಮಕೈಗೊಳ್ಳುತ್ತದೋ ನೋಡಬೇಕು. (ಏಜೆನ್ಸೀಸ್)

  English summary
  Actress Sona Heiden is in the news again. Earlier filing a case against Well known singer SP Bala Subrahmanyam's son Charan for sexual harassment. Now she has filed a cheating case against producer T Siva at the Kollywood Producers council.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X