»   » ಕತ್ರೀನಾ ತಂಗಿ ಇಸೆಬೆಲ್ ಹಗರಣ

ಕತ್ರೀನಾ ತಂಗಿ ಇಸೆಬೆಲ್ ಹಗರಣ

Posted By:
Subscribe to Filmibeat Kannada

ಸದ್ಯ ಬಾಲಿವುಡ್ಡಿನಲ್ಲಿ ಭಾರೀ ಬೇಡಿಕೆ ಹೊಂದಿರುವ ಕತ್ರಿನಾಗೆ ವಿಚಿತ್ರ ಮನಸ್ಸಿನ ಪ್ರೇಮಿ ಸಲ್ಮಾನ್ ಪ್ರೇಮಕಾಟ ಒಂದೆಡೆಯಾದರೆ, ಕಷ್ಟಪಟ್ಟು ಹಿಂದಿ ಕಲಿಕೆಯ ಹೊಣೆ ಬೇರೆ ಹೊತ್ತಿದ್ದಾರೆ. ಇದರ ನಡುವೆ ತಂಗಿ ಇಸಬೆಲ್ ಕೈಫ್ ಅವರ ಲೈಂಗಿಕ ಹಗರಣ ಎಂಎಂಎಸ್ ವಿಡಿಯೋ ಬೇರೆ ಕತ್ರೀನಾಳನ್ನು ಚಿಂತೆಗೀಡುಮಾಡಿದೆ.

ಆಂಗ್ಲೋ ಇಂಡಿಯನ್ ಬೆಡಗಿ ಕತ್ರೀನಾಳ ತಂಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿ ಹೆಸರು ಗಳಿಸುವ ಮೊದಲೇ ಕೆಟ್ಟ ಕಾರಣಕ್ಕೆ ಜನಪ್ರಿಯತೆ ಗಳಿಸಿದ್ದಾರೆ. ಇಸಬೆಲ್ ಕೈಫ್ ಅನಾಮಿಕ ಯುವಕನೊಂದಿಗೆ ಲೈಂಗಿಕ ಸಂಪರ್ಕ ನಡೆಸುವ ವೀಡಿಯೋ ಸಿಡಿಗಳು ಈಗ ಮುಂಬೈನ ಹಾದಿ ಬೀದಿಗಳಲ್ಲಿ ಬಿಕರಿಯಾಗುತ್ತಿದೆ. ಈ ಡಿವಿಡಿಗೆ ಬೋಲ್ಡ್ ಆಗಿ 'ಇಸೆಬೆಲ್ ಕೈಫ್' ಎಂಬ ಹೆಸರನ್ನೇ ಇಡಲಾಗಿದೆಯಂತೆ. ಡಿವಿಡಿಯಲ್ಲಿ 10 ನಿಮಿಷಗಳ ಕಾಲದ ಲೈಂಗಿಕ ಕ್ರಿಯೆಯ ವಿಡಿಯೋ ತುಣುಕಿದೆ. ಈಗಾಗಲೇ ಭಾರತ ಹಾಗೂ ಇಂಗ್ಲೆಂಡ್‌ಗಳಲ್ಲಿ ಭಾರೀ ಜನಪ್ರಿಯವಾಗಿರುವ ಈ ವಿಡಿಯೋವನ್ನು ಯುಟ್ಯೂಬ್ ಸೈಟ್‌ನಲ್ಲಿ ಬ್ಲಾಕ್ ಮಾಡಲಾಗಿದೆ. ಆದರೂ ವಿಡಿಯೋದ ತುಣುಕುಗಳು ಈಗಲೂ ಮೊಬೈಲ್‌ಗಳಲ್ಲಿ, ನೆಟ್‌ನಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಿದಾಡುತ್ತಿದೆ.

ಆದರೆ, ವಿಡಿಯೋದಲ್ಲಿ ನೋಡಿದವರು ಇದು ಥೇಟ್ ಕತ್ರಿನಾರ ತಂಗಿಯೇ ಎಂದರೆ, ಇನ್ನೂ ಕೆಲವರು ಇದು ಇಸಬೆಲ್ಲಾ ಥರಾನೇ ಇರುವ ಬೇರೆ ಹುಡುಗಿಯ ವಿಡಿಯೋ, ಸುಮ್ಮನೆ ಇಸಬೆಲ್ ಹೆಸರನ್ನು ಇದಕ್ಕೆ ಥಳುಕು ಹಾಕಲಾಗುತ್ತಿದೆ ಎನ್ನುತ್ತ್ತಾರೆ. ವಿಡಿಯೋದಲ್ಲಿ ಹುಡುಗಿಯ ಮುಖ ಸ್ಪಷ್ಟವಾಗಿ ಕಾಣುತ್ತಿದ್ದರೂ, ಹುಡುಗನ ಮುಖ ಕಾಣುವುದಿಲ್ಲ. ಹುಡುಗಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ ಹುಡುಗ ಬೇಕೆಂತಲೇ ಹೊಟೇಲಿನಲ್ಲಿ ಕದ್ದು ವಿಡಿಯೋ ಚಿತ್ರೀಕರಿಸಿದಂತಿದೆ ಎನ್ನಲಾಗಿದೆ.

ಸ್ಪರ್ಧೆ:ಜಸ್ಟ್ ಮಾತ್ ಮಾತಲ್ಲಿ ಸಿಡಿ ಗೆಲ್ಲುವ ಅವಕಾಶ

ಈ ಇಡೀ ಪ್ರಕರಣದ ಬಗ್ಗೆ ಕತ್ರೀನಾ, ಸಲ್ಮಾನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸದ್ಯ ಬಾಲಿವುಡ್ ನ ನಂ. 1 ಸ್ಥಾನದಲ್ಲಿರುವ ಕೈಫ್ ಸಾಧನೆ ಕಂಡು ಅವರ ಸಿನಿ ಜೀವನಕ್ಕೆ ಕಳಂಕ ತರಲು ಪ್ರತಿ ಸ್ಪರ್ಧಿಗಳು ಮಾಡಿರುವ ಹುನ್ನಾರವಿದು ಎಂಬ ಮಾತು ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಚಾಲ್ತಿಯಲ್ಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada