»   »  ಸದ್ಯಕ್ಕೆ ಬೀಸೋದೊಣ್ಣೆಯಿಂದ ಪಾರಾದ ಶ್ರುತಿ!

ಸದ್ಯಕ್ಕೆ ಬೀಸೋದೊಣ್ಣೆಯಿಂದ ಪಾರಾದ ಶ್ರುತಿ!

Posted By:
Subscribe to Filmibeat Kannada
Actress Shruthi
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಚಿತ್ರನಟಿ ಶ್ರುತಿ ಅವರನ್ನು ಸದ್ಯಕ್ಕೆ ವಜಾಗೊಳಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ. ಶ್ರುತಿ ಅವರ ವಿವಾಹ ವಿಚ್ಛೇದನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗುತ್ತದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು.

ಈ ಕುರಿತು ವಿವರ ನೀಡಿದ ಸದಾನಂದ ಗೌಡರು, ಶ್ರುತಿ ಅವರ ವಿವಾಹ ವಿಚ್ಛೇದನ ಪ್ರಕರಣ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪವಾದರೆ ನಿಗಮದ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ತೀರ್ಮಾನಿಸಲಾಗುತ್ತದೆ .ಇದು ಅವರ ಬದುಕಿನ ವೈಯಕ್ತಿಕ ಬದುಕಿನ ವಿಚಾರ. ಇದರಲ್ಲಿ ಪಕ್ಷ ಹಸ್ತಕ್ಷೇಪ ಮಾಡುವಂತಿಲ್ಲ. ಮಹೇಂದರ್ ಮತ್ತು ಶ್ರುತಿ ಅವರಿಬ್ಬರನ್ನೂ ಕರೆದು ಮಾತನಾಡಿದ್ದೇನೆ. ಆದರೆ ಶ್ರುತಿ ಅವರು ವಿವಾಹ ವಿಚ್ಛೇದನಕ್ಕೆ ಪಟ್ಟು ಹಿಡಿದಿದ್ದರಿಂದ ನಮ್ಮ ಮಧ್ಯಸ್ಥಿಕೆ ಫಲಕಾರಿಯಾಗಲಿಲ್ಲ ಎಂದರು.

ನಿಗಮದ ಅಧ್ಯಕ್ಷ ಸ್ಥಾನದಿಂದ ಶ್ರುತಿ ಅವರನ್ನು ವಜಾಗೊಳಿಸುವ ಆಲೋಚನೆ ಸದ್ಯಕ್ಕೆ ಪಕ್ಷದಲ್ಲಿಲ್ಲ. ಪ್ರಕರಣದ ಸಾಧಕ ಬಾಧಕಗಳನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಅವರ ವಿವಾಹ ವಿಚ್ಛೇದನ ಪ್ರಕರಣ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ಯೋಚಿಸಬೇಕಾಗುತ್ತದೆ ಎಂದು ಸದಾನಂದಗೌಡರು ಮಾರ್ಮಿಕವಾಗಿ ಉತ್ತರಿಸಿದರು. ಏತನ್ಮಧ್ಯೆ ಕಾಂಗ್ರೆಸ್ ಪಕ್ಷ ಶ್ರುತಿ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಹಿಳಾ ಅಭಿವೃದ್ದಿ ನಿಗಮದಿಂದ ಶ್ರುತಿ ಔಟ್?
ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಟಿ ಶ್ರುತಿ
ಟಿವಿ 9 : ಚಕ್ರವ್ಯೂಹದಲ್ಲಿ ಸಿಲುಕಿದ ಶ್ರುತಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada