»   » ಚಿತ್ರನಟರ ರಾಜಿ ಯತ್ನ ನ್ಯಾಯಾಂಗ ನಿಂದನೆಯೇ?

ಚಿತ್ರನಟರ ರಾಜಿ ಯತ್ನ ನ್ಯಾಯಾಂಗ ನಿಂದನೆಯೇ?

Posted By:
Subscribe to Filmibeat Kannada
<ul id="pagination-digg"><li class="next"><a href="/gossips/13-darshan-beating-wife-reconcile-sub-judice-aid0135.html">Next »</a></li></ul>
darshan-reconcile-kannada-heroes-sub-judice
ಬೆಂಗಳೂರು, ಸೆ.13: ದರ್ಶನ್ ದಂಪತಿ ವಿವಾದದ ಬಗ್ಗೆ ನಾನಾ ವ್ಯಾಖ್ಯಾನಗಳು, ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಅದರಲ್ಲೂ ಹೆಣ್ಣಿಗೊಂದು (ಅ)ನ್ಯಾಯ ಗಂಡಿಗೊಂದು ನ್ಯಾಯದ ಬಗ್ಗೆ ನಾಡಿನ ಪ್ರಜ್ಞಾವಂತ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದಿನ (ಮಂಗಳವಾರ) ಪ್ರಜಾವಾಣಿ ಪತ್ರಿಕೆಯಲ್ಲಿ ಸವಿವರ ಲೇಖನವೊಂದು ಪ್ರಕಟಗೊಂಡಿದೆ.

ಪತ್ನಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಚಿತ್ರನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಡುವೆ ರಾಜಿ ಸಂಧಾನ ನಡೆಸಲು ಪ್ರಯತ್ನಿಸಿರುವ ಚಿತ್ರನಟರಾದ ಅಂಬರೀಷ್, ಜಗ್ಗೇಶ್, ವಿಜಯ್ ಹಾಗೂ ಇತರರು ನ್ಯಾಯಾಂಗ ನಿಂದನೆಗೆ ಗುರಿಯಾಗುವ ಸಾಧ್ಯತೆ ಇದೆ.

ಕಾರಣ, ನ್ಯಾಯಾಲಯದಲ್ಲಿ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುವಾಗ, ಅದರ ಮಧ್ಯೆ ಇವರು ಪ್ರವೇಶ ಮಾಡಿದ್ದಾರೆ ಎಂಬ ಆರೋಪ. ಈ ಹಿನ್ನೆಲೆಯಲ್ಲಿ ಎಲ್ಲರ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಕ್ರಿಮಿನಲ್ ಮೊಕದ್ದಮೆ ಹೂಡಲು ವಕೀಲ ಎ.ವಿ. ಅಮರನಾಥನ್ ನಿರ್ಧರಿಸಿದ್ದು, ಈ ಕುರಿತು ದಾಖಲೆಗಳನ್ನು ಕಲೆಹಾಕಿದ್ದಾರೆ.

<ul id="pagination-digg"><li class="next"><a href="/gossips/13-darshan-beating-wife-reconcile-sub-judice-aid0135.html">Next »</a></li></ul>
English summary
In the Kannada Actor Darshan beating his wife episode at this stage there is no chance for reconcile in law says senior advocate AV Amarnath. As such files case against Kannada heroes who are 'acting' for Darshan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada