»   »  ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?

ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?

Posted By:
Subscribe to Filmibeat Kannada
Movie Slum Bala still
ಬೆಂಗಳೂರು ಹುಡುಗ ವಿಜಯ್ ಮತ್ತು ಮಂಗಳೂರು ಬೆಡಗಿ ಶುಭಾ ಪೂಂಜಾ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹೊಸದಲ್ಲ. ಆದರೆ ಈಗ ಗಾಂಧಿನಗರದಲ್ಲಿ ಹಬ್ಬಿರುವ ಮತ್ತೊಂದು ಸುದ್ದಿ ಕೊಂಚ ಬಲವಾಗಿಯೇ ಬೀಸಿದೆ! ಶುಭಾ ಮತ್ತು ವಿಜಯ್ ಒಟ್ಟೊಟ್ಟಿಗೆ ಇದ್ದಾರಂತೆ ಎಂಬ ಗುಸುಗುಸು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿಸುತ್ತಿದೆ.

ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವಿಜಯ್ ಅವರನ್ನು ಸಂಪರ್ಕಿಸಿ ಕೇಳಿದಾಗ, ಯಾರು ತಪ್ಪು ಮಾಡಲ್ಲ ಹೇಳಿ? ತಪ್ಪು ಮಾಡದ ಜನ ಎಲ್ಲಿ ಇದ್ದಾರೆ ಅಂತ ಹೇಳಿ? ಪಾರ್ಲಿಮೆಂಟ್ ನಿಂದ ಹಿಡಿದು ಸಣ್ಣ ಕಾರ್ಪೊರೇಟ್ ಆಫೀಸ್ ತನಕ ಪ್ರತಿಯೊಂದು ಕಡೆಯೂ ಹುಡುಗ, ಹುಡುಗಿಗೆ ಸಂಬಂಧ ಕಟ್ಟುವವರು, ವದಂತಿ, ಕಟ್ಟುಕತೆಗಳನ್ನು ಹಬ್ಬಿಸುವ ಜನ ಇದ್ದೇ ಇರುತ್ತಾರೆ. ಅಂತಹವರ ಬಗ್ಗೆಯಲ್ಲಾ ತಲೆ ಕೆಡಿಸಿಕೊಂಡರೆ ಅಷ್ಟೇ ಎಂಬುದು ವಿಜಯ್ ಪ್ರತಿಕ್ರಿಯೆ.

ಈಗಾಗಲೇ ಮದುವೆಯಾಗಿರುವ ವಿಜಯ್ ಖಾಸಗಿ ಜೀವನ ಮೇಲೂ ಈ ವದಂತಿ ಕೊಂಚ ಪರಿಣಾಮ ಬೀರಿದೆ. ಆದರೆ ವಿಜಯ್ ಮಾತ್ರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ.''ಇದು ನನ್ನ ಜೀವನ. ನನ್ನ ಖಾಸಗಿ ಜೀವನದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಇದು ಕೇವಲ ವದಂತಿ ಅಷ್ಟೇ ಎಂಬುದು ನನಗೂ ಗೊತ್ತು ನನ್ನ ಪತ್ನಿಗೂ ಗೊತ್ತು.ಈ ರೀತಿಯ ವದಂತಿಗಳಿಂದ ನಮ್ಮ ದಾಂಪತ್ಯ ಜೀವನಕ್ಕೇನು ತೊಂದರೆಯಾಗಿಲ್ಲ. ಸುಖವಾಗಿದ್ದೇನೆ'' ಎಂದು ವಿಜಯ್ ಪ್ರತಿಕ್ರಿಯಿಸಿದ್ದಾರೆ.

''ಶುಭಪುಂಜ ಸಹ ದಿಟ್ಟ ಹುಡುಗಿ. ಈ ರೀತಿಯ ಗಾಳಿಸುದ್ದಿಗಳನ್ನು ಹೇಗೆ ಗಾಳಿಗೆ ತೂರಬೇಕು ಎಂಬುದು ಆಕೆಗೂ ಗೊತ್ತು. ಖಾಸಗಿ ಜೀವನ, ಮತ್ತೊಬ್ಬರೊಂದಿಗೆ ಸಂಬಂಧದ ಕತೆಗಳು ಈ ವಿಚಾರಗಳಲ್ಲಿ ನನಗೆ ಆಸಕ್ತಿ ಇಲ್ಲ. ಪ್ರಸ್ತುತ ನಾನು ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿರುವ ಉಗ್ರ ಕಸಬ್ ತಂದೆತಾಯಿಯ ಸಂದರ್ಶನಓದುತ್ತಿದ್ದೇನೆ. ಅವರ ಮನಸ್ಥಿತಿ, ಮುಂಬೈ ಮೇಲೆ ಪಾಕ್ ಉಗ್ರರ ದಾಳಿ ಇದರ ಬಗ್ಗೆ ನನ್ನ ಚಿತ್ತ ಇದೆ. ಈ ರೀತಿಯ ಗಾಳಿ ಸುದ್ದಿಗಳ ಬಗ್ಗೆ ಅಲ್ಲ ಎಂದು ಹೇಳಿ ವಿರಾಮ ಚಿಹ್ನೆ ಇಟ್ಟಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಏನಿಲ್ಲ ಏನಿಲ್ಲ..ನನ್ನ ವಿಜಿ ನಡುವೆ ಅಂಥದ್ದೇನಿಲ್ಲ : ಶುಭಾ
ಕೈದಿಗಳ ಹೃದಯ ಕದ್ದ ದುನಿಯಾ ವಿಜಯ್
ಯೋಗೀಶನಿಗೆ ವಿಜಯ್ ಗೂಸಾ ಫ್ಯಾಶ್ ಬ್ಲಾಕ್
ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada