twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಷ್ ಅವರೇ ನೀವು ಹೇಳೋದು ಸರೀನಾ?

    By * ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ
    |

    ನಟ ದರ್ಶನ್ ಹೆಂಡತಿಗೆ ಹೊಡೆದ ಪ್ರಕರಣದ ಹಿನ್ನೆಲೆಯಲ್ಲಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹೆಂಡತಿಗೆ ಹೊಡೆಯುವುದು ಶೌರ್ಯವಲ್ಲ ಕ್ರೌರ್ಯ. ನಟ ಅಂಬರೀಷ್, ' ಗಂಡ ಹೆಂಡತಿಗೆ ಹೊಡೆಯುವುದು, ಮಗ ತಾಯಿಗೆ ಹೊಡೆಯುವುದು ಕುಟುಂಬದಲ್ಲಿ ಸರ್ವೇ ಸಾಮಾನ್ಯ' ಎಂದಿರುವುದು ಸರಿಯಲ್ಲ.

    ಮಕ್ಕಳು ದಾರಿ ತಪ್ಪಿದಾಗ ತಂದೆ ತಾಯಿ ಗದರಿಸುತ್ತಾರೆ. ಅದಕ್ಕೂ ಸರಿಹೋಗದಿದ್ದರೆ ಅತ್ಯಂತ ವಿಷಾದದಿಂದ ಬಡಿಯುತ್ತಾರೆ. ಬಡಿದು, ಬಡಿದದ್ದಾಗಿ ವಿಷಾದದಿಂದ ಅಳುತ್ತಾರೆ. ಮಕ್ಕಳು ತಾಯಿಯನ್ನು ಬಡಿಯುವುದನ್ನು ಸಮರ್ಥಿಸುವುದಂತೂ ತೀರಾ ಅನ್ಯಾಯದ ವಿಷಯ. ಪ್ರೀತಿಯಿಂದ ಗೆಲ್ಲಲಾಗದವರು ಕ್ರೌರ್ಯಕ್ಕಿಳಿಯುತ್ತಾರೆ.

    ಭಿನ್ನಮತವನ್ನು ಸಹಿಸುವ, ಚರ್ಚಿಸುವ ಮನೋಧರ್ಮ ಮನೆ ಮನೆಗಳಲ್ಲಿ ಬೆಳೆದು ಬರಬೇಕು. ಮನೆಗಳು ಪ್ರಜಾಪ್ರಭುತ್ವದ ತಾಣಗಳಾಗಬೇಕು. ಅಪ್ಪ ಅಳುವ ಪಕ್ಷಕ್ಕೆ ಸೇರಿದ್ದರೆ, ಅಮ್ಮ ಮಕ್ಕಳು ಕೇಳುವ ಪಕ್ಷಕ್ಕೆ ಸೇರಿರುತ್ತಾರೆ. ಅಪ್ಪನನ್ನು ಪ್ರಶ್ನಿಸದಿದ್ದರೆ ಆತ ಸರ್ವಾಧಿಕಾರಿಯಾಗುತ್ತಾನೆ.

    ದೊಡ್ಡ ಕುಟುಂಬಗಳ ಜನ ಹೊಂದಾಣಿಕೆಯಿಂದ ಬದುಕುತ್ತಿದ್ದರು. ಗಂಡ, ಹೆಂಡತಿ ಮಕ್ಕಳ ಸಣ್ಣ ಕುಟುಂಬದ ಜನ ಗುದ್ದಾಡಿ ಹಾಳಾಗುತ್ತಿರುವುದು ಭೋಗಲಾಲಸೆಯಿಂದ. ದರ್ಶನ್‌ನ ತೆರೆಯ ಹಿಂದಿನ ಬದುಕು ಸರಿಯಾಗಬೇಕು. ದರ್ಶನ್ ಸಾರ್ವಜನಿಕವಾಗಿ ಪತ್ನಿಯ ಕ್ಷಮೆ ಕೋರುವುದು ಆತನ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

    English summary
    Kannada actor Darshan should apologize his wife publicly says one of our reader. He also alleges Rebel Star Ambarish stand on Darshan controversy.
    Wednesday, September 14, 2011, 17:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X