Just In
Don't Miss!
- Sports
ರಾಜಸ್ಥಾನ ತಂಡದಿಂದ ಸ್ಟೀವ್ ಸ್ಮಿತ್ ಔಟ್, ಸಂಜು ಹೊಸ ಕ್ಯಾಪ್ಟನ್!
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- News
ಮಕ್ಕಳಿಗೆ ಯಾವ ಕೊರೊನಾ ಲಸಿಕೆ ಸೂಕ್ತ; ಏಮ್ಸ್ ನಿರ್ದೇಶಕರ ಸಲಹೆ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೀರೇಶ್ ಚಿತ್ರಮಂದಿರದಿಂದ 'ಮೈಲಾರಿ' ಎತ್ತಂಗಡಿ
ಚಿತ್ರವೊಂದು ಯಶಸ್ವಿ ಪ್ರದರ್ಶನ ಕಾಣುತ್ತಿದ್ದಾಗಲೆ ಅದನ್ನು ಎತ್ತಂಗಡಿ ಮಾಡುವುದು ಗಾಂಧಿನಗರಕ್ಕೇನು ಹೊಸದಲ್ಲ. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಮೈಲಾರಿ' ಚಿತ್ರಕ್ಕೂ ಇದೇ ಗತಿಯಾಗಿದೆ. 'ಮೈಲಾರಿ' ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ವೀರೇಶ್ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕರು ಗರಂ ಆಗಿದ್ದಾರೆ.
ರಮೇಶ್ ಯಾದವ್ ನಿರ್ಮಾಣದ 'ಬಾಸ್' ಚಿತ್ರ ಜನವರಿ 14ರಂದು ತೆರೆಗೆ ಅಪ್ಪಳಿದ್ದು, ಇದೇ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಮೈಲಾರಿ' ಚಿತ್ರಕ್ಕೆ ಕೊಕ್ ನೀಡಲಾಗಿದೆ. ಈ ಸಂಬಂಧ 'ಮೈಲಾರಿ' ನಿರ್ಮಾಪಕರು ವೀರೇಶ್ ಚಿತ್ರಮಂದಿರದ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದಿದ್ದಾರೆ.
'ಮೈಲಾರಿ'ಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಶಿವಣ್ಣನ ಅಭಿಮಾನಿಗಳು ರೇಸ್ ಕೋರ್ಸ್ ರಸ್ತೆಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದರು. ಪತ್ರಕರ್ತ ಅಗ್ನಿ ಶ್ರೀಧರ್ ಹಾಗೂ ನಿರ್ಮಾಪಕ ರವೀಂದ್ರಅವರು 'ಮೈಲಾರಿ' ಚಿತ್ರದ ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರಿಗೆ ಸಾಥ್ ನೀಡಿದರು.
ಈ ಸಂಬಂಧ ಫಿಲಂ ಚೇಂಬರ್ ಏನು ಕ್ರಮಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಬಾಸ್' ಚಿತ್ರಕ್ಕೆ ಬೆಳಗಿನ ಪ್ರದರ್ಶನ ಹಾಗೂ 'ಮೈಲಾರಿ'ಗೆ ಉಳಿದ ಪ್ರದರ್ಶನಗಳನ್ನು ನೀಡುವ ರಾಜಿ ಸೂತ್ರವನ್ನು ಇಬ್ಬರೂ ನಿರ್ಮಾಪಕರ ಮುಂದಿಡಲಾಗಿದೆ ಎನ್ನಲಾಗಿದೆ. [ಹ್ಯಾಟ್ರಿಕ್ ಹೀರೋ]