»   » ನಟಿ ನಿತ್ಯಾ ಮೆನನ್ ಮೇಲಿನ 'ನಿಷೇಧಾಜ್ಞೆ' ರದ್ದು

ನಟಿ ನಿತ್ಯಾ ಮೆನನ್ ಮೇಲಿನ 'ನಿಷೇಧಾಜ್ಞೆ' ರದ್ದು

Posted By:
Subscribe to Filmibeat Kannada

ಕನ್ನಡ ಮೂಲದ ನಟಿ ನಿತ್ಯಾ ಮೆನನ್‌ಗೆ ಪೊಗರು ಜಾಸ್ತಿ ಎಂಬ ಕಾರಣಕ್ಕೆ ಕೇರಳ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (KFPA) ಆಕೆಯ ಮೇಲೆ ನಿಷೇಧ ಹೇರಿತ್ತು. ಈಗ ಆ ನಿಷೇಧಾಜ್ಞೆಯನ್ನು ಸಂಘಟನೆ ವಿಧಿಯಿಲ್ಲದೆ ವಾಪಸ್ಸು ಪಡೆದಿದೆ.

ಕೇರಳ ಚಲನಚಿತ್ರ ಕಲಾವಿದರ ಸಂಘ (AMMA) ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಸುಸೂತ್ರವಾಗಿ ಬಗೆಹರಿಸಿದೆ. ನಿತ್ಯಾ ಮೆನನ್‌ಗೆ ಈಗ ಹೊಸ ಜೀವ ಬಂದಂತಾಗಿದೆ. ನಿಷೇಧದ ಕಾರಣ ಆಕೆಯ ಮುಂಬರುವ ಹಾಗೂ ಬಿಡುಗಡೆಯಾಗಬೇಕಿದ್ದ ಚಿತ್ರಗಳಿಗೆ ಭಾರಿ ಹೊಡೆತ ಬಿದ್ದಿತ್ತು.

ನಿತ್ಯಾ ಮೆನನ್‌ರ ಯಾವುದೇ ಮಲಯಾಳಂ ಚಿತ್ರಗಳನ್ನು ಬಿಡುಗಡೆ ಮಾಡಲು ಬಿಡಲ್ಲ ಎಂದು ಕೇರಳ ನಿರ್ಮಾಪಕರ ಸಂಘ ಗುಡುಗಿತ್ತು. ಇದರಿಂದ ಬಿಡುಗಡೆಯಾಗಬೇಕಿದ್ದ ನಿತ್ಯಾರ ಎರಡು ಮಲಯಾಳಂ ಚಿತ್ರಗಳು ಡಬ್ಬದಲ್ಲೇ ಕೊಳೆಯುವಂತಾಗಿತ್ತು. ಇಷ್ಟಕ್ಕೂ ನಡೆದದ್ದೇನೆಂದರೆ.

ಟಿಕೆ ರಾಜೀವ್ ಕುಮಾರ್ ನಿರ್ದೇಶನದ 'ತತ್ಸಮಯಂ ಒರು ಪೆಣ್ಕುಟ್ಟಿ' ಎಂಬ ಮಲೆಯಾಳಂ ಚಿತ್ರದ ಶೂಟಿಂಗ್ ಮುಗಿಸಿ ನಿತ್ಯಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆ ಸಮಯಕ್ಕೆ ನಿತ್ಯಾರನ್ನು ಕಾಣಲು ಟಾಪ್ ನಿರ್ಮಾಪಕರಾದ ಜಿ ಸುರೇಶ್ ಕುಮಾರ್, ಎ ಜೋಸೆಫ್ ಹಾಗೂ ಸಾಬು ಚೆರಿಯನ್ ಬಂದಿದ್ದಾರೆ.

ಎ ಜೋಸೆಫ್ ಸಿನಿಮಾದಲ್ಲಿ ನಟನೆ ಹಾಗೂ ಹಾಡುಗಾರಿಕೆ ಸಂಬಂಧ ಮಾತನಾಡಲು ಬಂದಿದ್ದ ನಿರ್ಮಾಪಕರ ಗುಂಪನ್ನು ಭೇಟಿ ಮಾಡದ ನಿತ್ಯಾ, ನನ್ನ ಮ್ಯಾನೇಜರ್ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿತ್ತು.

ಇದರಿಂದ ಚಲನಚಿತ್ರ ನಿರ್ಮಾಪಕರಿಗೆ ಪಿತ್ತ ಕೆರಳಿ, ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂಬ ಕಾರಣ ನೀಡಿ ನಿಷೇಧ ಹೇರಿತ್ತು. ಈ ಸಂಬಂಧ ನಿತ್ಯಾ ತಡವಾಗಿ AMMA ಬಳಿ ಅಳಲು ತೋಡಿಕೊಂಡಿದ್ದರು. ಈಗ ಆಕೆಯ ಸಮಸ್ಯೆ ಬಗೆಹರಿದಿದೆ.

ಮಲಯಾಳಂ ಚಿತ್ರರಂಗದಲ್ಲಿ ಇರುವುದೇ ಬೆರಳೆಣಿಕೆಯಷ್ಟು ನಟರು. ಅದರಲ್ಲೂ ನಿತ್ಯಾರಂತಹ ಯುವ ತಾರೆಗಳಿಗೆ ಭಾರಿ ಡಿಮ್ಯಾಂಡ್ ಇದೆ. ಪರಿಸ್ಥಿತಿ ಹೀಗಿರಬೇಕಾದರೆ ನಿಷೇಧ ಹೇರಿ ಅವರ ಕಾಲ ಮೇಲೆ ಅವರೇ ಕಲ್ಲು ಎತ್ತಿ ಹಾಕಿಕೊಂಡಂತಾಗಿತ್ತು ಮಲ್ಲು ನಿರ್ಮಾಪರ ಸ್ಥಿತಿ. (ಏಜೆನ್ಸೀಸ್)

English summary
Kerala Film Producers Association (KFPA) lifted ban on actress Nithya Menon. After much discussions, Producers' association of Mollywood has withdrawn their ban against actress Nithya Menon. The decision was made following the intervention of AMMA.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada