twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಕ್ಕೆ ಒನಕೆ ಓಬವ್ವ ಹೆಸರು; ಇತಿಹಾಸಕ್ಕೆ ಬಗೆದ ದ್ರೋಹ

    By * ಬಿ.ಎಲ್.ವೇಣು, ಚಿತ್ರದುರ್ಗ
    |

    Obavva still
    ಎಂಆರ್‌ಕೆ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ 'ಒನಕೆ ಓಬವ್ವ' ಎಂದು ಹೆಸರಿಟ್ಟಿರುವುದು ಶೋಚನೀಯ. ಚಿತ್ರದುರ್ಗದ ಒನಕೆ ಓಬವ್ವ ಇತಿಹಾಸ ಪ್ರಸಿದ್ಧ ವ್ಯಕ್ತಿಯಾಗಿದ್ದು, ಕರ್ನಾಟಕದ ಮನೆಮಾತಾದ ವೀರವನಿತೆ. ಯಾವುದೇ ಆಕ್ಷನ್ ಚಿತ್ರ ಒಂದಕ್ಕೆ ಆಕೆಯ ಹೆಸರಿಡುವುದು ಇತಿಹಾಸಕ್ಕೆ ಬಗೆದ ದ್ರೋಹ ಹಾಗೂ ಚಿತ್ರರಂಗದವರ ಬೌದ್ಧಿಕ ದಾರಿದ್ರ್ಯಕ್ಕೆ ಜ್ವಲಂತ ಸಾಕ್ಷಿ.

    ಸಾಹಿತ್ಯ ಸಂಸ್ಕೃತಿ ಇತಿಹಾಸದ ಬಗ್ಗೆ ಗೌರವವಿರುವ ಯಾರೂ ಇಂತಹ ಕೆಲಸ ಮಾಡಲಾರರು. ನಮ್ಮ ನಾಡು ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿರಾಣಿ ಮುಂತಾದ ವೀರವನಿತೆಯರನ್ನು ಕಂಡಿದೆ. ಅವರೆಲ್ಲಾ ತಮ್ಮ ರಾಜ್ಯ ಕೋಶ ಅಧಿಕಾರ ಆಡಳಿತವನ್ನು ಉಳಿಸಿಕೊಳ್ಳ ಲೋಸುಗ ಹೋರಾಟ ನಡೆಸಿದವರು.

    ಆದರೆ ಓಬವ್ವ ದೊರೆ ಮದಕರಿ ನಾಯನಕ ಮೇಲಿನ ಭಕ್ತಿ ದೇಶಪ್ರೇಮದ ಸಲುವಾಗಿ ಶತ್ರುಗಳ ವಿರುದ್ಧ ಕೇವಲ ಒನಕೆ ಹಿಡಿದು ಹೋರಾಡಿದ ಛಲವಾದಿ ಜನಾಂಗದ ನಿಸ್ವಾರ್ಥ ಮಹಿಳೆಯೆಂಬುದು ವಿಶೇಷ. ಇಂತಹ ಪ್ರಾತಃ ಸ್ವರಣೀಯ ದಲಿತ ಮಹಿಳೆಯ ಹೆಸರನ್ನು ಕೇವಲ ಹಣ ಗಳಿಕೆಯ ದೃಷ್ಟಿಯಿಂದ ಆಕೆಯ ಜೀವನ ಚರಿತ್ರೆಗೆ ಸಂಬಂಧಪಡಹೆಸರನ್ನಿಟ್ಟು ಅಪಮೌಲ್ಯ ಗೊಳಿಸುವುದು ಖಂಡನೀಯ.

    ಈ ಇಂದೆ ಇಂತಹ ಹೀನಕೃತ್ಯಗಳು ನಡೆದಾಗಲೂ ಖಂಡಿಸಲಾಗಿದೆ. ನಂತರವೇ 'ಮಾಸ್ತಿ' ಎಂಬ ಚಿತ್ರ 'ಮಸ್ತಿ' ಯಾಗಿದ್ದು, 'ಕಿರಣ್ ಬೇಡಿ' ಕನ್ನಡದ ಕಿರಣ್ ಬೇಡಿಯಾಗಿದ್ದು, 'ವೀರಮಕರಿ' ಈ ಶತಮಾನದ ಬಾಲ ಅಂಟಿಸಿಕೊಂಡಿದ್ದು, ಹಕ್ಕಬುಕ್ಕ ಬದಲಾಗಿದ್ದು.

    ಇಷ್ಟಾದರೂ ಪದೇ ಪದೆ ಇಂತಹ ಪ್ರಸಂಗಗಳು ಪುನರಾರ್ತನೆಯಾಗುತ್ತಿರುವುದು ನಿರ್ಮಾಪಕ ನಿರ್ದೇಶಕರ ಸಾಂಸ್ಕೃತಿಕ ದಿವಾಳಿತನವೆನ್ನೋಣವೆ? ಈ ಕುರಿತಂತೆ ಈಗಾಗಲೆ ಒಬವ್ವೆಯ ವಂಶಸ್ಥರು ಹಾಗೂ ಛಲವಾದಿ ಸಂಸ್ಥಾನದ ಬಸವ ನಾಗಿದೇವ ಮಹಾಸ್ವಾಮಿಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

    ಚಿತ್ರತಂಡದವರಿಗೆ ಇದು ತಿಳಿದರೂ ಈಗಲೂ ಜಾಹೀರಾತಿನಲ್ಲಿ 'ಒನಕೆ ಓಬವ್ವ' ಹೆಸರನ್ನು ಮುಂದುವರೆಸಿರುವುದು ಆಕೆಯ ವಂಶಸ್ಥರಿಗೆ ಮಾಡಿದ ಅಪಮಾನ. ಹೆಸರಿನ ಅಡಿಬರಹವೇ ವಿಚಿತ್ರ! (ಸೈಲೆಂಟ್ ಇದ್ದರೆ ಅನಂತನಾಗ್, ವಾಯಿಲೆಂಟ್ ಅಂದರೆ ಶಂಕರನಾಗ್!?) ಕೂಡಲೆ ಹೆಸರನ್ನು ಬದಲಾವಣೆ ಮಾಡದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ.

    English summary
    The famous writer of Chitradurga B.L.Venu has taken strong objection to 'Onake Obavva' the Brave Woman of Chitradurga. The film title is historically important for people of Karnataka. Why the name of such a stalwart should be used for a remake film is the question raised in the past by writer B.L.Venu.
    Friday, July 15, 2011, 14:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X