For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್‌ ನಿರ್ಮಾಪಕರ ಸಂಘಕ್ಕೆ ಅರ್ಹ ಅಭ್ಯರ್ಥಿ ಅಂತೀರಾ?

  By Rajendra
  |
  ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ನವರಸ ನಾಯಕ ಜಗ್ಗೇಶ್ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇನ್ನೇನು ಜಗ್ಗೇಶ್ ಅವರ ಕೈಗೆ ಸಂಘದ ಲಗಾಮು ಸಿಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ನಿರ್ಮಾಪಕರ ವಲಯದಿಂದ ಜಗ್ಗೇಶ್ ವಿರುದ್ಧ ಒಂದು ಸಣ್ಣ ಅಪಸ್ವರವೂ ಮಿಡಿದಿದೆ.

  ಅದೇನೆಂದರೆ ಅವರು ನಿರ್ಮಾಪಕರ ಸಂಘಕ್ಕೆ ಸ್ಪರ್ಧಿಸುವುದು ಎಷ್ಟರ ಮಟ್ಟಿಗೆ ಸರಿ. ಜಗ್ಗೇಶ್ ಎಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನಿರ್ಮಾಪಕರ ಸಂಘಕ್ಕೆ ಸ್ಪರ್ಧಿಸಲು ಅವರಿಗೆ ಏನು ಅರ್ಹತೆ ಇದೆ ಎಂಬಿತ್ಯಾದಿ ಮಾತುಗಳು ಚಿನಕುರುಳಿ ಪಟಾಕಿಯಂತೆ ಸಿಡಿದಿವೆ. ಜಗ್ಗೇಶ್ ನಿರ್ಮಾಪಕರ ಸಂಘದ ಸದಸ್ಯರೇ ಅಲ್ಲ ಎಂಬ ಮಾತೂ ಕೇಳಿಬಂದಿದೆ.ಅದೆಲ್ಲಾ ಸರಿ ಹಾಗಾದರೆ ಜಗ್ಗೇಶ್ ಚಿತ್ರಗಳನ್ನೇ ನಿರ್ಮಿಸಿಲ್ಲವೇ?

  ಜಗ್ಗೇಶ್ ಈ ಹಿಂದೆ 'ಮೇಕಪ್' ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಇನ್ನೇನು ತೆರೆಕಾಣಲಿರುವ 'ಡಬಲ್ ಡೆಕ್ಕರ್' ಚಿತ್ರದ ನಿರ್ಮಾಪಕರಲ್ಲಿ ಅವರೂ ಒಬ್ಬರು. ಆದರೆ ನಿರ್ಮಾಪಕ ಪಟ್ಟಿಯಲ್ಲಿ ಜಗ್ಗೇಶ್ ಅವರ ಪತ್ನಿಯ ಹೆಸರಿದೆಯೇ ಹೊರತು ಅವರ ಹೆಸರು ಎಲ್ಲೂ ಇಲ್ಲವಂತೆ. ನಿರ್ಮಾಪಕರ ಸಂಘದ ಲೆಡ್ಜರ್‌ನಲ್ಲೂ ಪರಿಮಳಾ ಜಗ್ಗೇಶ್ ಎಂದು ದಾಖಲಾಗಿರುವುದು, ನಿರ್ಮಾಪಕರು ಹೊಸ ರಾಗ ಎಳೆಯಲು ಕಾರಣವಾಗಿದೆ.

  ಜಗ್ಗೇಶ್ ನಿರ್ಮಾಪಕರೇ ಅಲ್ಲ. ಅವರಿಗೇನು ಗೊತ್ತು ನಿರ್ಮಾಪಕರ ಕಷ್ಟ ಕೋಟಲೆಗಳು. ಅವರು ಅಧ್ಯಕ್ಷರಾದರೆ ನಮಗೆಷ್ಟರ ಮಟ್ಟಿಗೆ ನ್ಯಾಯ ಸಲ್ಲಿಸಲಿದ್ದಾರೆ ಎಂದು ನಿರ್ಮಾಪಕರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದಾರೆ. ಅಯ್ಯೋ ಬಿಡ್ರಿ ಹಾಗೆ ನೋಡಿದರೆ ನಮ್ಮ ದೇಶದಲ್ಲಿ ರಾಜಕೀಯಕ್ಕೆ, ಚುನಾವಣೆಗಳಿಗೆ ಅರ್ಹತೆ ಎಲ್ಲಿದೆ?

  ಆದರೆ ಈ ವಿಚಾರದಲ್ಲಿ ಜಗ್ಗೇಶ್ ಪರ್ವಾಗಿಲ್ಲ ಅನ್ನಿಸುತ್ತೆ. ನಿರ್ಮಾಪಕರ ಸಂಘದಲ್ಲಿಯಾರಿದ್ದಾರೆ, ಅಲ್ಲಿ ಏನು ನಡೆಯುತ್ತಿದೆ, ಪದಾಧಿಕಾರಿಗಲು ಯಾರು, ಅಧ್ಯಕ್ಷರ‌್ಯಾರು, ಉಪಾಧ್ಯಕ್ಷರ‌್ಯಾರು ಎಂಬ ವಿಚಾರಗಳು ಜನಕ್ಕೆ ಗೊತ್ತೇ ಆಗುವುದಿಲ್ಲ. At least ಜಗ್ಗೇಶ್ ಆಯ್ಕೆಯಾದರೆ ನಿರ್ಮಾಪಕರ ಸಂಘಕ್ಕೂ ಒಂದು ತರಹ ತಾರಾ ಮೌಲ್ಯ ವಾದರೂ ಬರುತ್ತದೆ. ಜಗ್ಗೇಶ್ ಇದಾರೆ ಎಂದ ಮೇಲೆ ಅಲ್ಲಿ ಕಾಮಿಡಿಗೂ ಕೊರತೆ ಇರಲ್ಲ. ಕಾಮಿಡಿ ಇದೆ ಎಂದ ಮೇಲೆ ಅರ್ಧ ಸಮಸ್ಯೆ ಪರಿಹಾರವಾಯ್ತು ಎಂದೇ ಅರ್ಥ! ಏನಂತೀರಾ?

  English summary
  Sources say that though Jaggesh is associated with many films, but he is not at all a producer because his wife Parimala Jaggesh or brother-in-law Srinivas either produces many of his films. For Jaggesh movie Double Decker producers are R Srinivasan, Parimala Jaggesh and Farzana Khan.
  Saturday, April 16, 2011, 16:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X