For Quick Alerts
  ALLOW NOTIFICATIONS  
  For Daily Alerts

  ವಿಮಾನದಲ್ಲಿ ಸರಸವಾಡುತ್ತಾ ಸಿಕ್ಕಿಬಿದ್ದ ರಣಬೀರ್, ಕತ್ರಿನಾ

  By Rajendra
  |

  ಬಾಲಿವುಡ್‌ನ ಪ್ರಣಯ ಪಕ್ಷಿಗಳು ಅಂತಾರಾಷ್ಟ್ರೀಯ ವಿಮಾನದಲ್ಲಿ ಕದ್ದು ಮುಚ್ಚಿ ಸರಸವಾಡುತ್ತಿರಬೇಕಾದರೆ ಸಿಕ್ಕಿಬಿದ್ದಿವೆ. ಈ ಜೋಡಿ ಹಕ್ಕಿಗಳು ಬೇರಾರು ಅಲ್ಲ ಬಾಲಿವುಡ್‌ನ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್. ಫ್ರಾಂಕ್‌ಫರ್ಟ್‌ನಿಂದ ಮುಂಬೈಗೆ ಬರುತ್ತಿದ್ದ LH 576 ವಿಮಾನದಲ್ಲಿ ಇಬ್ಬರೂ ಕದ್ದುಮುಚ್ಚಿ ಅಧರಾಮೃತ ಸವಿಯುತ್ತಿದ್ದ ವಿಷಯ ಜಗಜ್ಜಾಹೀರಾಗಿದೆ.

  ಅದೂ ಭಾನುವಾರ ರಾತ್ರಿ ಇವರಿಬ್ಬರೂ ತುಟಿಗೆ ತುಟಿ ಕೊಟ್ಟು ಚುಂಬಿಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ರಸವತ್ತಾಗಿ ಕಿವಿಗಳನ್ನು ತಣಿಸುತ್ತಿದೆ. ಪ್ರಥಮ ದರ್ಜೆ ಕ್ಯಾಬಿನ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ಜೋಡಿ ಹಕ್ಕಿಗಳು ಅಕ್ಕಪಕ್ಕದಲ್ಲಿ ಕುಳಿತು ರಾತ್ರಿಯಲ್ಲಾ ಒಬ್ಬರನ್ನೊಬ್ಬರು ತಬ್ಬಿಕೊಂಡೇ ಮಲಗಿದ್ದರು ಎನ್ನಲಾಗಿದೆ.

  ಕಣ್ಣಾರೆ ಕಂಡವರ ಪ್ರಕಾರ, ಇವರ ಕ್ಯಾಬಿನ್‌ನಲ್ಲಿ ಬಹಳಷ್ಟು ಯೂರೋಪ್ ಉದ್ಯಮಿಗಳೇ ಇದ್ದರಂತೆ. ಹಾಗಾಗಿ ಇವರನ್ನೂ ಯಾರೂ ಗುರುತಿಹಿಡಿಯಲಿಲ್ಲ. ಜೀನ್ಸ್ ಪ್ಯಾಂಟು ಮತ್ತು ಟಿ ಶರ್ಟ್ ತೊಟ್ಟಿದ್ದ ಕತ್ರಿನಾ ಮೇಕಪ್ ಕೂಡ ಮಾಡಿರಲಿಲ್ಲ. ಹಾಗಾಗಿ ಆಕೆ ಯಾರು ಎಂಬುದು ಅಲ್ಲಿನವರಿಗೆ ಗೊತ್ತಾಗಲಿಲ್ಲ ಎಂದಿದ್ದಾರೆ.

  ಅಕ್ಕಪಕ್ಕ ಯಾರಾದರೂ ಭಾರತೀಯರಿದ್ದಾರೆಯೇ ಎಂದು ಒಮ್ಮೆ ಕತ್ರಿನಾ ಕಣ್ಣಾಡಿಸಿದರಂತೆ. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಬಳಿಕ ರಣಬೀರ್‌ನನ್ನು ಅಪ್ಪಿಕೊಂಡರಂತೆ. ಬಳಿಕ ಮುಂಬೈ ತನಕ ಇವರಿಬ್ಬರ ಸರಸ ಸಲ್ಲಾಪ ಮುಂದುವರಿದಿತ್ತು ಎಂದಿದ್ದಾರೆ ಪ್ರತ್ಯಕ್ಷ ಕಂಡವರು.

  English summary
  Bollywood lovebirds actress Katrina Kaif and Ranbir Kapoor caught kissing each other in an international airlines. The sources says that they were returning from Frankfurt to Mumbai on Sunday night. Ranbir planting kisses on her cheeks bla bla bla.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X