»   » ನಟಿ ರಮ್ಯಾಗೆ ಫೋನ್ ಮೂಲಕ ಪುಂಡನ ಕಾಟ

ನಟಿ ರಮ್ಯಾಗೆ ಫೋನ್ ಮೂಲಕ ಪುಂಡನ ಕಾಟ

Subscribe to Filmibeat Kannada

ಸದಾ ಒಂದಿಲ್ಲೊಂದು ಸುದ್ದಿಯನ್ನು ರಮ್ಯಾ ಮಾಡುತ್ತ್ತಲೆ ಇರುತ್ತಾರೆ. ಮೊನ್ನೆಯಷ್ಟೆ ಟ್ವಿಟ್ಟರ್ ನಲ್ಲಿ ರಮ್ಯಾ ರಸ್ತೆ ಅಪಘಾತದ ಬಗ್ಗೆ ಹೇಳಿ ಅಭಿಮಾನಿಗಳನ್ನು ಪೇಚಿಗೆ ಸಿಲುಕಿಸಿದ್ದರು. ಈಗ ತನ್ನ ಮೊಬೈಲ್ ಗೆ ಪುಂಡನೊಬ್ಬ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ಹೊತ್ತಲ್ಲದ ಹೊತ್ತಿನಲ್ಲಿ ದೂರವಾಣಿ ಕರೆಗಳನ್ನು ಮಾಡುತ್ತಿದ್ದಾನೆ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಈ ಪುಂಡನ ಕಾಟಕ್ಕೆ ಬ್ರೇಕ್ ಹಾಕುವಂತೆ ಟ್ವಿಟ್ಟರ್ ನ ತನ್ನ ಅಭಿಮಾನಿ ಬಳಗವನ್ನು ರಮ್ಯಾ ಕೋರಿದ್ದಾರೆ. "ನನಗೆ ನಿಮ್ಮ ಸಹಾಯ ಬೇಕು. ಈ ದೂರವಾಣಿ ಸಂಖ್ಯೆಯ.....ಪುಂಡ ನನ್ನನ್ನು ಗೋಳಾಡಿಸುತ್ತಿದ್ದಾನೆ. ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡುತ್ತಿದ್ದಾನೆ. ಪೆದ್ದು ಪೆದ್ದಾಗಿ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ಅವನಿಗೆ ನೀವೇ ಬುದ್ಧಿ ಹೇಳಬೇಕು. ಅವನಿಗೆ ನಯ ವಿನಯತೆ ಬಗ್ಗೆ ಒಂದಲ್ಲ ಎರಡು ಪಾಠ ಕಲಿಸಿ " ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ನೀವ್ಯಾಕೆ ಆ ದೂರವಾಣಿ ಸಂಖ್ಯೆಯನ್ನು ಬ್ಲಾಕ್ ಮಾಡಬಾರದು ಎಂದು ಕೇಳಲಾಗಿ. ಒಂದು ವೇಳೆ ನನ್ನ ದೂರವಾಣಿ ಸಂಖ್ಯೆಯನ್ನು ಬದಲಾಯಿಸಿದರೆ ಹೇಗೋ ಮಾಡಿ ಆ ಸಂಖ್ಯೆಯನ್ನೂ ಮತ್ತೆ ಪತ್ತೆ ಹಚ್ಚುತ್ತಾನೆ ಆ ಭೂಪ. ಬ್ಲಾಕ್ ಮಾಡಿದರೂ ಪ್ರಯೋಜನವಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ನೀವೇ ಪರಿಹರಿಸಿ ಅವನಿಗೆ ತಕ್ಕ ಪಾಠ ಕಲಿಸಿ ಎಂದು ಅಭಿಮಾನಿಗಳನ್ನು ವಿನಂತಿಸಿಕೊಂಡಿದ್ದಾರೆ.

ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಸಮಸ್ಯೆಯನ್ನು ವೃಥಾ ದೊಡ್ಡದು ಮಾಡಿದಂತೆ ಆಗುತ್ತದೆ. ದೂರವಾಣಿ ಸಂಖ್ಯೆಯನ್ನು ನಿಮಗೆ ಕೊಟ್ಟಿದ್ದೇನೆ ಸಮಸ್ಯೆಯನ್ನು ನೀವೇ ಪರಿಹರಿಸಬೇಕು ಎಂದು ರಮ್ಯಾ ಟ್ವಿಟ್ಟರ್ ಅಭಿಮಾನಿ ಬಳಗವನ್ನು ಕೋರಿದ್ದಾರೆ. ಆ ಅನಾಮಿಕ ಪುಂಡನಿಗೆ ಅಭಿಮಾನಿಗಳು ಪಾಠ ಕಲಿಸುತ್ತಾರೋ ಇಲ್ಲವೋ ಕಾದು ನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada