Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಮ್ಯಾಗೆ ನಿರ್ಮಾಪಕರ ಸಂಘದಿಂದ ಎರಡು ದಿನ ಗಡುವು
'ದಂಡಂ ದಶಗುಣಂ' ಚಿತ್ರದ ವಿವಾದ ಮತ್ತಷ್ಟು ಬಿಗಡಾಯಿಸಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ರಮ್ಯಾ ವಿರುದ್ಧ ಕ್ರಮಕ್ಕೆ ಮುಂದಾಗಿದೆ. 'ದಂಡಂ ದಶಗುಣಂ; ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ರಮ್ಯಾ ಯಾಕೆ ಬರಲಿಲ್ಲ ಎಂಬ ಬಗ್ಗೆ 48 ಗಂಟೆಗಳಲ್ಲಿ ವಿವರಣೆ ನೀಡುವಂತೆ ಸಂಘ ಫರ್ಮಾನು ಹೊರಡಿಸಿದೆ.
ಚಿರಂಜೀವಿ ಸರ್ಜಾ ನಾಯಕನ ನಟನಾಗಿರುವ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ರಮ್ಯಾ ಕೈಕೊಟ್ಟಿದ್ದರು. ಇದರಿಂದ ಚಿತ್ರದ ನಿರ್ಮಾಪಕ ಎ ಗಣೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆಡಿಯೋ ಬಿಡುಗಡೆಗೆ ಬರದ ರಮ್ಯಾ ಶಾಪಿಂಗ್‌ನಲ್ಲಿ ಕಾಲ ಕಳೆಯುತ್ತಿದ್ದದ್ದು ನಿರ್ಮಾಪಕರ ಪಿತ್ತ ಕೆರಳಿಸಿತ್ತು.
ರಮ್ಯಾ ವರ್ತನೆ ಬಗ್ಗೆ ಬೇಸತ್ತ ನಿರ್ಮಾಪಕರು ಈ ವಿಷಯವನ್ನು ಫಿಲಂ ಚೇಂಬರ್ ಗಮನಕ್ಕೂ ತಂದರು. ಬಳಿಕ ರಮ್ಯಾ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದರು. ಅತ್ತ ನಿರ್ಮಾಪಕರ ಸಂಘ ಹಾಗೂ ಫಿಲಂ ಚೇಂಬರ್‌ನಲ್ಲಿ ಗಣೇಶ್ ಅವರು ಹಿಡಿತ ಹೊಂದಿದ್ದು ಅವರ ದೂರಿಗೆ ಎರಡೂ ಕಡೆಯಿಂದ ಬೆಂಬಲ ವ್ಯಕ್ತವಾಗಿದೆ.
ಗಣೇಶ್ ಅವರ ದೂರಿಗೆ ತಕ್ಷಣ ಸ್ಪಂದಿಸಿರುವ ನಿರ್ಮಾಪಕರ ಸಂಘ ಕೂಡಲೆ ಫಿಲಂ ಚೇಂಬರ್‌ನಲ್ಲಿ ಸಭೆ ಕರೆದು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದೆ. ಬಳಿಕ 'ದಂಡಂ ದಶಗುಣಂ' ಚಿತ್ರದ ಆಡಿಯೋ ಬಿಡುಗಡೆಗೆ ಯಾಕೆ ಬರಲಿಲ್ಲ ಎಂದು ವಿವರಣೆ ನೀಡುವಂತೆ ರಮ್ಯಾಗೆ ಎರಡು ದಿನಗಳ ಗಡುವು ನೀಡಿ ತೀರ್ಮಾನ ಹೊರಡಿಸಿದೆ.
ಈ ಎರಡು ದಿನಗಳಲ್ಲಿ ರಮ್ಯಾ ವಿವರಣೆ ನೀಡಲಿಲ್ಲ ಎಂದರೆ ಬಳಿಕ ಮತ್ತೊಮ್ಮೆ ಸಭೆ ಸೇರಿ ರಮ್ಯಾ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಈಗಾಗಲೆ 12 ಗಂಟೆಗಳು ಕಳೆದಿವೆ ರಮ್ಯಾರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆಗುತ್ತದೆ ಎಂಬ ಗ್ಯಾರಂಟಿಯೂ ಇಲ್ಲ.